September 10, 2025

ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ ರವರಿಗೆ ಕಾವ್ಯರ್ಷಿ ಪ್ರಶಸ್ತಿ -2025

ಬೆಂಗಳೂರು : ದಿನಾಂಕ 7/09/2025ರ ಭಾನುವಾರ ತೆಲಂಗಾಣದ ಬಿರ್ಲಾ ಭವನದಲ್ಲಿ ಓಚಿಣioಟಿಚಿಟ Poeಣಡಿಥಿ ಈesಣivಚಿಟ-6 ಕಾರ್ಯಕ್ರಮದಲ್ಲಿ ವಿವಿಧ ಭಾಷೆಯ ಕವಿ ಸಮ್ಮೇಳನ ಜರುಗಿತು. ದಕ್ಷಿಣ ಭಾರತದ ಎಲ್ಲಾ ಭಾಷೆಗಳನ್ನೂ ಪರಿಗಣಿಸಿ ನೀಡಲಾದ ಪ್ರಶಸ್ತಿ ತೆಲಂಗಾಣದ “ತ್ರಿವರ್ಣ ಪ್ರತಿಷ್ಠಾನ”ದಿಂದ ನೀಡಲ್ಪಟ್ಟಿತು. ಕರ್ನಾಟಕದಿಂದ ಈ ಪ್ರಶಸ್ತಿಯನ್ನು ಇಬ್ಬರಿಗೆ ನೀಡಲಾಯಿತು.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರಸ್ತುತ ಬೆಂಗಳೂರಿನಲ್ಲಿ ಕಾಲೇಜು ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿರುವ ಕವಿ ಲೇಖಕಿ, ವಿಮರ್ಶಕಿ ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ ರವರಿಗೆ ಕಾವ್ಯರ್ಷಿ ಪ್ರಶಸ್ತಿ -2025 ನೀಡಿ ಗೌರವಿಸಲಾಯಿತು.

ತೆಲಂಗಾಣದ ತ್ರಿವರ್ಣ ಪ್ರತಿಷ್ಠಾನದ ಆಹ್ವಾನದ ಮೇರೆಗೆ ತೆರಳಿದ ಅವರಿಗೆ ಸಾಹಿತ್ಯಿಕ ಕೆಲಸಗಳು, ನ್ಯಾಶನಲ್, ಇಂಟರ್ನ್ಯಾಶನಲ್ ಹಾಗೂ ಸ್ಟೇಟ್ ಅವಾರ್ಡ್ಸ್, ಪುಸ್ತಕ ಪ್ರಕಟಣೆ, ಬರೆದ ಕಥೆ, ಕವನ, ವಿಮರ್ಶೆ, ಪ್ರಬಂಧ, ಕಥಾಸಂಕಲನ, ವಿಮರ್ಶಾ ಸಂಕಲನ ಇವೆಲ್ಲವನ್ನೂ ಪರಿಗಣಿಸಿ “ಕಾವ್ಯರ್ಷಿ ಪ್ರಶಸ್ತಿ -2025” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ದಕ್ಷಿಣ ಭಾರತದ ಎಲ್ಲಾ ಭಾಷೆಗಳನ್ನೂ ಪರಿಗಣಿಸಿ ನೀಡಲಾದ ಈ ಪ್ರಶಸ್ತಿ ತೆಲಂಗಾಣದ “ತ್ರಿವರ್ಣ ಪ್ರತಿಷ್ಠಾನ”ದಿಂದ ನೀಡಲ್ಪಟ್ಟಿತು.

 ಈ ಸಂದರ್ಭದಲ್ಲಿ ನನ್ನನ್ನು ಈ ಹಂತದಲ್ಲಿ ನಿಲ್ಲಿಸಿದ ಬದುಕನ್ನು, ದೇವರನ್ನು, ತಂದೆತಾಯಿಗಳನ್ನು, ನನ್ನ ಪ್ರೀತಿಯ ಕುಟುಂಬದ ಸಮಸ್ತ ಬಾಂಧವರನ್ನು, ಕೈ ಹಿಡಿದು ನಡೆಸಿದ, ನಡೆಸುತ್ತಿರುವ ಗುರುವೃಂದವನ್ನು, ನನ್ನ ಪ್ರಿಯ ಸ್ನೇಹಿತರನ್ನು, ಸಮಾಜದ ಪ್ರತೀ ಸಹೃದಯೀ ಮನಸ್ಸುಗಳನ್ನು ಕೃತಜ್ಞತೆಯಿಂದ ನೆನೆಯುವೆ ಎಂದು ವಾಹಿನಿಯ ಮೂಲಕ ತಮ್ಮ ಸಂತಸ ಹಂಚಿಕೊAಡಿದ್ದಾರೆ.

ಇವರಿಗೆ ಇನ್ನು ಹೆಚ್ಚಿನ ಗೌರವ ದೊರಕಲಿ ಎಂದು ವಾಹಿನಿಯ ಸಮಸ್ತ ವೀಖ್ಷಕರು ಹ/ಅಗೂ ಓದುಗರ ಪರವಾಗಿ ಹಾರ್ದಿಕ ಅಭಿನಂದನೆಗಳು

About The Author

error: Content is protected !!