ಹೊನ್ನಾವರ: ಜನಜೀವನಕ್ಕೆ ಬೆಳಕು ನೀಡಿದ ಶರಾವತಿ ಮಡಿಲಿನಲ್ಲಿ ಯಕ್ಷಗಾನದ ಮೇಳಗಳು ಸಾಂಪ್ರದಾಯಿಕ ಕಲೆಯನ್ನು ಎತ್ತರಕ್ಕೆ ಏರಿಸಿದೆ. ಹೊನ್ನಾವರವು ಸೌಹಾರ್ದತೆಗೆ ಹೆಸರಾಗಿದೆ ಎಂದು ಸಾಹಿತಿ, ಶಿಕ್ಷಕ ಎಸ್.ಎಂ.ಹೆಗಡೆ ಹೇಳಿದರು.
ತಾಲೂಕಿನ ಅರೆಅಂಗಡಿಯಲ್ಲಿ ಆಯೋಜಿಸಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಮಂಥನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೋಷ್ಠಿಯಲ್ಲಿ ಮೂರು ವಿಷಯಗಳನ್ನು ಸಮರ್ಥವಾಗಿ ಮಂಡಿಸಲಾಗಿದೆ. ಶರಾವತಿಯು ನಾಡಿನ ಬೆಳಕಿನ ಮೂಲ. ರೈತರ ಬಾಳಿಗೆ ಹಸಿರನ್ನು ನೀಡಿದೆ. ಹೊನ್ನಾವರದ ಯಕ್ಷಗಾನ ಕಲಾವಿದರು ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಇಲ್ಲಿನ ಮೇಳಗಳು ಸಾಂಪ್ರದಯಿಕ ಚೌಕಟ್ಟಿನೊಂದಿದೆ ಮುನ್ನಡೆದಿವೆ. ಎಲ್ಲಾ ಸಮಾಜದವರು ಒಂದಾಗಿ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸುವುದು ಹೊನ್ನಾವರದ ವಿಶೇಷ. ಈ ಗೋಷ್ಠಿಯಲ್ಲಿ ಮಂಡನೆಯಾದ ಮೂರೂ ವಿಷಯಗಳೂ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿವೆ ಎಂದರು.
‘ಶರಾವತಿ ಸುತ್ತ ಒಂದು ನೋಟ’ ಕುರಿತು ಸಂದೀಪ ಭಟ್ಟ, ‘ಹೊನ್ನಾವರದ ಯಕ್ಷಗಾನದ ಮೇಳಗಳು’ ಕುರಿತು ಉಪನ್ಯಾಸಕ ಆನಂದ ನಾಯ್ಕ, ‘ಸೌಹಾರ್ದತೆ ಮತ್ತು ಹೊನ್ನಾವರ’ ಕುರಿತು ಪ್ರಶಾಂತ ಪಟಗಾರ ಕಡತೋಕ ವಿಷಯ ಮಂಡಿಸಿದರು.
ಆನಂದ ಯಶ್ವಂತ ನಾಯ್ಕ ಆಶಯ ನುಡಿಯನ್ನಾಡಿದರು.
ಸರ್ವಾಧ್ಯಕ್ಷ ಸುರೇಶ ನಾಯ್ಕ, ವಿವಿಧ ಸಂಘಟನೆಯ ಪ್ರಮುಖರಾದ ಜಿ.ಎನ್.ಗೌಡ ಕೊಡಾಣಿ, ಡಾ. ರಾಜು ಮಾಳಗಿಮನೆ, ಜೀವೋತ್ತಮ ನಾಯಕ, ಸಂತ್ಯಾಗ ಹೊರ್ಟಾ, ಎಂ.ಜಿ.ಹೆಗಡೆ, ಜಿ.ಕೆ.ಗೌಡ ಇದ್ದರು.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ