
ಭಟ್ಕಳ: ನಗರದಲ್ಲಿ ನಿಷೇಧಿತ ಇ-ಸಿಗರೇಟ್ ಮಾರಾಟ ಜಾಲ ಬೇರೂರಿಕೊಂಡಿರುವುದನ್ನು ಭಟ್ಕಳ ನಗರ ಠಾಣೆ ಪೊಲೀಸರು ಸೋಮವಾರ ರಾತ್ರಿ ಪತ್ತೆಹಚ್ಚಿದ್ದಾರೆ. ಹೂವಿನ ಚೌಕ್ ಹತ್ತಿರದ ಟೌನ್ ಸೆಂಟರ್ ನಲ್ಲಿರುವ ರಿಮ್ಸ್ ಅಂಗಡಿಗೆ ಭರ್ಜರಿ ದಾಳಿ ನಡೆಸಿ, ರೂ2.39 ಲಕ್ಷ ಮೌಲ್ಯದ ಇ-ಸಿಗರೇಟ್ ಹಾಗೂ ನಿಕೋಟಿನ್ ಲಿಕ್ವಿಡ್ ರಿಫಿಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಅAಗಡಿ ಮಾಲೀಕ ಮಕ್ಬುಲ್ (ಮುಗ್ದುಂಕಾಲೋನಿ ನಿವಾಸಿ) ಬಂಧಿತನಾಗಿದ್ದು, ಪರವಾನಿಗೆ ಇಲ್ಲದೇ 51 ಇ-ಸಿಗರೇಟ್ ಮತ್ತು 154 ನಿಕೋಟಿನ್ ಲಿಕ್ವಿಡ್ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದುದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಇ-ಸಿಗರೇಟ್ ನಿಷೇಧಿಸಿರುವ ಸರ್ಕಾರದ ಆದೇಶವನ್ನು ಧಿಕ್ಕರಿಸಿ, ಮಾರಾಟ ನಡೆಯುತ್ತಿದ್ದ ಅಂಶವೇ ಈ ದಾಳಿಯಿಂದ ಬೆಳಕಿಗೆ ಬಂದಿದೆ. ಪೊಲೀಸರು ಸಮಯಕ್ಕೆ ಕ್ರಮ ಕೈಗೊಂಡಿದ್ದಾರೆ,

ಈ ಕಾರ್ಯಾಚರಣೆ ಜಿಲ್ಲಾ ಎಸ್‌ಪಿ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್‌ಪಿಗಳು ಕೃಷ್ಣಮೂರ್ತಿ.ಜಿ, ಜಗದೀಶ ನಾಯ್ಕ, ಡಿಎಸ್ಪಿ ಮಹೇಶ್ ಎಂ.ಕೆ. ಅವರ ಮಾರ್ಗದರ್ಶನದಲ್ಲಿ,ನಗರ ಠಾಣೆ ಇನ್ಸ್ಪೆಕ್ಟರ್ ದಿವಾಕರ ಪಿ.ಎಮ್. ನೇತೃತ್ವದಲ್ಲಿ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ನವೀನ್ ಎಸ್. ನಾಯ್ಕ, ಪಿಎಸ್‌ಐ ತಿಮ್ಮಪ್ಪ ಎಸ್. ಹಾಗೂ ಸಿಬ್ಬಂದಿ ದಿನೇಶ್ ನಾಯ್ಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಜಗದೀಶ ನಾಯ್ಕ, ಕೃಷ್ಣಾ ಎನ್.ಜಿ, ಮಲ್ಲಿಕಾರ್ಜುನ ಉಟಗಿ, ಕಿರಣ ಪಾಟೀಲ್, ಲೊಕೇಶ ಕತ್ತಿ, ರೇವಣಸಿದ್ದಪ್ಪ ಮಾಗಿ, ವಿಶ್ವನಾಥ ಬೇವಿನಗಿಡ, ಅಮಗೋತ ಮಹೇಶ ನಾಯ್ಕ ಪಾಲ್ಗೊಂಡಿದ್ದರು.
More Stories
ಬಹುಮುಖ ಪ್ರತಿಭೆಯ ಶಿಕ್ಷಕ ಶ್ರೀಧರ ಶೇಟ್ ಶಿರಾಲಿಗೆ ಒಲಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
“ವಿಶ್ವ ಜನಸಂಖ್ಯಾ ದಿನಾಚರಣೆ” ಮತ್ತು “ವಿಶ್ವ ಸ್ಕಿಜೋಪ್ರೇನಿಯಾ ದಿನ” ದ ಜನಜಾಗೃತಿ ಕಾರ್ಯಕ್ರಮ
ಶ್ರೀ ಭಾರತಿ ಕವಲಕ್ಕಿ ಯ ವಿದ್ಯಾರ್ಥಿಯ ಸಾಧನೆ