September 10, 2025

ಎಕ್ಸಲೆಂಟ್ ಪಿಯು ಕಾಲೇಜು ಮೂಡಬಿದಿರೆಯಲ್ಲಿ ಹಿಂದಿ ಉತ್ಸವ

ಮಂಗಳೂರು : ಎಕ್ಸಲೆಂಟ್ ಪಿಯು ಕಾಲೇಜು ಮೂಡಬಿದಿರೆಯಲ್ಲಿ ಹಿಂದಿ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು. ಹಿಂದಿ ವಿಭಾಗದ ಮುಖ್ಯಸ್ಥರಾದ ಜಗದೀಶ್ ನಾಯ್ಕ ಎಕ್ಸಪರ್ಟ್ ಕಾಲೇಜ್ ವಳಚ್ಚಿಲ್ ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲಾ ಭಾಷೆಗಳನ್ನು ಪ್ರೀತಿಸಿ ಆದರೆ ಮಾತೃ ಭಾಷೆಯನ್ನು ಹೃದಯದಲ್ಲಿ ಸ್ಥಾನ ಕೊಡಿ. ಅದೇ ರೀತಿ ಮುಂದುವರಿದು . ಮನುಷ್ಯ ಧನ ಕನಕ ಇಲ್ಲದೆ
ಬಡವನಾಗಬಹುದು ಆದರೆ ಹೃದಯದಿಂದ ಎಂದೂ ಬಡವನಾಗಬಾರದು ಎಂದು ಹೇಳುತ್ತಾ ಮಕ್ಕಳಿಗೆ ಅನೇಕ ರೀತಿಯಲ್ಲಿ ಹಿತ ವಚನವನ್ನು ತಿಳಿ ಹೇಳಿದರು.
ಎಕ್ಸಲೆಂಟ್ ಕಾಲೇಜಿನ ಮುಖ್ಯಸ್ಥೆ ರಶ್ಮಿತಾ ಜೈನ್ , ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರದೀಪ ಕುಮಾರ ಶೆಟ್ಟಿ, ಎಕ್ಸಲೆಂಟ್ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಕಾಲೇಜು ಹಿಂದಿ ವಿಭಾಗದಿಂದ ದಿವ್ಯಾಲಕ್ಷ್ಮಿ ಮೇಡಂ ಹಾಗೂ ಹೈಸ್ಕೂಲ್ ಹಿಂದಿ ವಿಭಾಗದಿಂದ ನವೀನ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಾಂಭವಿ ಅವರು ಕಾರ್ಯಕ್ರಮದ ನಿರೂಪಣೆಯನ್ನು ಹಿಂದಿ ಭಾಷೆಯಲ್ಲಿ ಸುಲಲಿತವಾಗಿ ನೆರವೇರಿಸಿಕೊಟ್ಟರು. ಅದೇ ರೀತಿ ಕಾಲೇಜ ಹಾಗೂ ಹೈಸ್ಕೂಲಿನ ಮುದ್ದು ಮಕ್ಕಳು ಜಂಟಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿ ಕೊಟ್ಟರು.

About The Author

error: Content is protected !!