January 14, 2026

ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಪಡೆದ ಹೊನ್ನಾವರ ಲಯನ್ಸ ಕ್ಲಬ್ ಗೆ “ಸುವರ್ಣ ಸಂಭ್ರಮ”

ಹೊನ್ನಾವರ: 50 ವರ್ಷದಲ್ಲಿ ಹಲವು ಸಮಾಜಮುಖಿ ಕಾರ್ಯದ ಮೂಲಕ ತಾಲೂಕಿನಲ್ಲಿ ಮನೆ ಮಾತಾಗಿರುವ ಹೊನ್ನಾವರ ಲಯನ್ಸ್ ಕ್ಲಬ್ 50 ವಸಂತ ಪೂರೈಸಿದ್ದು, ಸುವರ್ಣ ಸಂಭ್ರಮ ಕಾರ್ಯಕ್ರಮ ಜ.18ರಂದು ಲಯನ್ಸ್ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ ಕ್ಲಬ್ ಅಧ್ಯಕ್ಷ ಜೀವೊತ್ತಮ ನಾಯ್ಕ ಮಾಹಿತಿ ನೀಡಿದರು.

ಲಯನ್ಸ್ ಸಭಾಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾಹಿತಿ ನೀಡಿದ ಅವರು 1976ರಲ್ಲಿ ಸೆಂತ್ ಥಾಮಸ್ ಪ್ರೌಡಶಾಲೆಯಲ್ಲಿ ಎಸ್.ಎಂ.ಛಲವಾದಿ, ದಿ.ಡಾ. ಎಂ.ಪಿ.ಕರ್ಕಿ, ದಿ.ಡಾ. ಎನ್.ಆರ್. ನಾಯಕ, ಪತ್ರಕರ್ತರಾದ ಜಿ.ಯು.ಭಟ್ ಪದಾಧಿಕಾರಿಗಳ ತಂಡದ 35 ಸದಸ್ಯರು ಸೇರಿ ಲಯನ್ಸ್ ಕ್ಲಬ್ ಆರಂಭಿಸಿದರು. ಪ್ರಸುತ್ತ 61 ಸದಸ್ಯರಿದ್ದು, 50 ವರ್ಷದಲ್ಲಿ ಹಲವು ಸಮಾಜಮುಖಿ ಕಾರ್ಯ ನಡೆದಿದ್ದು, 1978 ರಲ್ಲಿ 2 ಮನೆಗಳನ್ನು  ನಿರ್ಮಿಸಿ ಕೊಟ್ಟಿದ್ದೇವೆ ಎಂದು ಸೇವಾ ಕಾರ್ಯದ ಕುರಿತು ಸ್ಮರಿಸಿದರು.

ಸುವರ್ಣಮಹೊತ್ಸವ ಸಮಿತಿ ಅಧ್ಯಕ್ಷ ಎಸ್.ಜೆ.ಕೈರನ್ ಮಾತನಾಡಿ ಸುಂದರವಾದ 3 ಕೋಟಿ ವಿದ್ಯಾಭವನ ನಿರ್ಮಾಣವಾಗಿದ್ದು, ಸಮಾಜಮುಖಿ ಕಾರ್ಯಕ್ಕೆ ಹಲವು ಪ್ರಶಸ್ತಿ ಲಭಿಸಿದೆ. ಸುವರ್ಣಮಹೊತ್ಸವದ ಅಂಗವಾಗಿ ತಾಲೂಕಿನ 75 ರಿಂದ 100 ಆಶಾ ಕಾರ್ಯಕರ್ತೆಯರ ಸೇವೆ ಗುರುತಿಸಿ ವಾಟರ್ ಹಿಟರ್ ನೀಡಲಿದ್ದೇವೆ. ಬಂದರ್ ಪ್ರದೇಶದಲ್ಲಿ ಬಿಸಿಲಿನಲ್ಲಿ ಕುಳಿತು ಮೀನು ಮಾರಾಟ ಮಾಡುವರಿಗೆ ದೊಡ್ಡದಾದ ಛತ್ರಿ ನೀಡುತ್ತೇವೆ. ಗ್ರಾಮೀಣ ಪ್ರದೇಶದಲ್ಲಿರುವ ಗುಂಡಬಾಳ ಪ್ರೌಡಶಾಲೆಗೆ ವಾಟರ್ ಪಿಲ್ಟರ್ ನೀಡಲಾಗುವುದು. ಶೈಕ್ಷಣಿಕವಾಗಿ ಅನೂಕೂಲವಾಗಲು ಈಗಾಗಲೇ 10 ಶಾಲೆಗೆ ಸ್ಮಾರ್ಟ್ ಕ್ಲಾಸ್ ನೀಡಲಾಗಿದೆ. ಮಹಿಳೆಯರ ಸ್ವಾವಲಂಭಿ ಜೀವನ ನಡೆಸಲು ಹೊಲಿಗೆ ತರಬೇತಿ ನೀಡಿ 60 ಮಹಿಳೆಯರಿಗೆ ಸಹಕಾರ ನೀಡಲಾಗಿದೆ. ಮುಂದಿನ ದಿನದಲ್ಲಿ ಹೊನ್ನಾವರ ಮತ್ತು ಮುರ್ಡೆಶ್ವರ ಲಯನ್ಸ್ ಕ್ಲಬ್, ಶ್ರೀದೇವಿ ಆಸ್ಪತ್ರೆ ಸಹಕಾರದ ಮೇರೆಗೆ 1.5 ಕೋಟಿ ವೆಚ್ಚದ ಅನುದಾನ ದೊರೆಯುವ ನಿರೀಕ್ಷೆ ಇದ್ದು, ಇದರಿಂದ ವಿವಿಧ ಸಮಾಜಮುಖಿ ಕಾರ್ಯ ನಡೆಯಲಿದೆ ಎಂದು ಭರವಸೆ ನೀಡಿದರು.

ಪ್ರಾಥಮಿಕ ಶಿಕ್ಷಕ ಸಂಘದ ಅಧ್ಯಕ್ಷರು ಲಯನ್ಸ ಸದಸ್ಯರಾದ ಎಂ.ಜಿ.ನಾಯ್ಕ ಮಾತನಾಡಿ ಹಲವು ಸಮಾಜಿಮುಖಿ ಕಾರ್ಯ ಮಾಡುತ್ತಿರುವ ಲಯನ್ಸ ಕ್ಲಬ್ ಭವ್ಯ ಸಭಾಭವನವನ್ನು ಕಳೆದ 10 ವರ್ಷಗಳ ಕಾಲ ಅಂಗನವಾಡಿ, ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ತರಗತಿ, ಆಯುಷ್ಮಾನ್ ಆರೋಗ್ಯ ಕೇಂದ್ರ, ಉಚಿತ ನೇತ್ರ ತಪಾಸಣೆಯಂತಹ ಹಲವು ಸೇವಾ ಕಾರ್ಯಗಳಿಗೆ ಉಚಿತವಾಗಿ ನೀಡಿದೆ. ಶರಾವತಿ ಜಲಾನಯನ ತೀರದಲ್ಲಿ ಪ್ರವಾಹ ಎದುರಾದಾಗ ಪ್ರಥಮವಾಗಿ ನೆರವಾಗುವ ಸಂಸ್ಥೆ ಎನ್ನುವ ಹಿರಿಮೆ ಹೊಂದಿದೆ. ಇಂತಹ ಹೆಮ್ಮೆ ಸಂಸ್ಥೆ ಸುವರ್ಣ ಸಂಭ್ರಮ ಅರ್ಥಪೂರ್ಣವಾಗಿ ಆಯೋಜಿಸಲು ಸನ್ನದ್ದವಾಗಿದೆ ಎಂದರು.

ಲಯನ್ಸ ಸಂಸ್ಥೆ ಎ.ವಿ.ಶ್ಯಾನಭಾಗ, ಎನ್.ಜಿ.ಭಟ್ ಸೇವಾ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

ಲಯನ್ಸ ಸಂಸ್ಥೆಯ ಸುರೇಶ ಎಸ್, ವಸಂತ ಪ್ರಭು, ಜರ್ನಾದನ ನಾಯ್ಕ, ಶಾಂತರಾಮ ನಾಯ್ಕ, ವಿನೋದ ನಾಯ್ಕ, ಡಾ. ಚಂದಶೇಖರ ಶೆಟ್ಟಿ, ರಾಜೇಶ ಸಾಳೆಹಿತ್ತಲ್, ಅಶೋಕ ಮಹಾಲೆ, ಡಿ.ಡಿ.ಮಡಿವಾಳ, ಎಂ.ವಿ.ಹೆಗಡೆ, ಶೇಖರ ನಾಯ್ಕ, ಕೆ.ಸಿ.ವರ್ಗಿಸ್ ಉಪಸ್ಥಿತರಿದ್ದರು.

………..

ಸಭಾ ಕಾರ್ಯಕ್ರಮವನ್ನು ರಾಜ್ಯದ ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಜೀವೊತ್ತಮ ನಾಯ್ಕ ವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಡಿಸ್ಟಿಕ್ ಗವರ್ನರ್ ಜೈಮಾಲ್ ನಾಯ್ಕ, ಎಂ.ಎಚ್.ನಾಯಕ, ಮೋಹನ ಕುಮಾರ, ನೀಲಕಂಠ ಎಂ.ಹೆಗಡೆ, ಡಾ ರವಿ ಹೆಗಡೆ, ಗಣಪತಿ ನಾಯಕ, ಡಾ. ಗಿರೀಶ ಕುಚನಾಡು, ಡಾ.ಕೀರ್ತಿ ನಾಯ್ಕ ಆಗಮಿಸಲಿದ್ದಾರೆ.

About The Author

error: Content is protected !!