ಕೃಷ್ಣರಾಜಪೇಟೆ : ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಹುರುಚಲಮ್ಮ ದೇವಾಲಯದ ಉದ್ಘಾಟನೆ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಭಕ್ತಿಶ್ರದ್ಧೆಯಿಂದ ನಡೆಯಿತು.
ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮೂರು ದಿನಗಳಿಂದ ಧಾರ್ಮಿಕ ವಿಧಿ ವಿಧಾನಗಳು ನಡೆಸಿದ ಅರ್ಚಕರಾದ ಅರುಣ್ ಅವರ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ ಕೈಂಕರ್ಯಗಳು ಕೈಗೊಳ್ಳಲಾಯಿತು, ಹೇಮಗಿರಿಯ ಹೇಮಾವತಿ ನಧಿಯಲ್ಲಿ ದೇವಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹುರುಚಲಮ್ಮ ಮೂರ್ತಿಗಳನ್ನು ಗ್ರಾಮಕ್ಕೆ ತಂದು ಮೆರವಣಿಗೆ ಮೂಲಕ ಗ್ರಾಮ ಪ್ರದಕ್ಷಿಣೆ ಮತ್ತು ಪುರ ಪ್ರವೇಶ ನಡೆಸಿದ ಸಾವರಿರಾರು ಭಕ್ತರೊಂದಿಗೆ ಹೋಮ, ಅಭಿಷೇಕ ಕೈಗೊಂಡು ಮಂತ್ರ ಘೋಷಗಳೊಂದಿಗೆ ಮೂರ್ತಿ ಪ್ರತಿಷ್ಠಾಪಿಸಿ ಜತೆಗೆ ಕಳಸಾರೋಹಣ ನೇರವೇರಿಸಿದ್ರು.
ದೇವಾಸ್ಥನದ ಉದ್ಘಾಟನಾ ಸಮಾರಂಭದಲ್ಲಿ ಬಂದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಆಯೋಜನೆ ಮಾಡಲಾಗಿತ್ತು ಭಕ್ತರು ಶ್ರೀ ಹುರುಚಲಮ್ಮ ದೇವಿಯ ದರುಷಣ ಪಡೆದು ಪುನೀತರಾದ್ರು.. ಅಲ್ಲದೆ ವಿವಿಧ ಗಣ್ಯರುಗಳು ದೇವಾಲಯದ ದಾರ್ಮಿಕ ಕಾರ್ಯಕ್ರಮಕ್ಕೆ ದೇಣಿಗೆ ನೀಡಿ ದೇವರ ಕೃಪೆಗೆ ಪಾತ್ರರಾದ್ರು..
ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಬೆಡದಹಳ್ಳಿ ಪಂಚಭೋತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮಿಜಿ, ಶಾಸಕ ಹೆಚ್ ಟಿ ಮಂಜು, ಮನ್ಮುಲ್ ನಿರ್ದೇಶಕ ಡಾಲು ರವಿ, ಆರ್ ಟಿ ಓ ಸಂಘದ ರಾಜ್ಯಾದ್ಯಕ್ಷರಾದ ಮಲ್ಲಿಕಾರ್ಜುನ್, ಜಿಲ್ಲಾ ಪಂಚಾಯತಿ ಮಾಜಿ ಉಪಾದ್ಯಕ್ಷ ಕೆ ಎಸ್ ಪ್ರಭಾಕರ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಸಮಾಜ ಸೇವರಾದ ಮೊಟ್ಟೆ ಮಂಜು, ತಾಲ್ಲೂಕು ಪಂಚಾಯಿತಿ ಮಾಜಿ ಉಪಾದ್ಯಕ್ಷ ವಡ್ಡರಹಳ್ಳಿ ರವಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೋಳಿ ವೆಂಕಟೇಶ್, ರಘು, ಆಶೋಕ್ ,ಕಿಕ್ಕೇರಮ್ಮ ಎಳನೀರು ವರ್ತಕರ ಸಂಘದ ಅಧ್ಯಕ್ಷ ದಬ್ಬೇಘಟ್ಟ ಸುಂದರ್, ಸೇರಿದಂತೆ ಶ್ರೀ ಹುರುಚಲಮ್ಮ ಟ್ರಸ್ಟ್ ನಾ ಸದಸ್ಯರುಗಳು, ಶೆಟ್ಟಹಳ್ಳಿ ಗ್ರಾಮಸ್ಥರು ಸೇರಿದಂತೆ ವಿವಿಧ ಗಣ್ಯರುಗಳು ಇದ್ದರು…
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

More Stories
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ
ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿಯ ಅಮಾವಾಸ್ಯೆ ಜಾಗರಣೆ ಕಾರ್ಯಕ್ರಮ