March 2, 2026

ನವಿಲಗೋಣ ಮಂಡಲ ಕಡತೋಕಾ ಚೌಕಗ್ರಾಮದ ಹಿಂದು ಸಮ್ಮೇಳನ

ಹೊನ್ನಾವರ: ಜಗತ್ತಿನಲ್ಲಿ ಜೀವನ ನಡೆಸಲು ಭಾರತ ದೇಶಕ್ಕಿಂತ ಉತ್ತಮ ದೇಶ ಬೇರಲು ಸಿಗಲು ಸಾಧ್ಯವಿಲ್ಲ. ಈ ದೇಶದ ಹಿರಿಮೆಗೆ ದಕ್ಕೆಯಾಗದಂತೆ ನಾವೆಲ್ಲರು ಜಾಗೃತಿ ವಹಿಸಬೇಕಿದೆ ಎಂದು ರಾಣಿಬೆನ್ನುರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಶ್ರೀ ಸ್ವಾಮಿ ಪ್ರಕಾಶನಂದಜಿ ಮಹಾರಾಜ್ ನುಡಿದರು.

ತಾಲೂಕಿನ ಕೆಕ್ಕಾರು ರಘೊತ್ತಮ ಮಠದಲ್ಲಿ ನವಿಲಗೋಣ ಮಂಡಲ ಕಡತೋಕಾ ಚೌಕಗ್ರಾಮದ ಹಿಂದು ಸಮ್ಮೇಳನ ಸಮಿತಿಯವರು ಆಯೋಜಿಸಿದ ಹಿಂದು ಸಮ್ಮೇಳನಕ್ಕೆ ಚಾಲನೆ ನೀಡಿದ ಬಳಿಕ ಆರ್ಶಿವಚನ   ನೀಡಿದ ಶ್ರೀಗಳು ಇಂದು ಹಿಂದು ಧರ್ಮ ಸೊರಗುತ್ತಿದೆ. ಪ್ರಜ್ಞಾವಂತರು ಧರ್ಮದ ಆಚರಣೆಯಿಂದ ದೂರವಾಗಿ, ಜಾತಿ, ಜಾತಿಗಳ ಬಗ್ಗೆ ತಿಕ್ಕಾಟದಿಂದ ಸಮಾಜದಲ್ಲಿ ಅಶಾಂತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಹಿಂದೂ ನಾವೆಲ್ಲರೂ ಒಂದು ಎನ್ನುವ ಭಾವನೆ ಮೂಡಿಸಿಕೊಂಡು, ನಮ್ಮ ಧಾರ್ಮಿಕ ಆಚರಣೆಯ ಮೂಲಕ ಸಂಸ್ಕಾರ ಭಾವನೆ ಮೂಡಿಸಿಕೊಳ್ಳಬೇಕು. ಜಗತ್ತಿನಲ್ಲಿ ವಿವಿಧತೆಯಲ್ಲಿ ಏಕತೆಯಿಂದ ಕೂಡಿದ್ದರೂ, ಎಲ್ಲರನ್ನು ಪ್ರೀತಿಸುವ ನಮ್ಮ ಧಾರ್ಮಿಕ ಕಾರ್ಯವು ಎಲ್ಲರಿಗೂ ಮಾದರಿಯಾಗಿದೆ. ಆದರೆ ನಮ್ಮ ಧರ್ಮದ ಬಗ್ಗೆ ಬೇರೆಯವರಿಗಿಂತ ನಮ್ಮವರೇ, ಉದಾಸೀನತೆ ತೋರಿಸುವ ಮೂಲಕ ಕೀಳರಿಮೆ ಮೂಡಿಸುತ್ತಿದ್ದಾರೆ.‌ನಮ್ಮ ಧರ್ಮದ ಬಗ್ಗೆ ಆತ್ಮಾಭಿಮಾನ ಮೂಡಿಸಿಕೊಂಡು, ಮನೆಯಿಂದಲೇ ಸಂಸ್ಕಾರ, ಸ್ವದೇಶಿ ಗುಣವನ್ನು ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಆಗಮಿಸಿದ ವಿಭಾಗ ಸಂಪರ್ಕ ಪ್ರಮುಖರಾದ ಶ್ರೀಧರ ಹಿರೇಹದ್ದ, ವಕ್ತಾರರಾದ ಅಮೃತವರ್ಷೀಣಿ ಉಮೇಶ ಹಿಂದು ಧರ್ಮದ ಹಿನ್ನಲೆ, ಧಾರ್ಮಿಕ ಆಚರಣಾ ಕ್ರಮಗಳು, ಧರ್ಮದ ಮೇಲೆ ನಡೆಯುತ್ತಿರುವ ಆಕ್ರಮಣ, ಸತ್ಕರ್ಮಗಳ ಪಾಲನೆಯ ಕುರಿತು ಮಾಹಿತಿ‌ ನೀಡಿದರು.

ಹಿಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ಹಿಂದುಗಳ ಒಗ್ಗಟ್ಟು ಪ್ರದರ್ಶನದ ಸಮ್ಮೇಳನವಾಗಿದ್ದು, ಎಲ್ಲಾ ಜಾತಿ ಭೇದ ಮರೆತು ನಾವೆಲ್ಲರೂ ಒಂದೆ ಎನ್ನುವ ಭಾವನೆಯ ಪ್ರತೀಕವೇ ಈ ಸಮಾವೇಶವಾಗಿದೆ ಎಂದರು.

ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸಾವಿತ್ರಿ ಭಟ್, ಮಾದೇವಿ ನಾಯ್ಕ, ಸಮಾಜದ ಮುಖಂಡರಾದ ಆರ್.ಎಮ್. ನಾಯ್ಕ, ಮಂಜುನಾಥ ಗೌಡ, ಪರಮೇಶ್ವರ ಗೌಡ, ಹರಿಹರ ಭಂಡಾರಿ, ಸುರೇಶ ಪಟಗಾರ, ಮೋಹನ ದೇಶಭಂಡಾರಿ, ಆರ್.ಎಮ್.ಶೇಟ್, ನರಸಿಂಹ ಶೆಟ್ಟಿ, ಸತೀಶ ನಾಯ್ಕ, ಸುಬ್ರಾಯ ಕೊಡಿಯಾ, ಕೃಷ್ಣ ಮಡಿವಾಳ, ದೇವು ಮುಕ್ರಿ, ವೆಂಕಟೇಶ ಮೊಗೇರ, ರಾಮಚಂದ್ರ ಗುನಗಾ, ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ನಾಗರಾಜ ಹೆಗಡೆ ಖಾಸ್ಕಂಡ, ಬಿಂದು ಅವಧಾನಿ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಮೊದಲು ಶಾಲಾ ವಿದ್ಯಾರ್ಥಿಗಳು, ಹಾಗೂ ಮಹಿಳೆಯರಿಂದ ಜಾನಪದ, ದೇಶಭಕ್ತಿ ಗೀತೆಗಳ ನೃತ್ಯ ಕಾರ್ಯಕ್ರಮ ಜರುಗಿತು.

About The Author

error: Content is protected !!