March 2, 2026

ಜನವರಿ 24 ರಿಂದ 26 ರವರೆಗೆ “ಎಂಪ್ಲಾಯರ್ ಪ್ರೀಮಿಯರ್ ಲೀಗ್”

ಹೊನ್ನಾವರ: ರಾಜ್ಯ ಸರ್ಕಾರಿ ನೌಕರರ ಸಂಘ‌ ಮತ್ತು ಇ.ಪಿ.ಎಲ್ ಸಂಘಟನಾ ಸಮಿತಿ ವತಿಯಿಂದ ಜನವರಿ 24 ರಿಂದ 26 ರವರೆಗೆ “ಎಂಪ್ಲಾಯರ್ ಪ್ರೀಮಿಯರ್ ಲೀಗ್” ಆಯೋಜಿಸಲಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ಮುಕ್ರಿ ತಿಳಿಸಿದ್ದಾರೆ.


ಪ್ರತಿ ವರ್ಷದಂತೆ 6 ತಂಡಗಳ ಮಾಲಿಕತ್ವದಿಂದ ಕ್ರಿಕೇಟ್ ಮತ್ತು ಹಗ್ಗಜಗ್ಗಾಟ, ಮಹಿಳಾ ನೌಕರರಿಗಾಗಿ ಥ್ರೋಬಾಲ್ ಪಂದ್ಯಾವಳಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಪಂದ್ಯಾವಳಿಯನ್ನು ರಾಜ್ಯದ ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ವೈದ್ಯ ಪಂದ್ಯಾವಳಿ ಉದ್ಘಾಟಿಸಲಿದ್ದು, ಕ್ರೀಡಾಂಗಣ ಉದ್ಘಾಟನೆಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ನೌಕರರ ಸಂಘದ ತಾಲೂಕ ಅಧ್ಯಕ್ಷ ಅಣ್ಣಪ್ಪ ಮುಕ್ರಿ ವಹಿಸಲಿದ್ದು, ಟ್ರೋಪಿ ಅನಾವರಣವನ್ನು ಡಿ.ಎಫ್.ಓ ಯೋಗೀಶ ಸಿ.ಕೆ ಮಾಡಲಿದ್ದಾರೆ. ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ತಹಶೀಲ್ದಾರ ಪ್ರವೀಣ ಕರಾಂಡೆ, ರಾಜ್ಯ ಹಿರಿಯ ಉಪಾಧ್ಯಕ್ಷ ಸಂಜೀವಕುಮಾರ ನಾಯ್ಕ, ವಿಭಾಗೀಯ ಉಪಾಧ್ಯಕ್ಷ ಕಿರಣಕುಮಾರ ನಾಯ್ಕ, ಹೊಸಾಕುಳಿ ಗ್ರಾ.ಪಂ.ಅಧ್ಯಕ್ಷ ಸುರೇಶ ಶೆಟ್ಟಿ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘಟನೆಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

error: Content is protected !!