September 3, 2025

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರ್ ಎನ್ ಎಸ್ ಸಾಧನೆ

ಭಟ್ಕಳ : ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜು ಅದ್ವಿತೀಯ ಸಾಧನೆ ಮಾಡಿದೆ. ಯೋಗ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಧನರಾಜ್ ನಾಯ್ಕ ಪ್ರಥಮ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಅಪೂರ್ವ ನಾಯ್ಕ ಪ್ರಥಮ ಸ್ಥಾನ, ಚೆಸ್ ನಲ್ಲಿ ಕಾವ್ಯ ನಾಯ್ಕ ಪ್ರಥಮ ಸ್ಥಾನ, ಕರಾಟೆಯಲ್ಲಿ ಶ್ರೀರಕ್ಷಾ ನಾಯ್ಕ ಪ್ರಥಮ ಸ್ಥಾನ, ಸ್ವಿಮ್ಮಿಂಗ್ – ಬಾಲಕರ ವಿಭಾಗದಲ್ಲಿ ರೋಹಿತ್ ದ್ವಿತೀಯ ಸ್ಥಾನ ಹಾಗೂ ಬಾಲಕಿಯರ ವಿಭಾಗದಲ್ಲಿ ಯೋಗಿತಾ ಮುರುಡೇಶ್ವರ ಮತ್ತು ವನಶ್ರೀ ಮೇಸ್ತ ಪ್ರಥಮ ಸ್ಥಾನ, ಪೋಲ್ ವಾಲ್ಟ್ – ಚೈತ್ರ ನಾಯ್ಕ ಪ್ರಥಮ ಸ್ಥಾನ, ಅನುಪಮ ದೇವಡಿಗ ದ್ವಿತೀಯ ಸ್ಥಾನ, ಕ್ರಾಸ್ ಕಂಟ್ರಿ- ವಿದ್ಯಾ ದೇವಾಡಿಗ ಪ್ರಥಮ ಸ್ಥಾನ, 100ಮೀ ರನ್ನಿಂಗ್- ಸಿದ್ವಿನ್ ತೃತೀಯ ಸ್ಥಾನ, 400ಮೀ ರನ್ನಿಂಗ್- ವಿಕಾಸ್ ತೃತೀಯ ಸ್ಥಾನ, 1500ಮೀ ರನ್ನಿಂಗ್-ದೀಕ್ಷಿತಾ ತೃತೀಯ ಸ್ಥಾನ, 3000ಮೀ ರನ್ನಿಂಗ್- ವಿದ್ಯಾ ದೇವಾಡಿಗ ತೃತೀಯ ಸ್ಥಾನ, 3000ಮೀ ವಾಕಿಂಗ್- ಆರತಿ ದೇವಡಿಗ ಪ್ರಥಮ ಸ್ಥಾನ, 100ಮೀ ಹರ್ಡಲ್ಸ್- ತೇಜಸ್ವಿ ಹರಿಕಾಂತ್ ದ್ವಿತೀಯ ಸ್ಥಾನ, 400ಮೀ ಹರ್ಡಲ್ಸ್- ಬಾಲಕಿಯರ ವಿಭಾಗದಲ್ಲಿ ತೇಜಸ್ವಿ ಹರಿಕಾಂತ ದ್ವಿತೀಯ ಸ್ಥಾನ ಮತ್ತು ಬಾಲಕರ ವಿಭಾಗದಲ್ಲಿ ತರುಣ್ ನಾಯ್ಕ ತೃತೀಯ ಸ್ಥಾನ, ಲಾಂಗ್ ಜಂಪ್- ಬಾಲಕಿಯರ ವಿಭಾಗದಲ್ಲಿ ಅನುಪಮಾ ದೇವಾಡಿಗ ತೃತೀಯ ಸ್ಥಾನ ಹಾಗೂ ಬಾಲಕರ ವಿಭಾಗದಲ್ಲಿ ಸಿದ್ವಿನ್ ದೇವಾಡಿಗ ತೃಪ್ತಿಯ ಸ್ಥಾನ, ಟ್ರಿಪಲ್ ಜಂಪ್- ಅನುಪಮಾ ದೇವಾಡಿಗ ತೃತೀಯ, ಶಾಟ್‌ಪುಟ್- ದೀಕ್ಷಾ ನಾಯ್ಕ ದ್ವಿತೀಯ ಸ್ಥಾನ, ಹ್ಯಾಮರ್ ಥ್ರೋ- ಸ್ಪಂದನಾ ನಾಯ್ಕ ದ್ವಿತೀಯ ಸ್ಥಾನ, 4್ಠ100ಮೀ ರಿಲೇ- ಬಾಲಕ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನ, 4್ಠ400ಮೀ ರಿಲೇ- ಬಾಲಕ ತಂಡ ತೃತೀಯ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನ, ಕಬಡ್ಡಿ, ಖೋ ಖೋ, ಥ್ರೋ ಬಾಲ್, ಬಿ.ಬಿ.ಟಿ ಯಲ್ಲಿ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ವಿಶೇಷವಾಗಿ ಕು. ಚೈತನ್ಯಾ ನಾಯ್ಕ 100 ಮೀಟರ್ ರನ್ನಿಂಗ್, 200 ಮೀಟರ್ ರನ್ನಿಂಗ್ ಹಾಗೂ ಲಾಂಗ್ ಜಂಪ್ ನಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ತನ್ನ ಮುಡಿಗೆರಿಸಿಕೊಂಡಿದ್ದಾಳೆ.

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ-ಬೋಧಕೇತರ ಸಿಬ್ಬಂದಿಗಳು ಮತ್ತು ಪಾಲಕರು ಅಭಿನಂದಿಸಿದ್ದಾರೆ.

About The Author

error: Content is protected !!