January 14, 2026

ಗ್ರಾಮೀಣ ಭಾಗಕ್ಕೆ ಆಯುರ್ವೇದ ಸೇವೆ – ಧರ್ಮಸ್ಥಳ ಆಸ್ಪತ್ರೆಯ ಶ್ಲಾಘನೀಯ ಕಾರ್ಯ

ಭಟ್ಕಳ: ಮಾರುಕೇರಿಯ ಹೂತ್ಕಳದ ಶ್ರೀ ಧನ್ವಂತರಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಕೃತಕೋಟಿ ಶ್ರೀಧನ್ವಂತರಿ ಜಪ ಸಾಂಗತಾ ಹೋಮ, ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಧನ್ವಂತರಿ ಕ್ಷೇತ್ರದ ಅರ್ಚಕ ಶಂಕರ ಭಟ್ಟ ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಆಯುರ್ವೇದ ಚಿಕಿತ್ಸೆ ಆರಾಧ್ಯ ದೇವರಾದ ಶ್ರೀ ಧನ್ವಂತರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಉಚಿತ ಆಯುರ್ವೆದ ಚಿಕಿತ್ಸೆಯಿಂದ ಈ ಭಾಗದ ಎಲ್ಲಾ ಜನರು ಕೂಡಾ ಆರೋಗ್ಯವಂತರಾಗುವAತಾಗಲಿ ಎಂದು ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ನಾಗರಾಜ ಅವರು ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಿ ನಮ್ಮ ಸಂಶೋಧನಾ ಘಟಕದಲ್ಲಿಯೇ ತಯಾರಾದ ಔಷಧವನ್ನು ಉಚಿತವಾಗಿ ನೀಡಲು ಸಂತಸವಾಗುತ್ತಿದೆ. ಶ್ರೀ ವೀರೇಂದ್ರ ಹೆಗ್ಗೆಡೆಯವರ ಕನಸೂ ಕೂಡಾ ಆಯುರ್ವೇದನ್ನು ಗ್ರಾಮೀಣ ಭಾಗಕ್ಕೆ ತಲುಪಿಸುವುದಾಗಿದೆ. ಶ್ರೀ ಧನ್ವಂತರಿ ಕ್ಷೇತ್ರದಲ್ಲಿ ಪ್ರಪ್ರಥವಾಗಿ ನಡೆಯುತ್ತಿರುವ ಈ ಆಯುರ್ವೆದ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂಧನೆ ದೊರೆತಿರುವುದು ಸಂತಸ ತಂದಿದೆ ಎಂದರು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾರುಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂ.ಡಿ. ನಾಯ್ಕ ಮಾತನಾಡಿ ಮಾರುಕೇರಿಯಂತಹ ಗ್ರಾಮೀಣ ಭಾಗಕ್ಕೆ ಬಂದು ಉಚಿತ ಚಿಕಿತ್ಸೆ ನೀಡುತ್ತಿರುವ ವೈದ್ಯರುಗಳು ಹಾಗೂ ಕಾಲೇಜಿನ ಪ್ರಮುಖರ ಕಾರ್ಯವನ್ನು ಶ್ಲಾಘಿಸಿದರು.
ಗಣೇಶ ಹೆಬ್ಬಾರ್ ಕೋಣಾರ ಮಾತನಾಡಿ ಶ್ರೀ ಧನ್ವಂತರಿ ಕ್ಷೇತ್ರವು ಸರ್ವರೋಗ ನಿವಾರಕ ಕ್ಷೇತ್ರವಾಗಿದ್ದು ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿದವರಿಗೆ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. ಆಯುರ್ವೇದ ಕಾಲೇಜಿನವರ ಇಂದಿನ ಉಚಿತ ಆರೋಗ್ಯ ತಪಾಸಣಾ ಶಿಬಿರ ಅರ್ಥಪೂರ್ಣವಾಗಿದ್ದು ಎಲ್ಲರಿಗು ಒಳಿತಾಗಲಿ ಎಂದು ಹಾರೈಸಿದರು.


ವೇದಿಕೆಯಲ್ಲಿ ಪ್ರಮುಖರಾದ ಕೆ.ಜೆ.ನಾಯ್ಕ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಮಂಜುನಾಥ ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗೋಕುಲ,= ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪತ್ರಕರ್ತ ರಾಧಾಕೃಷ್ಣ ಭಟ್ಟ ನಿರೂಪಿಸಿದರು. ಡಾ. ನಿರಂಜನ ಹೆಬ್ಬಾರ್ ವಂದಿಸಿದರು.

About The Author

error: Content is protected !!