ಶಿರಾಲಿಯ ಪ್ರೀತಿ ಸ್ಪೋರ್ಟ್ಸ್ ಕ್ಲಬ್‌ನ ಮಾನವೀಯ ನಡೆ;
ಭಟ್ಕಳ: ಸಮಾಜಮುಖಿ ಕಾರ್ಯಗಳಿಂದಲೇ ಗುರುತಿಸಿಕೊಂಡಿರುವ ಶಿರಾಲಿಯ ಪ್ರೀತಿ ಸ್ಪೋರ್ಟ್ಸ್ ಕ್ಲಬ್ ಈ ಬಾರಿ ಮಾದರಿಯಾದ ನಿರ್ಧಾರ ಕೈಗೊಂಡಿದೆ. ಪ್ರತಿವರ್ಷವೂ ಕ್ರೀಡಾಕೂಟ ಅಥವಾ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿರುವ ಕ್ಲಬ್, ಈ ಬಾರಿ ಮಾರ್ಚ್ 7 ರಂದು ನಡೆಯಲಿರುವ ಮಾವಳ್ಳಿ ಹೋಬಳಿಯ ಪ್ರೊ ಕಬಡ್ಡಿ ಪಂದ್ಯಾವಳಿಯಿಂದ ಉಳಿಯುವ ಸಂಪೂರ್ಣ ಹಣವನ್ನು ಕು. ಸಂಜೀವ್ ಜಯಂತ್ ನಾಯ್ಕ್ ಅವರ ಕಿಡ್ನಿ ಹಾಗೂ ಲಿವರ್ ಚಿಕಿತ್ಸೆಗೆ ನೀಡಲು ತೀರ್ಮಾನಿಸಿದೆ.
ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಸಂಜೀವ್ ಅವರಿಗೆ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣ ಅಗತ್ಯವಿದ್ದು, ಕ್ಲಬ್‌ನ ಈ ಮಾನವೀಯ ಹೆಜ್ಜೆ ಎಲ್ಲರ ಗಮನ ಸೆಳೆದಿದೆ.

ಕ್ರೀಡಾಕೂಟವನ್ನು ಸೇವಾ ಕಾರ್ಯಕ್ಕೆ ಜೋಡಿಸಿರುವುದು ಶ್ಲಾಘನೀಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿಯವರೆಗೂ ಸಂಜೀವ್ ಚಿಕಿತ್ಸೆಗೆ ಸಹಾಯ ನೀಡಲು ಸಾಧ್ಯವಾಗದವರು, ತಮ್ಮ ಕೈಲಾದ ನೆರವು ನೀಡಿ ಮಾನವೀಯತೆಗೆ ಕೈಜೋಡಿಸುವಂತೆ ಕ್ಲಬ್ ಸದಸ್ಯರು ಮನವಿ ಮಾಡಿದ್ದಾರೆ. ಸಮಾಜದ ಒಗ್ಗಟ್ಟು ಮತ್ತು ಸಹಕಾರದಿಂದ ಯುವಕನ ಬದುಕಿಗೆ ಬೆಳಕು ನೀಡಬಹುದು ಎಂಬ ವಿಶ್ವಾಸ ವ್ಯಕ್ತವಾಗಿದೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ