August 31, 2025

ಭಟ್ಕಳದಲ್ಲಿ ಅನಾಥ ಭಿಕ್ಷುಕನ ಸಾವು, ವಿವರ ಪತ್ತೆಗೆ ಪೊಲೀಸ್ ಮನವಿ

ಭಟ್ಕಳ: ತಾಲೂಕಿನ ಹಳೆ ಬಸ್ ನಿಲ್ದಾಣದ ಅಂಗಡಿ ಮುಂಭಾಗದಲ್ಲಿ ಭಿಕ್ಷುಕನೋರ್ವ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಮೂಲದವನಾಗಿರಬಹುದೆಂದು ಶಂಕಿಸಲಾಗಿರುವ ಈ ವ್ಯಕ್ತಿ, ಕಳೆದ ಕೆಲವು ತಿಂಗಳಿAದ ಹಳೆಯ ಬಸ್ ನಿಲ್ದಾಣದ ಮೀನು ಮಾರುಕಟ್ಟೆ ಪಕ್ಕದಲ್ಲಿ ಚಿಂದಿ ಆಯುತ್ತಾ ವಾಸವಾಗಿದ್ದನು. ಅನಾರೋಗ್ಯದ ಹಿನ್ನೆಲೆಯಲ್ಲಿ ಅಂಗಡಿ ಕುಳಿತ ಸ್ಥಿತಿಯಲ್ಲೇ ಕೊನೆಯುಸಿರೆಳೆದಿದ್ದಾನೆ.

ಘಟನೆಯ ಬಳಿಕ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ, ಆಂಬುಲೆನ್ಸ್ ಚಾಲಕ ವಿನಾಯಕ ನಾಯ್ಕ ಹಾಗೂ ನಗರ ಪೊಲೀಸ್ ಠಾಣೆಯ ಎ.ಎಸ್.ಐ ರಾಜೇಶ್ ನಾಯ್ಕ ಅವರ ಸಹಕಾರದಿಂದ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತನ ಕುರಿತು ಯಾವುದೇ ಮಾಹಿತಿ ತಿಳಿದವರು ತಕ್ಷಣವೇ ಭಟ್ಕಳ ನಗರ ಪೊಲೀಸ್ ಠಾಣೆ (ದೂ.ಸಂ: 08385226333) ಅಥವಾ ಮೊಬೈಲ್ ಸಂಖ್ಯೆ 9480805269ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

About The Author

error: Content is protected !!