ಬೈಂದೂರು : ಅಂಬೇಡ್ಕರ್ ಮಹಿಳಾ ಸಂಘ ( ರಿ ) ವತಿಯಿಂದ ಅಕ್ಷರ ಬೆಳಕು ಕಾರ್ಯಕ್ರಮದಲ್ಲಿ ರತ್ತು ಬಾಯಿ ಜನತಾ ಪ್ರೌಢಶಾಲೆಯ 4 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕಾರ ಕಾರ್ಯಕ್ರಮ ನಡೆಯಿತು. ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಇಲ್ಲಿನ ವೈದ್ಯೆ ಡಾ ನಿವೇದಿತಾ ಮಕ್ಕಳಿಗೆ ಆರೋಗ್ಯ ಮಾಹಿತಿಯನ್ನು ನೀಡಿದರು.
ಅಂಬೇಡ್ಕರ್ ಮಹಿಳಾ ಸಂಘ ( ರಿ )ಬೈಂದೂರು ಅಧ್ಯಕ್ಷೆ ಸುಶೀಲ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ದ.ಸಂ.ಸ. (ರಿ ) ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಆನಂದ್ ಮದ್ದೋಡಿ, ತಾಲೂಕು ಸಂಚಾಲಕರಾದ ಶಿವರಾಜ್ ಬೈಂದೂರು, ವಿನಯ , ಜಿಲ್ಲಾ ಸಮಿತಿ ಸದಸ್ಯರಾದ ಗೀತಾ ಸುರೇಶ್, ಸುರೇಶ್ ಕುಮಾರ್ ಬಾರ್ಕೂರು, ಮಹಿಳಾ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು.
ವರದಿ : ಸುಶಾಂತ್ ಬೈಂದುರು.

More Stories
ಮಹತೋಭಾರ ಸೇನೇಶ್ವರ ದೇವಸ್ಥಾನ ಉತ್ಸವ ಮೂರ್ತಿ ವನಭೋಜನ
ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಸಹರ್ಷರಿಗೆ ಶಾಲೆಯಲ್ಲಿ ಭವ್ಯ ಸ್ವಾಗತ
ವತ್ತಿನಕಟ್ಟೆ ಮಹಾಸತಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮ