
ಉಡುಪಿ : ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ(PMFME)ಯೋಜನೆಯ ಅರಿವು ಮೂಡಿಸುವ ಕಾರ್ಯಕ್ರಮ. ಅರಿವು ಮೂಡಿಸುವಿಕೆ ಕಾರ್ಯಕ್ರಮವನ್ನು ದಿನಾಂಕ:02/09/2025 ರಂದು ಡಾ.ವಿ.ಎಸ್. ಆಚಾರ್ಯ ಸಭಾಂಗಣ, ಜಿಲ್ಲಾ ಪಂಚಾಯತ್, ಉಡುಪಿ ಇಲ್ಲಿ ಆಯೋಜಿಸಲಾಯಿತು. . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಯಶಪಾಲ್ ಸುವರ್ಣ- ಮಾನ್ಯ ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ ಇವರು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಇದೊಂದು ಉತ್ತಮ ಯೋಜನೆಯಾಗಿದ್ದು ಬ್ಯಾಂಕ್ ಅಧಿಕಾರಿಗಳು ಹಾಗೂ ಇಲಾಖೆಯ ಸಮನ್ವಯದೊಂದಿಗೆ ಈ ಯೋಜನೆಯ ಸಮರ್ಪಕವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಬೇಕೆಂದು ತಿಳಿಸಿದರು.
ಶ್ರೀ ಪ್ರಭಾಕರ ಪೂಜಾರಿ- ಅಧ್ಯಕ್ಷರು ನಗರ ಸಭೆ ಹಾಗೂ ಶ್ರೀ ದಿನಕರ ಹೇರೂರು- ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ ಇವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಲೀಡ್ ಬ್ಯಾಂಕ್ ಹಾಗೂ ವಿವಿಧ ಬ್ಯಾಂಕಿನ ಅಧಿಕಾರಿಗಳು ಭಾಗವಹಿಸಿ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಹಾಗೂ ರಫ್ತ್ತು ನಿಗಮ ನಿಯಮಿತ ಅಧಿಕಾರಿಗಳಾದ ಶ್ರೀ ಅರವಿಂದ ಖರೆ ಹಾಗೂ ಶ್ರೀಮತಿ ರಾಧಾರವರು ಭಾಗವಹಿಸಿ ಆಹಾರ ಉದ್ದಿಮೆ ಹಾಗೂ ಯೋಜನೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಡಾ.ಎ.ಎ. ಫಜಲ್- ನಿವೃತ್ತ ವಿಜ್ಞಾನಿಗಳು ಹಾಗೂ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಇವರು ಹಲಸು, ಬಾಳೆ ಹಾಗೂ ವಿವಿಧ ಹಣ್ಣು ತರಕಾರಿಗಳು, ಸಂಸ್ಕರಣೆ ಮತ್ತು ಈ ಯೋಜನೆಯಡಿ ಮಾಡಬಹುದಾದ ಆಹಾರ ಸಂಸ್ಕರಣೆ ಕುರಿತು ಮಾಹಿತಿ ನೀಡಿದರು.
ಈ ಯೋಜನೆಯಡಿಲ್ಲಿ ಕೇಂದ್ರ ಹಾಗೂ ರಾಜ್ಯದಿಂದ 50% ರಷ್ಟು ಸಹಾಯಧನ ಗರಿಷ್ಠ ರೂ 15 ಲಕ್ಷ ಮಿತಿಯೊಂದಿಗೆ ಸಾಲ ಸೌಲಭ್ಯ ದೊರೆಯುತ್ತದೆ. ಹೊಸ ಮತ್ತು ಜಾಲ್ತಿಯಲ್ಲಿರುವ ಆಹಾರ ಸಂಸ್ಕರಣ ಘಟಕಗಳಿಗೆ ಸಾಲ ನೀಡಲಾಗುತ್ತದೆ. ಸುಮಾರು 240 ಕ್ಕೂ ಹೆಚ್ಚು ಮಂದಿ ಆಹಾರ ಉದ್ದಿಮೆದಾರರು ಹಾಗೂ ವಿವಿಧ ತಾಲೂಕಿನ ರೈತ ಫಲಾನುಭವಿಗಳು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದರು. ಕೃಷಿ ಇಲಾಖೆಯ ಅಧಿಕಾರಿ/ಸಿಬ್ಬಂದಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ ಶ್ರೀರಾಮ್ ಹೆಗಡೆ- ಕೃಷಿ ಇಲಾಖೆಯ ಅಧಿಕಾರಿಯವರು ನೆರವೇರಿಸಿದರು.
ಶ್ರೀ ಸತೀಶ್ ಬಿ- ಸಹಾಯಕ ಕೃಷಿ ನಿರ್ದೇಶಕರು(ಕೇಂದ್ರ) ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಚಂದ್ರಶೇಖರ್ ನಾಯ್ಕ- ಉಪ ಕೃಷಿ ನಿರ್ದೇಶಕರು ಕೃಷಿ ಇಲಾಖೆ ಉಡುಪಿ ಇವರು ಸ್ವಾಗತಿಸಿದರು, ಯೋಜನೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಬಹುದು. ಶ್ರೀ ಸೂರಜ್ ಶೆಟ್ಟಿ: ಮೊಬೈಲ್ ಸಂಖ್ಯೆ: 9019075051
More Stories
ರಾಮಾಯಣದಲ್ಲಿ ಭಾವನಾತ್ಮಕ ಸಂಬAಧಗಳ ನವಿರಾದ ವಿವರಣೆ.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾಬೆಟ್ಟು 40 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ
ಶ್ರೀ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ವತಿಯಿಂದ ಜಮದಗ್ನಿ ಶೀನ ನಾಯ್ಕ್ ಅವರನ್ನು ಯಕ್ಷಗಾನ ಸೇವೆಗಾಗಿ ಸನ್ಮಾನ