ಯೋಜನೆಯ ಅನುಷ್ಠಾನದ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಒಕ್ಕೊರಲ ನಿರ್ಣಯ: ಮಾಹಿತಿ ನೀಡಲು ಬಂದ ಕೆ.ಪಿ.ಸಿ.ಅದಿಕಾರಿಗಳು ತರಾಟೆಗೆ.
ಹೊನ್ನಾವರ : ಪರಿಸರ ಸೂಕ್ಷ್ಮ ಪಶ್ಚಿಮಘಟ್ಟ ಪ್ರದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ಭೂಮಿಯ ಅಗೆತ,ಸ್ಫೋಟಕಗಳ ಬಳಕೆ, ಅನಗತ್ಯ, ಅವೈಜ್ಞಾನಿಕ ಕಾಮಗಾರಿಗಳು ಮತ್ತು ಅರಣ್ಯ ನಾಶವು, ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಗುಡ್ಡದ ಅಂಚಿನಲ್ಲಿರುವ ಅದರಲ್ಲೂ ತಲಕಳಲೆ ಜಲಾಶಯದ ಕೆಳಗೆ 7ಕಿಲೋಮೀಟರ್ ಉದ್ದದ ಸುರಂಗ ಮಾರ್ಗ ನಿರ್ಮಿಸುವದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಈ ಬಗ್ಗೆ ವಿಜ್ಞಾನಿಗಳು, ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ ಮೇಲೂ ಇತ್ತೀಚಿನ ವೈನಾಡು ದುರಂತ ಹಾಗೂ ನಮ್ಮ ಜಿಲ್ಲೆಯಲ್ಲಿ ನಡೆದಿರುವ ಗುಡ್ಡ ಕುಸಿತದ ಘಟನೆಗಳ ನಂತರವೂ ಅಧಿಕಾರಿಗಳು ಸರ್ಕಾರಗಳು ಜಾಣ ಕುರುಡರಂತೆ ಅನಗತ್ಯ ಅವೈಜ್ಞಾನಿಕ ಯೋಜನೆ ಗಳನ್ನು ಜನರಮೇಲೆ ಹೇರಲು ಹೊರಟಿರುವದು ಯಾವ ಪುರುಷಾರ್ಥಕ್ಕೆ. ಇದು ಮೂರ್ಖತನದ ಪರಮಾವದಿಯಾಗಿದೆ .ಕೆ.ಪಿ.ಸಿಯ ಈ ಹಿಂದಿನ ವಿವಿಧ ಯೋಜನೆಯಿಂದ ನಿರಾಶ್ರಿತರಾದವರ ಕುರಿತು ಮತ್ತು ನೆರೆ ಸಂತ್ರಸ್ತರು ಪಡುತ್ತಿರುವ ಬವಣೆಯ ಕುರಿತು ನೀವು ಎಂದಾದರೂ ಚಿಂತಿಸಿದ್ದೀರಾ ? ನಿಮ್ಮ ಲಾಭಕ್ಕೆ ನೀವು ಶರಾವತಿಯಲ್ಲಿ ಆಗಾಗ್ಗೆ ಕ್ರತಕ ನೆರೆ ಸ್ರಷ್ಠಿಸಿ ತಗ್ಗು ಪ್ರದೇಶದ ಜನರಿಗೆ ಹಿಂಸೆ ನೀಡುತ್ತಿರುವುದು ಸಾಲದೇ? ಹೀಗೆ ನಾಗರಿಕರು ಕೇಳಿದ ಪುಂಕಾನು ಪುಂಕ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಕೆ.ಪಿ.ಸಿ.ಯ ಅಧಿಕಾರಿಗಳು ತಡಕಾಡುವಂತಾಯಿತು.
ಹೆರಂಗಡಿ ಗ್ರಾಮ ಪಂಚಾಯಿತಿಯ ಹೆಚ್ಚಿನ ಪ್ರದೇಶವು ಪಶ್ಚಿಮ ಘಟ್ಟದ ಅಂಚಿನ ತಗ್ಗು ಪ್ರದೇಶದಲ್ಲಿದೆ. ಬಹುಪಾಲು ಅರಣ್ಯ ವಿರುವ, ಜೀವನೋಪಾಯಕ್ಕೆ ಇಲ್ಲಿನ ಜನರು ಕ್ರಷಿ, ತೋಟಗಾರಿಕೆ ಯನ್ನು ಅವಲಂಬಿಸಿದ್ದಾರೆ.ಇಲ್ಲಿ ಹರಿಯುವ ಶರಾವತಿ ನದಿಯಿಂದ ಏತನೀರಾವರಿಯ ಮೂಲಕ ರೈತರ ಜಮೀನಿಗೆ ನೀರುಣಿಸಲಾಗುತ್ತಿದೆ. ಕುಡಿಯುವ ನೀರಿಗೂ ಜನರು ಶರಾವತಿಯನ್ನೇ ಅವಲಂಬಿಸಿದ್ದು.ಈ ನಡುವೆ ಶರಾವತಿ ನದಿನೀರಿಗೆ ಬೇಸಿಗೆಯಲ್ಲಿ ಅಳ್ಳಂಕಿಯವರೆಗೆ ಸಮುದ್ರದ ಉಪ್ಪುನೀರು ಸೇರತ್ತಿದ್ದು ಜನರು ಸಂಕಷ್ಟಪಡುತ್ತಿದ್ದಾರೆ. ಇತ್ತೀಚೆಗೆ ಬೇರೆ,ಬೇರೆ ತಾಲೂಕುಗಳಿಗೂ ಕುಡಿಯುವ ನೀರಿನ ಯೋಜನೆಗಳಿಗೆ ಶರಾವತಿಯ ನೀರನ್ನು ಸಾಗಿಸುವ ಪ್ರಮಾಣ ಹೆಚ್ಚಳ ವಾಗುತ್ತಿದೆ.ಇದರಿಂದ ಬೇಸಿಗೆಯಲ್ಲಿ ಸಮುದ್ರದ ಉಪ್ಪುನೀರು ಇನ್ನಷ್ಟು ಪ್ರದೇಶಕ್ಕೆ ಸೇರುವ ಆತಂಕ ಎದುರಾಗಿದೆ. ಅಮೂಲ್ಯವಾದ ಮಳೆಕಾಡು, ಜೀವ ವೈವಿಧ್ಯಗಳ ಸುರಕ್ಷತೆಯ ಹಿತದೃಷ್ಟಿಯಿಂದ ಮತ್ತು ಭೂಕುಸಿತ,ಗುಡ್ಡ ಕುಸಿತದ ಅಪಾಯದಿಂದ ಮುಂದಿನ ಪೀಳಿಗೆಯನ್ನು ಉಳಿಸಿಕೊಳ್ಳುವ ಹಿತದೃಷ್ಟಿಯಿಂದ ಉದ್ದೇಶಿತ ಶರಾವತಿ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆಯ ಅನುಷ್ಠಾನವನ್ನು ಕೈಬಿಡುವಂತೆ ಸರಕಾರವನ್ನು ಮತ್ತು ಕರ್ನಾಟಕ ವಿದ್ಯುತ ನಿಗಮವನ್ನು ಕೋರಬೇಕು ಮತ್ತು ಸೆ.18ರ ಸಾರ್ವಜನಿಕ ಅಹವಾಲು ಸಭೆಗೆ ಯೋಜನೆಯ ಪರಿಸರ ಮೌಲ್ಯಮಾಪನ ವರದಿಯಲ್ಲಿನ ಪ್ರಮುಖ 14 ಅಂಶಗಳಿಗೆ ಗ್ರಾಮ ಸಭಾ ಸದಸ್ಯ ಚಂದ್ರಕಾAತ ಕೊಚರೇಕರ ಅವರು ಮಂಡಿಸಿ ಇಂದಿನ ಸಭೆ ಒಪ್ಪಿದ ಎಲ್ಲ 14 ಆಕ್ಷೇಪಣೆಗಳನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರೇ ಖುದ್ದಾಗಿ ದಾಖಲಿಸಬೇಕೆಂದು ಸಭೆ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿತು.
ಶರಾವತಿ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆಯನ್ನು ಅನುಷ್ಠಾನ ಮಾಡಬಾರದು .ಈ ಯೋಜನೆಗೆ ನಮ್ಮ ಭಾಗದ ಜನರವಿರೋದವಿದೆ.ಯೋಜನಾ ವರದಿಗೆ ಚಂದ್ರಕಾAತ ಕೊಚರೇಕರ ಅವರು ಮಂಡಿಸಿದ 14ಅಂಶಗಳ ಆಕ್ಷೇಪಣೆಯನ್ನು ಮಾಲಿನ್ಯನಿಯಂತ್ರಣಮAಡಳಿಗೆ ದಾಖಲಿಸುವ ಪ್ರಸ್ತಾವಸಹಿತ ಯೋಜನೆಯನ್ನು ವಿರೋದಿಸುವ ನಿರ್ಣಯವನ್ನು ಗ್ರಾ.ಪಂ.ಸದಸ್ಯರು ಗಳಾದ ವಿನಾಯಕ ಬಿ.ನಾಯ್ಕ ಮೂಡ್ಕಣಿ,ಸುರೇಶ ಜಿ.ನಾಯ್ಕ ತುಂಬೊಳ್ಳಿ ಮತ್ತಿತರರು ಅನಮೋದಿಸಿದರು. ಎಲ್ಲರೂ ಕೈ ಎತ್ತುವ ಮೂಲಕ ನಿರ್ಣಯವನ್ನು ಬೆಂಬಲಿಸುವ ಮೂಲಕ ಸರ್ವಾನುಮತದಿಂದ ನಿರ್ಣಯವನ್ನು ಸಭೆ ಅಂಗೀಕರಿಸಿತು. ನಿರ್ಣಯದಲ್ಲಿ ಉದ್ದೇಶಿತ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆಯು ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಪ್ರದೇಶದ ಶರಾವತಿಕಣಿವೆ ಪ್ರದೇಶದಲ್ಲಿ ಅದರಲ್ಲೂ ಅಳಿವಿನಂಚಿನಲ್ಲಿರುವ ಅಪರೂಪದ ಸಿಂಗಳಿಕ ಅಭಯಾರಣ್ಯದಲ್ಲಿ 7 ಕಿಲೋಮೀಟರ್ ಉದ್ದದ ಸುರಂಗ ಕೊರೆದು (50ರಿಂದ430 ಚದರ ಮೀಟರ್ ಆಳದವರೆಗೆ) ಸುರಂಗದ ಅಡಿಯಲ್ಲಿ ಪೈಪಲೈನ ಅಳವಡಿಕೆ ಮಾಡಿ ಶರಾವತಿ ನದಿ ನೀರನ್ನು ಗೇರುಸೊಪ್ಪೆಯಿಂದ ಎತ್ತರದ ತಲಕಳಲೆಗೆ ಸಾಗಿಸಿ ಅಲ್ಲಿಯ ಭೂಗರ್ಭ ದಲ್ಲಿ ಸುರಂಗ ಕೊರೆದು ಜಲವಿದ್ಯುತ ಸ್ಥಾವರ ನಿರ್ಮಾಣ ಮಾಡುವ ಉದ್ದೇಶಿತ 2000 ಮೆಗಾವಾಟ್ ವಿದ್ಯುತ ಉತ್ಪಾದಿಸುವ ಯೋಜನೆಯು ತೀರ ಅವೈಜ್ಞಾನಿಕವಾದ್ದು ಮತ್ತು ಭೂಕುಸಿತದ ಅಪಾಯ ಇರುವ, ಅರಣ್ಯನಾಶ ಮಾಡುವ ಪರಿಸರ ವಿರೋದಿ ಯೋಜನೆಯಾಗಿದೆ.
ಈ ಯೋಜನೆಯ ಅನುಷ್ಠಾನದಿಂದ ಹೇರಳ ಅರಣ್ಯನಾಶವಾಗಲಿದ್ದು, ಜೀವ ಸಂಕುಲಗಳು,ಸಿAಗಳಿಕ ಸಹಿತ ವಿವಿಧ ವನ್ಯಜೀವಿಗಳ, ಅಪರೂಪದ ಸಸ್ಯ ಪ್ರಭೇದಗಳ ವಿನಾಶಕ್ಕೆ ಕಾರಣವಾಗಲಿದೆ ಎನ್ನುವದು ವಿವಿಧ ಅದ್ಯಯನಗಳಿಂದ ,ಮತ್ತು ವಿಜ್ಞಾನಿಗಳು,ತಜ್ಞರು ಎಚ್ಚರಿಸಿರುವ ವಿವಿದ ಪರಿಸರ ಸೂಕ್ಷ್ಮ ವಿಚಾರಗಳು ಮತ್ತು ಇತ್ತೀಚಿನ ವೈನಾಡು ದುರಂತ, ಜಿಲ್ಲೆಯಲ್ಲಿ ಸಂಭವಿಸಿರುವ ವಿವಿಧ ಗುಡ್ಡ ಕುಸಿತಗಳು, ಭೂಮಿಯ ಸೀಳುವಿಕೆಯಿಂದ ಉಂಟಾಗಿರುವ ಸಾವುನೋವುಗಳಿಂದಾಗಿ,ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಇಂತಹ ಅಪಾಯಕಾರಿ ಯೋಜನೆಗಳಿಂದ ಸರಕಾರ ದೂರಸರಿಯಬೇಕು. ನಮ್ಮ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗುವ ಮತ್ತು ಬೇಸಿಗೆಯಲ್ಲಿ ನಮ್ಮ ಶರಾವತಿ ನದಿ ನೀರಿಗೆ ಹಲವೆಡೆ ಸಮುದ್ರದ ಉಪ್ಪುನೀರು ಸೇರುತ್ತಿದ್ದು ಈ ಯೋಜನೆಯ ಅನುಷ್ಠಾನದಿಂದ ಮುಂದಿನ ದಿನಗಳಲ್ಲಿ ಗೇರುಸೊಪ್ಪೆಯ ವರೆಗೆ ಸಮುದ್ರದ ಉಪ್ಪುನೀರು ನದಿನೀರಿಗೆ ಹಿಮ್ಮುಖವಾಗಿ ಸೇರುವದು ನಿಶ್ಚಿತ. ಇದರಿಂದ ನಮ್ಮ ಪಂಚಾಯಿತ ವಲಯದ ಸಾವಿರಾರು ಎಕರೆ ಕ್ರಷಿ ಭೂಮಿಗೆ,ಜನರ ಕುಡಿಯುವ ನೀರಿನ ಅಗತ್ಯ ಸೇವೆಗಳಿಗೆ ಮುಂದಿನ ದಿನಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ಪರಿಸರ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಉದ್ದೇಶಿತ ಶರಾವತಿ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆಯ ಅನುಷ್ಠಾನಕ್ಕೆ ನಮ್ಮ ಗ್ರಾಮ ಪಂಚಾಯತಿಯ ಆಕ್ಷೇಪಣೆ ಇರವಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯ,ಜಿಲ್ಲಾ ಆಡಳಿತದ ಮತ್ತು ಸರ್ಕಾರದ ಗಮನ ಸೆಳೆಯಬೇಕೆಂದು ಮತ್ತು ಈ ಅವೈಜ್ಞಾನಿಕ ಉದ್ದೇಶಿತ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆಯನ್ನು ಕೈಬಿಟ್ಟು,ಪರಿಸರಕ್ಕೆ ಹಾನಿ ಇರದ ಬದಲೀ ಇಂಧನ ಮೂಲಗಳ ಮೊರೆಹೋಗಬೇಕೆಂದು ಸರ್ಕಾರವನ್ನು ಮತ್ತು ಕೆ.ಪಿ.ಸಿ.ಲಿ.ರವರಿಗೆ ಕೋರಲು ಹೆರಂಗಡಿ ಗ್ರಾಮ ಪಂಚಾಯಿತಿಯು ಗ್ರಾಮ ಸಭೆ ಸರ್ವಾನುಮತದಿಂದ ಠರಾಯಿಸಿದೆ.
ಸೆ.18ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗೇರುಸೊಪ್ಪೆಯಲ್ಲಿ ನಡೆಯಲಿರುವ ಪರಿಸರ ಪರಿಣಾಮ ಮೌಲ್ಯಮಾಪನ ಆಲಿಕೆ ಸಭೆಗೆ ನಮ್ಮ ಗ್ರಾಮ ಪಂಚಾಯತದ ನಾಗರಿಕರು ಯೋಜನೆಯ ವಿರುದ್ಧ ತಮ್ಮ ಲಿಖಿತ ಆಕ್ಷೇಪಣೆ ಸಲ್ಲಿಸಲು ಗ್ರಾಮ ಪಂಚಾಯಿತಿಯು ನೆರವಾಗಬೇಕೆಂದು ಗ್ರಾಮ ಸಭೆ ಸರ್ವಾನುಮತದಿಂದ ನಿರ್ಣಯಿಸಿದೆ.
ಗ್ರಾಮ ಪಂಚಾಯತ ಸದಸ್ಯರಾದ ಪ್ರಮೋದ ನಾಯ್ಕ,ಭಾರತಿ ನಾಯ್ಕ, ಮಂಗಲಾ ಹಳ್ಳೇರ, ವಿನಾಯಕ ಬಿ.ನಾಯ್ಕ ಮತ್ತು ಶ್ರೀಧರ ನಾಯ್ಕ,ಮಾಧವ ಗೌಡ ,ಮಹ್ಮದ ಜಿಪ್ರಿ ,ಕ್ರಷ್ಣಾನಂದ ಹುಲ್ಸವಾರ, ನಾರಾಯಣ ಹಳ್ಳೇರ ಮತ್ತಿತರ ಪ್ರಮುಖರು ಚರ್ಚೆಯಲ್ಲಿ ಪಾಲ್ಗೊಂಡರು.ಶರಾವತಿ ಪಂಪ್ಡ ಸ್ಟೋರೇಜ ಯೋಜನೆಯ ಕುರಿತು ಮಾಹಿತಿ ನೀಡಲು ಆಗಮಿಸಿದ ರಾಜ್ಯ ವಿದ್ಯುತ ನಿಗಮದ ಹಿರಿಯ ಅಧಿಕಾರಿಗಳು ಯೋಜನೆಯ ಕುರಿತು ಮಾಹಿತಿ ನೀಡುತ್ತಿದ್ದಂತೆ ಯೋಜನೆಯ ಅನುಷ್ಠಾನದ ವಿರುದ್ಧ ಕೆ.ಪಿ.ಸಿ. ಅಧಿಕಾರಿಗಳು ಸಾರ್ವಜನಿಕರಿಂದ ಪ್ರಭಲ ವಿರೋದ ಎದುರಿಸ ಬೇಕಾಯಿತು. ಇದರಿಂದ ಅಧಿಕಾರಿಗಳು ಅರ್ಧದಲ್ಲಿಯೇ ತಮ್ಮ ವಿವರಣೆಯನ್ನು ಮೊಟಕು ಗೊಳಿಸಿದ ವಿದ್ಯಮಾನಕ್ಕೂ ಗ್ರಾಮ ಸಭೆ ಸಾಕ್ಷಿಯಾಯಿತು. ಸಭೆಯ ಅಧ್ಯಕ್ಷತೆಯನ್ನು ಮೇರಿ ಡಾಯಸ್ ವಹಿಸಿದ್ದರು.ನೋಡಲ್ ಅಧಿಕಾರಿ ಸೂರ್ಯಕಾಂತ ಒಡೇರ್ , ಪಿ.ಡಿ.ಓ.ಚನ್ನಬಸಪ್ಪ ಮಹಾಜನ ಶೆಟ್ಟಿ,ಪ್ರಭಾರ ಕಾರ್ಯದರ್ಶಿ ನಾಗರಾಜ ಗೌಡ,ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ತಿತರಿದ್ದರು.
ಅದಿಕಾರಿಗಳು ತರಾಟೆಗೆ:ಗ್ರಾಮ ಸಭೆಗೆ ಅಧಿಕಾರಿಗಳು ತಮ್ಮ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿ ಹಲವಾರು ನಾಗರಿಕರು ಮದ್ಯಪ್ರವೇಶ ಮಾಡಿ ಅಧಿಕಾರಿಗಳು ಕೇವಲ ಕಾಟಾಚಾರಕ್ಕೆ ಗ್ರಾಮ ಸಭೆಗಳಿಗೆ ಬರುತ್ತಾರೆ.ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದಿಲ್ಲ ಎಂದು ಆಕ್ಷೇಪಿಸಿ ಗ್ರಾಮದ ವಿವಿಧ ಸಮಸ್ಯೆಗಳ ಮೇಲೆ ಜನರು ಬೆಳಕು ಚೆಲ್ಲಿದರು .
ತೆರವಾಗಿರುವ ಹೈಗುಂದ ಮತ್ತು ಇತರ ಅಂಗನವಾಡಿ ಶಿಕ್ಷಕರ ಭರ್ತಿ ಮಾಡದೇ ಉಂಟಾಗಿರುವ ತೊಂದರೆಯ ಕುರಿತು ಮತ್ತು ಹೆರಂಗಡಿ ಉಪ ಆರೋಗ್ಯ ಕೇಂದ್ರಕ್ಕೆ ವಾರಕ್ಕೆ ಎರಡು ದಿವಸ ಗೇರುಸೊಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ನಿಯೋಜನೆ ಮಾಡದ ಆರೋಗ್ಯ ಇಲಾಖೆಯ ನಿರ್ಲಕ್ಷ್ಯ, ಮಂಗನ ಹಾವಳಿಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ನಿರ್ಲಕ್ಷ,ಶರಾವತಿಯ ಇತ್ತೀಚಿನ ಕ್ರತಕ ನೆರೆಯ ಹಾನಿಯ ಸಮೀಕ್ಷೆ ನಡೆಸದೇ ಇರುವ ಸಂಬAಧ ಪಟ್ಟ ಇಲಾಖೆಗಳ ನಿರ್ಲಕ್ಷ್ಯದ ಕುರಿತು ನಾಗರಿಕರು ಸಭೆಯಲ್ಲಿ ತೀವ್ರ ತರಾಟೆಗೆ ತೆಗೆದು ಕೊಂಡಿದ್ದು,ಶರಾವತಿ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆಯ ಅನುಷ್ಠಾನದ ವಿರುದ್ಧ ನಿರ್ಣಯ ಸ್ವೀಕರಿಸಿರುವದು ಇಂದಿನ ಹೆರಂಗಡಿ ಗ್ರಾಮ ಸಭೆಯ ವೈಶಿಷ್ಟ್ಯವಾಗಿತ್ತು.

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”