March 2, 2026

ಎನ್.ಅಶ್ವಥ್ ನಾರಾಯಣ್ ಅವರ ಹುಟ್ಟು ಹಬ್ಬ ಆಚರಣೆ

ಕೆಆರ್ ಪೇಟೆ ; ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ. ಎನ್.ಅಶ್ವಥ್ ನಾರಾಯಣ್ ಅವರ ಹುಟ್ಟು ಹಬ್ಬದ ಅಂಗವಾಗಿ ಮಾತೃಭೂಮಿ ವೃದ್ಧಾಶ್ರಮದಲ್ಲಿ ಅನಾಥರಿಗೆ ಹೋಳಿಗೆ ಊಟ ಬಡಿಸಿ ಕೇಕ್ ಕತ್ತರಿಸಿ ಸಸಿಗಳನ್ನು ನೆಟ್ಟು ಸಂಭ್ರಮಿಸಿದ ಬಿಜೆಪಿ ಯುವ ನಾಯಕ ಶೀಳನೆರೆ ಭರತ್ ಕುಮಾರ್..

ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಸಾಧುಗೋನಹಳ್ಳಿಯಲ್ಲಿರುವ ಮಾತೃಭೂಮಿ ಉಚಿತ ವೃದ್ಧಾಶ್ರಮದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರ ಹುಟ್ಟು ಹಬ್ಬದ ಅಂಗವಾಗಿ ಅನಾಥರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ಯುವ ನಾಯಕ ಶೀಳನೆರೆ ಭರತ್ ಕುಮಾರ್… ಮಾತೃಭೂಮಿ ಅನಾಥಾಶ್ರಮದಲ್ಲಿ ಹೂ ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು ನೀರೆರೆದ ಭರತ್ ಕುಮಾರ್ ದಂಪತಿಗಳು ಅನಾಥ ವೃದ್ಧರೊಂದಿಗೆ ಕೇಕ್ ಕತ್ತರಿಸಿ, ಹೋಳಿಗೆ ಊಟವನ್ನು ಬಡಿಸಿ ಸಂಭ್ರಮಿಸಿ ದರು. ರಾಜ್ಯದ ಸರಳ ಸಜ್ಜನ ರಾಜಕಾರಣಿಗಳಾಗಿ ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸೋಲರಿಯದ ಶಾಸಕರಾಗಿ,ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾಗಿ ಇಡೀ ರಾಜ್ಯವೇ ಮೆಚ್ಚುವಂತೆ ದಕ್ಷ ಪ್ರಾಮಾಣಿಕ ಆಡಳಿತ ನೀಡಿದ ಅಶ್ವಥ್ ನಾರಾಯಣ್ ಅವರಿಗೆ ದಯಾಮಯನಾದ ಭಗವಂತನು ಒಳ್ಳೆಯ ಆರೋಗ್ಯ ಹಾಗೂ ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ವಿಶ್ರಾಂತ ಪ್ರಾಂಶುಪಾಲರು ಹಾಗೂ ಶಿಕ್ಷಣ ತಜ್ಞರಾದ ಡಾ.ಕೆ. ಕಾಳೇಗೌಡ ಮಾತನಾಡಿ ಹುಟ್ಟುಹಬ್ಬದ ಹೆಸರಿನಲ್ಲಿ ಅನಗತ್ಯವಾಗಿ ಹಣವನ್ನು ಪೋಲು ಮಾಡಿ ಸಂಭ್ರಮಿಸುವ ಇಂದಿನ ಸಮಾಜದಲ್ಲಿ ಕರ್ನಾಟಕ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಡಾಕ್ಟರ್ ಅಶ್ವಥ್ ನಾರಾಯಣ್ ಅವರ ಹುಟ್ಟುಹಬ್ಬವನ್ನು ವಯೋವೃದ್ಧರು ಹಾಗೂ ಅನಾಥರೊಂದಿಗೆ ಅತ್ಯಂತ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ವೃದ್ಧರ ಮೊಗದಲ್ಲಿ ನಗುವನ್ನು ಕಾಣಲು ಹೊರಟಿರುವ ಭರತ್ ಕುಮಾರ್ ಅವರಂತಹ ಯುವ ನಾಯಕರು ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದಾರೆ. ಇಂದು ಹೋಳಿಗೆ ಊಟವನ್ನು ಮಾಡಿಸಿ ವಯೋವೃದ್ಧರೊಂದಿಗೆ ಸಹಪಂಕ್ತಿ ಭೋಜನ ಮಾಡಿದ ಭರತ್ ಕುಮಾರ್ ಅವರ ಹೃದಯ ಶ್ರೀಮಂತಿಕೆಯು ಅಪಾರವಾಗಿದ್ದು ನಾಗರೀಕ ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಅಭಿಮಾನದಿಂದ ಹೇಳಿದರು.

ಈ ಸಂದರ್ಭದಲ್ಲಿ ಕೃಷ್ಣರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ಖಜಾಂಚಿ ಹೆಮ್ಮನಹಳ್ಳಿ ರಮೇಶ್, ಬಿಜೆಪಿ ಎಸ್ಟಿ ಮೋರ್ಚ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶ್ ನಾಯಕ, ಅಕ್ಕಿ ಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ವಾಸುರಾಜೇಗೌಡ, ನಿವೃತ್ತ ಶಿಕ್ಷಕರಾದ ಕರೀಗೌಡ, ವಿಶ್ರಾಂತ ಇಂಜಿನಿಯರ್ ಶಿವಲಿಂಗೇಗೌಡ ಸೇರಿದಂತೆ ನೂರಾರು ಅಭಿಮಾನಿಗಳು ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು .

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!