ಭಟ್ಕಳ: ಶತಮಾನಗಳ ಭಕ್ತಿಪರಂಪರೆಯ ಸೊಗಡನ್ನು ಹೊತ್ತು ನಿಂತಿರುವ ಪಟ್ಟಣದ ಶ್ರೀ ದಂಡಿನದುರ್ಗಾ ದೇವಸ್ಥಾನದಲ್ಲಿ ನಡೆದ ೨೫ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವವು ಜ.೭ರಿಂದ ಜ.೯ರವರೆಗೆ ಭಕ್ತಿಭಾವದ ಮಹಾಪ್ರವಾಹವನ್ನೇ ಹರಿಯುವಂತೆ ಮಾಡಿತು. ಮೂರು ದಿನಗಳ ಕಾಲ ದೇವಾಲಯ ಆವರಣ ಭಕ್ತಿ, ಸಂಸ್ಕೃತಿ ಮತ್ತು ಧಾರ್ಮಿಕ ಶ್ರದ್ಧೆಯ ಸಂಗಮವಾಗಿ ಪರಿಣಮಿಸಿತು.
ಉತ್ಸವದ ಕೇಂದ್ರಬಿAದುವಾಗಿ ಬೆಳ್ಳಿಯ ಕವಚಧಾರಿಯಾಗಿ ಶ್ರೀ ದಂಡಿನದುರ್ಗಾ ದೇವಿ ಅಪೂರ್ವವಾಗಿ ಕಂಗೊಳಿಸಿ, ಭಕ್ತರ ಹೃದಯಗಳಲ್ಲಿ ಆಳವಾದ ಭಾವನಾತ್ಮಕ ಸ್ಪಂದನೆ ಮೂಡಿಸಿದೆ.
ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ಚಂಡಿಕಾ ಹವನ ಸೇರಿದಂತೆ ವಿವಿಧ ವೈದಿಕ ಧಾರ್ಮಿಕ ಅನುಷ್ಠಾನಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ನಂತರ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ಪ್ರಸಾದ ಸ್ವೀಕರಿಸಿದರು.
ಸಂಜೆಯ ಹೊತ್ತಿನಲ್ಲಿ ನಡೆದ ಭಜನಾ ಕಾರ್ಯಕ್ರಮವು ಭಕ್ತರನ್ನು ಭಕ್ತಿರಸದ ಅಲೆಗಳೊಳಗೆ ತೇಲುವಂತೆ ಮಾಡಿತು. ರಾತ್ರಿ ೯ ಗಂಟೆಗೆ ಆರಂಭವಾದ ತೆಕ್ಜಟ್ಟೆ ಓಂಕಾರ ಕಲಾವಿದರಿಂದ ಕಣ್ಣಾಮುಚ್ಚಾಲೆ ನಾಟಕ ಪ್ರದರ್ಶನವು ಸಾಮಾಜಿಕ ಅರ್ಥವತ್ತಿನ ಸಂದೇಶಗಳೊAದಿಗೆ ಪ್ರೇಕ್ಷಕರ ಮನ ಗೆದ್ದು, ಧಾರ್ಮಿಕ ಉತ್ಸವಕ್ಕೆ ಸಾಂಸ್ಕೃತಿಕ ಕಳೆ ತುಂಬಿತು. ಮೂರು ದಿನಗಳ ಈ ಪ್ರತಿಷ್ಠಾ ವರ್ಧಂತಿ ಉತ್ಸವವು ಕೇವಲ ಧಾರ್ಮಿಕ ಆಚರಣೆಯಲ್ಲದೆ, ಭಟ್ಕಳದ ಸಾಂಸ್ಕೃತಿಕ ಆತ್ಮತತ್ತ್ವವನ್ನು ಮತ್ತೊಮ್ಮೆ ಜೀವಂತವಾಗಿ ಪ್ರತಿಬಿಂಬಿಸಿ, ಭಕ್ತರ ಮನಗಳಲ್ಲಿ ಅಮಿತವಾದ ಭಾವಸ್ಮರಣೆಯಾಗಿ ಉಳಿಯಿತು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಉತ್ಸವದ ಯಶಸ್ವಿ ಆಯೋಜನೆಗೆ ಉತ್ಸವ ಸಮಿತಿಯ ಗೌರವಾಧ್ಯಕ್ಷ ರಾಮಕೃಷ್ಣ ನಾಯ್ಕ, ಸಮಿತಿಯ ಅಧ್ಯಕ್ಷ ಮೋಹನ ಶಿರಾಲಿಕರ, ಖಜಾಂಚಿ ಜಗದೀಶ ಮಾದನಗೇರಿ, ಶಿವಾನಂದ ಪಾವಸ್ಕರ, ಲಕ್ಷ್ಮಣ ಪಾವಸ್ಕರ, ಕೃಷ್ಣಮೂರ್ತಿ ಶೆಟ್ಟಿ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಮತ್ತು ಸ್ವಯಂಸೇವಕರು ನಿರಂತರ ಶ್ರಮವಹಿಸಿದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ