March 2, 2026

ಬಂಡಬೋಯನಹಳ್ಳಿಯ ಶ್ರೀ ಮಲೆಮಹದೇಶ್ವರ ಪುಣ್ಯ ಕ್ಷೇತ್ರ..

ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ಕೃಷ್ಣರಾಜಪೇಟೆ ತಾಲೂಕಿನ ಬಂಡಬೋಯನಹಳ್ಳಿಯ ಶ್ರೀ ಮಲೆಮಹದೇಶ್ವರ ಪುಣ್ಯ ಕ್ಷೇತ್ರ..

ಕೃಷ್ಣರಾಜಪೇಟೆ ಪಟ್ಟಣದಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಬಂಡಬೋಯನಹಳ್ಳಿಯ ಶ್ರೀ ಮಲೆಮಹದೇಶ್ವರ ಸುಕ್ಷೇತ್ರವು ದಿನದಿಂದ ದಿನಕ್ಕೆ ನಾಡಿನಾದ್ಯಂತ ಪ್ರಖ್ಯಾತಿಯನ್ನು ಪಡೆಯುತ್ತಿದೆ. ಬೇಡಿ ಬಂದ ಭಕ್ತಾರ್ಥರ ಇಷ್ಟಾರ್ಥಗಳನ್ನು ಕರುಣಿಸಿ ಸಂತಾನ ಭಾಗ್ಯವಿಲ್ಲದ ದಂಪತಿಗಳಿಗೆ ಸಂತಾನ ನೀಡುವ ಪುಣ್ಯಕ್ಷೇತ್ರವೆಂದೆ ಪ್ರಖ್ಯಾತಿ ಹೊಂದುತ್ತಿರುವ ಶ್ರೀ ಮಲೆ ಮಹದೇಶ್ವರ ಕ್ಷೇತ್ರವು ನೊಂದ ಜನರ ಕಣ್ಣೀರನ್ನು ಒರೆಸಿ ಸಾಂತ್ವನ ನೀಡುವ ಕಷ್ಟಗಳಿಗೆ ಪರಿಹಾರವನ್ನು ಒದಗಿಸಿಕೊಡುವ ಶರಣ ಶ್ರದ್ಧಾ ಕೇಂದ್ರವಾಗಿ ಬದಲಾಗಿದೆ. ಶ್ರೀ ಮಲೆ ಮಹದೇಶ್ವರ ಸುಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಪ್ರಕಾಶ್ ಗುರೂಜಿಯವರು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಂಕಷ್ಟಗಳನ್ನು ಆಲಿಸಿ , ಆತ್ಮ ವಿಶ್ವಾಸವನ್ನು ತುಂಬುವ ಜೊತೆಗೆ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ , ಭಕ್ತರ ಸಂಕಷ್ಟಗಳನ್ನು ದೂರ ಮಾಡುವ ದಿಕ್ಕಿನಲ್ಲಿ ಬದ್ಧತೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮಲೆ ಮಹದೇಶ್ವರ ಸುಕ್ಷೇತ್ರಕ್ಕೆ ಆಗಮಿಸುವ ಎಲ್ಲ ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ನೀಡುವ ಜೊತೆಗೆ ಮಹದೇಶ್ವರರ ಕೃಪೆಯಿಂದ ಸಂತಾನ ಭಾಗ್ಯ ಪಡೆದ ದಂಪತಿಗಳ ಮಕ್ಕಳಿಗೆ ನಾಮಕರಣವನ್ನು ಮಾಡಿ ಹರಸಿ ಆಶೀರ್ವದಿಸುತ್ತಿದ್ದಾರೆ. ಫೆಬ್ರವರಿ 13ರ ಶುಕ್ರವಾರ ಸಂಜೆ 5 ಗಂಟೆಯಿಂದ ಮಲೆ ಮಹದೇಶ್ವರರ ಹುಲಿವಾಹನೋತ್ಸವದ ಜತೆಗೆ ಲೋಕರಕ್ಷಕರಾದ ಶಿವ ಪಾರ್ವತಿಯರ ಹೂವಿನ ಪಲ್ಲಕಿಯ ರಥೋತ್ಸವವೂ ಕೂಡ ಕೃಷ್ಣರಾಜಪೇಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾ ತಂಡಗಳ ವೈಭವದೊಂದಿಗೆ ನಡೆಯುತ್ತಿದೆ.

ಕೃಷ್ಣರಾಜಪೇಟೆ ತಾಲೂಕು ಸೇರಿದಂತೆ ನಾಡಿನಾದ್ಯಂತ ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಶ್ರೀ ಮಲೆ ಮಹದೇಶ್ವರರ ಹುಲಿವಾಹನೋತ್ಸವ ಹಾಗೂ ಶಿವ ಪಾರ್ವತಿಯರ ವೈಭವದ ಹೂವಿನ ಪಲ್ಲಕ್ಕಿ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಕಾಶ್ ಗುರೂಜಿ ಮನವಿ ಮಾಡಿದ್ದಾರೆ.

ಮಹಾಶಿವರಾತ್ರಿಯ ಶುಭ ದಿನದಂದು ಸಾವಿರಾರು ಸದ್ಭಕ್ತರೊಂದಿಗೆ ಮಲೈ ಮಹದೇಶ್ವರ ಬೆಟ್ಟಕ್ಕೆ ಯಾತ್ರೆ ಹೋಗುವ ಕಾರ್ಯವನ್ನು ಕೂಡ ಪೂಜ್ಯ ಪ್ರಕಾಶ್ ಗುರೂಜಿಯವರು ಹಮ್ಮಿಕೊಂಡಿದ್ದಾರೆ. ಸದ್ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಿ ಭಕ್ತರ ನೋವಿಗೆ ಧನ್ಯಾಗುವ ಕಾರ್ಯವನ್ನು ಮಾಡುತ್ತಿರುವ ಪ್ರಕಾಶ್ ಗುರೂಜಿಯವರ ಧಾರ್ಮಿಕ ಕಾರ್ಯಕ್ರಮವನ್ನು ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಭಕ್ತಾದಿಗಳು ಶ್ಲಾಘಿಸಿದ್ದಾರೆ.

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!