March 1, 2026

ಕಂಬದಕೋಣೆ ಗ್ರಾಮ ಪಂಚಾಯತ್‌ನಲ್ಲಿ ಸುದ್ಧಿಗೋಷ್ಟಿ

ಬೈಂದೂರು : ಕಂಬದಕೋಣೆ ಗ್ರಾಮ ಪಂಚಾಯತಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಹಾಗೂ ಎಸ್.ಸಿ., ಎಸ್.ಟಿ. ಹಣವನ್ನು ದುರ್ಬಳಕೆ ಮಾಡಲಾಗಿದೆ. ಯಾವುದೇ ಯೋಜನೆಯನ್ನು ಕಾರ್ಯ ರೂಪಕ್ಕೆ ತರುವಲ್ಲಿ ಪಂಚಾಯತ್ ರಾಜ್ ಕಾಯ್ದೆ, ನಿಯಮಗಳನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ರಾಘವೇಂದ್ರ ಹೇರಂಜಾಲು ಆರೋಪಿಸಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಲು ಶುಕ್ರವಾರ ಕಂಬದಕೋಣೆ ಗ್ರಾಮ ಪಂಚಾಯತ್‌ನಲ್ಲಿ ಸುದ್ಧಿಗೋಷ್ಟಿ ನಡೆಸಲಾಯಿತು. ಸುದ್ಧಿಗೋಷ್ಟಿಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ ದೇವಾಡಿಗ ಮಾತನಾಡಿ, ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಹಗರಣಗಳು ನಡೆದಿಲ್ಲ, ಗ್ರಾಮ ಸ್ವರಾಜ್ ಕಾಯ್ದೆ ಹಾಗೂ ದಾಖಲೆಯ ಪ್ರಕಾರ ಕೆಲಸಗಳು ನಡೆದಿರುತ್ತವೆ. ದೂರುದಾರರು ಸಾಮಾಜಿಕ ಜಾಲ ತಾಣಗಳಲ್ಲಿ ಅಧ್ಯಕ್ಷರ ವಿರುದ್ದ ಅಪಪ್ರಚಾರ ಮಾಡಿ ಅವರ ಹುದ್ದೆಗೆ ಅಗೌರವವನ್ನು ಉಂಟುಮಾಡಿದ್ದಾರೆ.

ಈ ಭಾಗದ ಎಲ್ಲಾ ಎಸ್.ಸಿ., ಎಸ್.ಟಿ. ಕುಟುಂಬಕ್ಕೆ ಸಿಗಬೇಕಾದ ಸೌಲಭ್ಯವನ್ನು ಸಮಾನವಾಗಿ ಹಂಚಲಾಗಿದೆ. ತುರ್ತು ಕಾಮಗಾರಿಯಲ್ಲೂ ಭ್ರಷ್ಟಾಚಾರ ನಡೆದಿಲ್ಲ ಈ ಬಗ್ಗೆ ಯಾವುದೇ ತನಿಖೆಗೂ ಸಿದ್ದವಿರುವುದಾಗಿ ಹೇಳಿದರು. ಸುದ್ಧಿಗೋಷ್ಟಿಯಲ್ಲಿ ಕಂಬದಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಸದಸ್ಯರಾದ ರಮೇಶ ದೇವಾಡಿಗ, ಸುಕೇಶ್ ಶೆಟ್ಟಿ, ಸತೀಶ ದೇವಾಡಿಗ, ಶಾರದಾ ದೇವಾಡಿಗ, ಸುಶೀಲ, ದೇವಕಿ ಶೆಟ್ಟಿ, ಸುಬ್ರಹ್ಮಣ್ಯ ಜೋಗಿ, ಕನಕ, ರಾಗಿಣಿ, ಜಲಜಾಕ್ಷಿ ಗಾಣಿಗ, ಗಣೇಶ್ ಆಚಾರ್ ಇದ್ದರು.

ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!