September 3, 2025

ನೇತ್ರಾಣಿ ದ್ವೀಪದ ಹತ್ತಿರ ಬೋಟ್ ಮುಳುಗಡೆ:

ಭಟ್ಕಳ: ಸಮುದ್ರದ ಅಲೆಗಳು ಕ್ಷಣಾರ್ಧದಲ್ಲಿ ದುರಂತದ ನೆರಳನ್ನು ಮೂಡಿಸಿದ ಘಟನೆ ನೇತ್ರಾಣಿ ದ್ವೀಪದ ಹತ್ತಿರ ಆಘಾತ ಹುಟ್ಟಿಸಿತು. ಕಾಯ್ಕಿಣಿ ಗ್ರಾಮದ ಅಣ್ಣಪ್ಪ ಮೊಗೇರ ಅವರ ಮಾಲಿಕತ್ವದ “ಮಹಾ ಮುಡೇಶ್ವರ” ಪರ್ಷಿಯನ್ ಬೋಟ್ ನೀರು ನುಗ್ಗಿ ಮುಳುಗುವ ಸ್ಥಿತಿಗೆ ತಲುಪಿದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಯಿತು.

ಆದರೆ ಅದೃಷ್ಟವಶಾತ್ ಬೋಟ್‌ನಲ್ಲಿದ್ದ ೨೫ ಜನರು ಅಪಾಯದಿಂದ ಪಾರಾಗಿದ್ದಾರೆ. ಸಮೀಪದಲ್ಲಿದ್ದ ವೆಲ್ಲನ್ಕಿಣಿ ಮಚ್ಚೆದುರ್ಗ ಬೋಟ್ ಸಿಬ್ಬಂದಿ ತಕ್ಷಣವೇ ಧಾವಿಸಿ ಜೀವ ರಕ್ಷಣೆ ಮಾಡಿದ್ದಾರೆ. ಮೂಲಗಳ ಪ್ರಕಾರ, ಬೋಟ್ ಮುಳುಗುವ ಮುನ್ನವೇ ಕಂಟ್ರೋಲ್ ರೂಂಗೆ ತುರ್ತು ಮಾಹಿತಿ ರವಾನಿಸಲಾಗಿತ್ತು. ತಕ್ಷಣ ಕಾರ್ಯಾಚರಣೆ ಆರಂಭವಾದ ಪರಿಣಾಮ ಭಾರೀ ದುರಂತ ತಪ್ಪಿ ಎಲ್ಲರೂ ನಿಟ್ಟುಸಿರು ಬಿಟ್ಟಂತಾಗಿದೆ.

ಸಮುದ್ರದಲ್ಲಿ ಸಂಭವಿಸಿದ ಈ ಘಟನೆ ಭಟ್ಕಳದ ಮೀನುಗಾರರ ವಲಯದಲ್ಲಿ ಭೀತಿ, ಆತಂಕ ಹುಟ್ಟಿಸಿದೆ.

About The Author

error: Content is protected !!