ಭಟ್ಕಳ: ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ–66ರ ಹನೀಫಾಬಾದ್ ಕ್ರಾಸ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಹನೀಫಾಬಾದ್ ಕ್ರಾಸ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಬೈಕ್ ಸವಾರ, ಶಿರಾಲಿ ಕಡೆಯಿಂದ ಭಟ್ಕಳ ಶಹರದತ್ತ ಸಾಗುತ್ತಿದ್ದ ಟಿವಿಎಸ್ ಕನೆಕ್ಷನ್–125 ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಟಿವಿಎಸ್ ಬೈಕ್ ಚಾಲಕ ಬಿಳಿಯಾ ತಂದೆ ಶನಿಯಾರ ನಾಯ್ಕ (53), ಚರ್ಚ್ಕ್ರಾಸ್–ತೆನ್ನಮಕ್ಕಿ ನಿವಾಸಿ, ಅವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಕುರಿತು ಗಾಯಾಳುವಿನ ಪುತ್ರಿ ಕುಮಾರಿ ಶ್ರಾವ್ಯ (24) ಅವರು ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಅಬ್ದುಲ್ ಗನಿ ತಂದೆ ಅಲಿ ಸಾಹೇಬ್ ಪಾಟ್ಟರ (ಹೆಬಳಿ–ತೆಂಗಿನಗುಂಡಿ) ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ