
ಭಟ್ಕಳ: ರೈಲು ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಮರೆತು ಬಿಟ್ಟಿದ್ದ ಬ್ಯಾಗ್ ವನ್ನು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಸುರಕ್ಷಿತವಾಗಿ ಹಿಂತಿರುಗಿಸಿದ್ದ ಘಟನೆ ನಡೆದಿದೆ. ಆ.22ರಂದು ನಿಲ್ದಾಣದಲ್ಲಿ ಬಿಟ್ಟುಹೋದ ಚೀಲವನ್ನು ನಿಲ್ದಾಣ ನಿರೀಕ್ಷಕರು ಆರ್ಪಿಎಫ್ ವಶಕ್ಕೆ ಒಪ್ಪಿಸಿದ್ದರು. ಆ.31ರಂದು ಸಂಬAಧಿತ ಪ್ರಯಾಣಿಕರು ಬಂದು ತಮ್ಮದೇ ಎಂದು ಗುರುತಿಸಿದ ಬಳಿಕ ಪರಿಶೀಲನೆ ನಡೆಸಿ ದೃಢಪಡಿಸಲಾಯಿತು. ಬಳಿಕ ಕಾನ್ಸ್ಟೇಬಲ್ ಶುಭಂ ಸಿಂಗ್ ನಿಗದಿತ ಪ್ರಕ್ರಿಯೆ ಪೂರೈಸಿ ಬ್ಯಾಗ್ ವನ್ನು ಹಸ್ತಾಂತರಿಸಿದರು.
ಬ್ಯಾಗ್ ನಲ್ಲಿ ರೂ.18 ಸಾವಿರ ಮೌಲ್ಯದ ವಸ್ತುಗಳು ಇದ್ದವು ಎಂದು ಪ್ರಯಾಣಿಕರು ತಿಳಿಸಿದ್ದಾರೆ. ತಮ್ಮ ಬ್ಯಾಗ್ ಸುರಕ್ಷಿತವಾಗಿ ಹಿಂತಿರುಗಿಸಿಕೊAಡ ಅವರು ಆರ್ಪಿಎಫ್ ಸಿಬ್ಬಂದಿಗಳ ಕಾರ್ಯವನ್ನು ಮೆಚ್ಚಿ ಕೃತಜ್ಞತೆ ಸಲ್ಲಿಸಿದರು. ಪ್ರಯಾಣಿಕರ ಸುರಕ್ಷತೆ ನಮ್ಮ ಆದ್ಯತೆ ಕೊಂಕಣ ರೈಲ್ವೆ ಪ್ರಯಾಣಿಕರ ಸುರಕ್ಷತೆ ಮತ್ತು ಲಗೇಜ್ಗಳ ಕಾಳಜಿಗಾಗಿ ಕೊಂಕಣ ರೈಲ್ವೆ ನಿರಂತರ ಸೂಚನೆಗಳನ್ನು ನೀಡುತ್ತಿದೆ. ರೈಲು ಪ್ರಯಾಣದ ವೇಳೆ ಹಾಗೂ ನಿಲ್ದಾಣ ಆವರಣದಲ್ಲಿ ಎಚ್ಚರಿಕೆಯಿಂದ ಇರಲು ಮನವಿ ಮಾಡಲಾಗಿದೆ.
ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಅಧಿಕಾರಿ ಕೆ.ಸುಧಾ ಕೃಷ್ಣಮೂರ್ತಿ ಹೇಳಿದ್ದಾರೆ.
More Stories
ಬಹುಮುಖ ಪ್ರತಿಭೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿಗೆ ಒಲಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
“ವಿಶ್ವ ಜನಸಂಖ್ಯಾ ದಿನಾಚರಣೆ” ಮತ್ತು “ವಿಶ್ವ ಸ್ಕಿಜೋಪ್ರೇನಿಯಾ ದಿನ” ದ ಜನಜಾಗೃತಿ ಕಾರ್ಯಕ್ರಮ
ಶ್ರೀ ಭಾರತಿ ಕವಲಕ್ಕಿ ಯ ವಿದ್ಯಾರ್ಥಿಯ ಸಾಧನೆ