ಹೊನ್ನಾವರ: ತಾಲೂಕಿನ ಐತಿಹಾಸಿಕ ಪ್ರಸಿದ್ದ ಪಡುಕುಳಿ ನೀರೊಂಡದ ಶ್ರೀ ಕ್ಷೇತ್ರ ಜಟಗೇಶ್ವರ ನಾಗದೇವರ ಪುನರ್ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಜ. 30 ರಂದು ಜರುಗಲಿದೆ.
ಐತಿಹಾಸಿಕ ಹಿನ್ನಲೆಯುಳ್ಳ ಈ ಸ್ಥಳದಲ್ಲಿ ಗೇರುಸೊಪ್ಪಾ ಸಾಮ್ರಾಜ್ಯ ಆಳ್ವಿಕೆ ಮಾಡಿದ ರಾಣಿ ಚೈನ್ನಾಭೈರಾದೇವಿ ಆಡಳಿತ ಅವಧಿಯಲ್ಲಿ ಈ ಸ್ಥಳಕ್ಕೆ ಮಹಾರಾಣಿಯವರು ಪ್ರತಿ ವರ್ಷವು ಪೂಜೆ ಸಲ್ಲಿಸುತ್ತಿದ್ದರು ಎನ್ನುವ ಪ್ರತಿತಿ ಇದ್ದು, ಈ ಸ್ಥಳದಲ್ಲಿ ಕುಪ್ಪರಗಿ ಮಾದರಿಯ ಕುರುಹು ಇದೆ. ನಂತರದ ಅವಧಿಯಲ್ಲಿ ಬ್ರೀಟಿಷರು ಗೇರುಸೊಪ್ಪಾ ಕೋಟೆಯಿಂದ ಬಂಗಾರ ಮತ್ತಿತರ ಬೆಳೆಬಾಳುವ ವಸ್ತುಗಳನ್ನು ಬೋಟ್ ನಲ್ಲಿ ಶರಾವತಿ ನದಿ ಮೂಲಕ ಸಾಗಿಸುವಾಗ ಈ ಭಾಗದಲ್ಲಿ ಹಡಗು ಮುಂದೆ ಚಲಿಸಲು ಆಗದೇ ಸಮಸ್ಯೆ ಆಗಿತ್ತು. ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹಡಗು ಮುಂದಕ್ಕೆ ಸಾಗುವಾಗ ಕುಪ್ಪರಗಿಯಲ್ಲಿ ಬೆಳೆಬಾಳುವ ವಸ್ತುಗಳು ಬಿದ್ದಿತ್ತು ಎನ್ನುವ ಪ್ರತೀತಿಯು ಈ ಕ್ಷೇತ್ರದ ಬಗ್ಗೆ ಇದೆ.
ಅಲ್ಲಿಂದ ಇಲ್ಲಿಯವರೆಗೆ ರಾಜ್ಯದ ವಿವಿಧಡೆಯಿಂದ ಭಕ್ತರು ಆಗಮಿಸಿ ಮನೊ ಇಚ್ಚೆ ಈಡೇರಿಸುವಂತೆ ಬೇಡಿಕೆ ಹೊತ್ತು ಪೂಜೆ ಸಲ್ಲಿಸುತ್ತಾ ಬಂದಿದ್ದರು. ಕಳೆದ ವರ್ಷ ಜಿರ್ಣೊದ್ದಾರಗೊಂಡು ಪ್ರತಿಷ್ಠಾಪನೆ ಜರುಗಿದ್ದು, ಜ. 30 ರಂದು ಖರ್ವಾ ಕೂಡ್ಲಮನೆಯ ಸತ್ಯನಾರಾಯಣ ಭಟ್ ಇವರ ಆಚಾರ್ಯತ್ವದಲ್ಲ ಧಾರ್ಮಿಕ ಕಾರ್ಯಕ್ರಮವಾದ
ಬ್ರಹ್ಮಕೂರ್ಚ ಹವನ, ಕಲಾವೃದ್ದಿ ಹವನ, ದುರ್ಗಾ ಹವನ, ಸತ್ಯನಾರಾಯಣ ವೃತ, ಕುಂಕುಮಾರ್ಚನೆ, 101 ಕಲಶದಿಂದ ದೇವರಿಗೆ ಮಹಾಕಲಶಾಭಿಷೇಕ, ಮಹಾಪೂಜೆ ,ಮಂಗಳಾರತಿ ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರಾದ ಉದಯ ಶೆಟ್ಟಿ ಮನವಿ ಮಾಡಿದ್ದಾರೆ.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ