August 31, 2025

1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 17ನೇ ಪಟ್ಟಾಭಿಷೇಕ ವರ್ಧಂತಿ ಉತ್ಸವ ಸೆ.3 ರಂದು

ಹೊನ್ನಾವರ :ದಕ್ಷಿಣದ ಅಯೋಧ್ಯೆ ಎನ್ನುವ ಹಿರಿಮೆ ಹೊಂದಿರುವ ಶ್ರೀರಾಮ ಕ್ಷೇತ್ರ ಧರ್ಮಸ್ಥಳ ಮಹಾಸಂಸ್ಥಾನದ ಪೀಠಾಧೀಶರಾದ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 17ನೇ ಪಟ್ಟಾಭಿಷೇಕ ವರ್ಧಂತಿ ಉತ್ಸವ ಸೆ.3 ರಂದು ನಡೆಯಲಿದೆ ಎಂದು ಶ್ರೀ ರಾಮಕ್ಷೇತ್ರ ಸೇವಾ ಸಮಿತಿ ತಾಲೂಕ ಅಧ್ಯಕ್ಷ ವಾಮನ ನಾಯ್ಕ ಮಾಹಿತಿ ನೀಡಿದರು.

ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಜರುಗಿದ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಗುರುದೇವ ಮಠದಲ್ಲಿ ಬೆಳಗ್ಗೆ 11 ಗಂಟೆಯಿAದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ  17ನೇ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಶ್ರೀಗಳ ಭವ್ಯ ಮೆರವಣಿಗೆ ಬಳಿಕ ಶ್ರೀಗಳ ಪಾದ ಪೂಜೆ ನಡೆಯಲಿದೆ. ಮಠಕ್ಕೆ ಆಗಮಿಸುವ ಭಕ್ತರಿಗೆ ಉಪಾಹಾರ ವ್ಯವಸ್ಥೆಯಿದ್ದು, ಮಧ್ಯಾಹ್ನ ಪ್ರಸಾದ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ಕುಮಟಾದ ಕೊನಳ್ಳಿಯಲ್ಲಿ ನಡೆದ ಚಾತುರ್ಮಾಸಕ್ಕೆ 2ಲಕ್ಷ ಭಕ್ತರು ಭೇಟಿ ನೀಡಿ ಗುರುಗಳ ದರ್ಶನ ಪಡೆದಿದ್ದಾರೆ. ಅದೇ ರೀತಿ ಶ್ರೀಗಳ 17ನೇ ಪಟ್ಟಾಭಿಷೇಕ  ವರ್ಧಂತಿ ಉತ್ಸವ ಕಾರ್ಯಕ್ರಮಕ್ಕೂ  ಹೊನ್ನಾವರ ತಾಲೂಕಿನ ಜಿಲ್ಲೆಯ ನಾಮಧಾರಿ ಕುಲಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠಕ್ಕೆ ಆಗಮಿಸುವ ಮೂಲಕ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿ ಪಡೆದಿರುವ ಶ್ರೀರಾಮ ಕ್ಷೇತ್ರದ ನಿರ್ಮಾತ್ಮ ಆತ್ಮಾನಂದ ಸರಸ್ಕೃತಿ ಸ್ವಾಮೀಜಿಯವರ ಸಂಕಲ್ಪದAತೆ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರು ವಿವಿಧ ಶಾಖಾ ಮಠಗಳನ್ನು ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಆರಂಭಗೊAಡಿದೆ. ತಮ್ಮ ಪಟ್ಟಾಭಿಷೇಕದ ಶತಮಾನೋತ್ಸವ ಸಂದರ್ಭದಲ್ಲಿ ಯಶಸ್ವಿಯಾಗಿ ರಾಷ್ಟ್ರೀಯ ಧರ್ಮಸಂಸದ್ ಆಯೋಜಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದರು ಎಂದರು

 ಸಮಿತಿಯ ಕಾರ್ಯದರ್ಶಿ ಟಿ.ಟಿ.ನಾಯ್ಕ ಮಾತನಾಡಿ, ಈಗಾಗಲೇ ಕುಮಟಾ ತಾಲೂಕಿನ ಕೊನಳ್ಳಿಯಲ್ಲಿ ಕುಮಟಾ-ಹೊನ್ನಾವರದ ಭಕ್ತವೃಂದ ಸೇರಿ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ ಅದ್ದೂರಿಯಾಗಿ ನೆರವೇರಿಸಲಾಗಿದೆ. ನಾಮಧಾರಿ ಸಮಾಜದ ಎಲ್ಲರೂ ಜಾಗೃತರಾಗಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ದಿನನಿತ್ಯ ಸಾಂಸ್ಕೃತಿಕ, ಪೌರಾಣಿಕ ಕಾರ್ಯಕ್ರಮ ಜತೆಗೆ ಭಕ್ತಿಯ ಭಾವನೆ ಜಾಗೃತಗೊಳಿಸುವ ಕಾರ್ಯ  ಚಾತುರ್ಮಾಸದ ಮೂಲಕ ನೆರವೇರಿದೆ. ಎಲ್ಲಾ ಸಮಾಜದಿಂದಲೂ ಸಹ ಭಕ್ತರು ಆಗಮಿಸಿ ಶ್ರೀಗಳ ಆಶಿರ್ವಾದ ಪಡೆದಿರುವುದು ವಿಶೇಷವಾಗಿದೆ ಎಂದರು.

  ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಧ್ಯಕ್ಷ ಗೋವಿಂದ ನಾಯ್ಕ, ಉಪಾಧ್ಯಕ್ಷರಾದ ರಾಮಪ್ಪ ನಾಯ್ಕ, ಬಾಲಚಂದ್ರ ನಾಯ್ಕ, ಕೆ.ಆರ್.ನಾಯ್ಕ, ಕೃಷ್ಣ ಮಾರಿಮನೆ, ಕಾರ್ಯದರ್ಶಿ ಲಂಬೋಧರ ನಾಯ್ಕ, ಕೃಷ್ಣ ಮಾರಿಮನೆ ಲಂಬೊದರ ಟಿ ನಾಯ್ಕ, ವೆಂಕ್ರಟಮಣ ನಾಯ್ಕ, ಎಲ್. ಆರ್.ನಾಯ್ಕ, ಜಗದೀಶ ನಾಯ್ಕ, ಸಂತೋಷ ನಾಯ್ಕ, ಯಶ್ವಂತ ನಾಯ್ಕ, ರಾಘು ನಾಯ್ಕ, ಗಣೇಶ ನಾಯ್ಕ ಮತ್ತಿತರಿದ್ದರು.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!