March 2, 2026

ಪತ್ರಕರ್ತರು ಒತ್ತಡಕ್ಕೆ ಮಣಿಯದೇ ಪತ್ರಿಕಾ ಧರ್ಮ ಪಾಲಿಸಬೇಕು – ಶ್ರೀ ಮಾರುತಿ ಗುರೂಜಿ

ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವದದು

ಭಟ್ಕಳ: ಪತ್ರಕರ್ತರು ಯಾರದ್ದೋ ಒತ್ತಡಕ್ಕೆ ಮಣಿಯದೆ ಸಮಾಜದ ಹಿತದೃಷ್ಟಿಯಿಂದ ಪತ್ರಿಕಾ ಧರ್ಮ ಪಾಲಿಸಬೇಕು. ಲೇಖನಿಯ ಸತ್ಯನಿಷ್ಠೆಯಲ್ಲಿ ವ್ಯತ್ಯಾಸವಾದರೆ ಸಮಾಜದ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಎಂದು ಬಂಗಾರಮಕ್ಕಿ ಸಂಸ್ಥಾನದ ಶ್ರೀ ಮಾರುತಿ ಗುರೂಜಿ ಎಚ್ಚರಿಸಿದರು.

ಇಲ್ಲಿನ ಶ್ರೀ ನಾಗಯಕ್ಷ ಧರ್ಮಾರ್ಥ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ಧ್ವನಿ) ಸಂಘಟನೆಯ ಭಟ್ಕಳ ಘಟಕ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ವವಾದುದು ಈ ದೆಸೆಯಲ್ಲಿ ಎಲ್ಲಾ ಪತ್ರಕರ್ತರು ಅಪ್ರಾಮಾಣಿಕವಾಗಿ ನಿಷ್ಠೆಯಿಂದ ದುಡಿಯಬೇಕಿದೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಜಪತ್ರಿಕೋದ್ಯಮ ರಾಜ್ಯದ ಸ್ಥಿತಿಗತಿಗಳ ಬಗ್ಗೆ ವರದಿ ಮಾಡುವುದು ನೈಜ ಪತ್ರಕರ್ತರ ಲಕ್ಷಣವಾಗಿದೆ ಎಂದರು ಪತ್ರಕರ್ತರನ್ನು ರಾಜ್ಯ ಸರ್ಕಾರ ಗುರುತಿಸದೇ ಇರುವುದು ಸರ್ಕಾರದ ದೋಸ್ತುತಿ ಆಗಿದೆ ಶರವೇಗದಲ್ಲಿ ಸುದ್ದಿ ಮಾಡುವ ಅವಸರದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ರಾಜ್ಯದ ದೇಶದ ಸುದ್ದಿಗಳನ್ನು ಬಿತ್ತರಿಸುತ್ತಾರೆ ಅವರಿಗೂ ಕುಟುಂಬದ ಜವಾಬ್ದಾರಿ ಇದೆ ಪತ್ರಕರ್ತರು ಧರ್ಮ ಸ್ವಾತಂತ್ರ ಬಳಸಿಕೊಂಡು ಸಾಮಾಜಿಕ ನ್ಯಾಯ ನೀಡಲಿ ಈ ದೆಸೆಯಲ್ಲಿ ನಮ್ಮ ಸಹಕಾರ ಬೆಂಬಲ ಇದೆ ಎಂದರು.


ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮಾಜ ಸೇವಕ ಗೋವಿಂದ ಪೂಜಾರಿ ಮಾತನಾಡಿ, ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ಪತ್ರಕರ್ತರ ಕುಟುಂಬಗಳಿಗೆ ನೆರವಾಗಲು ಪ್ರತ್ಯೇಕ ಟ್ರಸ್ಟ್ ಸ್ಥಾಪಿಸುವ ಚಿಂತನೆ ಇದೆ ಎಂದರು.


ಕಾರ್ಯಕ್ರಮದ ಹಿರಿಯ ವರದಿಗಾರರಾದ ಗಂಗಾಧರ್ ಮೊದಲಿಯರ್ ಮಾತನಾಡಿ ಪತ್ರಕರ್ತರು ಎಂದರೆ ಭಯೋತ್ಪಾದಕರು ಎಂಬ ಭಾವನೆ ಇದೆ ಈ ದೆಸೆಯಲ್ಲಿ ಗಟ್ಟಿಯಾದ ನೆಲೆಯಲ್ಲಿ ಮಧ್ಯಮ ಉಳಿಸಿಕೊಳ್ಳುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಪತ್ರಿಕೋದ್ಯಮ ರೂಪಾಂತರವಾಗುತ್ತಿದೆ ಕಾಲಕಾಲಕ್ಕೆ ತಕ್ಕಂತೆ ಪತ್ರಿಕಾ ಮಾಧ್ಯಮದವರು ತಾಂತ್ರಿಕ ಬೆಳೆದಂತೆ ಮಾಧ್ಯಮದವರು ಹೊಂದಿಕೊಳ್ಳಬೇಕು ಇಂಥ ರಾಜ್ಯ ಪ್ರಶಸ್ತಿ ಕಾರ್ಯಕ್ರಮಗಳು ವಿಚಾರ ಸಂಕೀರ್ಣಗಳು ಮತ್ತೆ ಮತ್ತೆ ನಡೆದು ಹೊಸ ಪತ್ರಿಕಾ ಮಾಧ್ಯಮದವರಿಗೆ ಸ್ಪೂರ್ತಿ ಆಗಲಿ ಎಂದರು.


ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ ಮೂರು ವರ್ಷಗಳಲ್ಲಿ ಸಂಘಟನೆಯು 21 ಜಿಲ್ಲೆಗಳಿಗೆ ವಿಸ್ತರಿಸಿದ್ದು, ಪತ್ರಕರ್ತರ ಮಾಶಾಸನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಈ ಇದೇ ಸಂದರ್ಭದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಸೇರಿದಂತೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮ ದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ,ಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ,ತಂಝೀಮ್ ಅಧ್ಯಕ್ಷ
ಇನಾಯತುಲ್ಲಾ ಶಾಬಂದ್ರಿ,ಕಾರ್ಯಕ್ರಮದ ಅಧ್ಯಕ್ಷತೆ ಶಂಕರ್ ನಾಯ್ಕ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಶಾನ್ ಬಾಗ್ ,ಖಜಾಂಚಿ ನಸೀಬ್ ಮುಲ್ಲಾ ಘನಿ,ಕುಮಾರ್ ನಾಯ್ಕ,
ಜಾವಿದ್ ಸಿಂಗೇರಿ ಉಪಸ್ಥಿತರಿದ್ದರು.

About The Author

error: Content is protected !!