March 1, 2026

ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿಯ ಅಮಾವಾಸ್ಯೆ ಜಾಗರಣೆ ಕಾರ್ಯಕ್ರಮ

ಕೆಆರ್ ಪೇಟೆ : ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಬಹುದಾಗಿದೆ, ಸಮಾಜ ಸೇವಕ ಮಲ್ಲಿಕಾರ್ಜುನ ಅಭಿಮತ.

ಮಹಾಶಿವರಾತ್ರಿಯ ಜಾಗರಣೆಯಲ್ಲಿ ಪರಶಿವನನ್ನು ಪ್ರಾರ್ಥಿಸಿ , ನಮ್ಮ ಕಷ್ಟಗಳನ್ನು ನಿವೇದನೆ ಮಾಡಿಕೊಂಡರೆ ಸಾಕು ನಮ್ಮ ಕಷ್ಟಗಳೆಲ್ಲವೂ ದೂರಾಗಿಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಮಾಜ ಸೇವಕ ಹಾಗೂ ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.

ಅವರು ಕೃಷ್ಣರಾಜಪೇಟೆ ತಾಲೂಕಿನ ಸಂತೆ ಬಾಚಹಳ್ಳಿ ಹೋಬಳಿಯ ಬಡದಹಳ್ಳಿಯ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿಯ ಅಮಾವಾಸ್ಯೆ ಜಾಗರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, 108 ಹೋಮ ಕುಂಡಗಳ ಹವಿಸ್ಸಿನ ಪೂರ್ಣಾವತಿಯನ್ನು ಸಮರ್ಪಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನೆರೆದಿದ್ದ ಸದ್ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿಯು ದೊರೆಯುವುದಲ್ಲದೆ ನಾವು ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸನ್ನು ಕೂಡ ಪಡೆಯಬಹುದಾಗಿದೆ ಆದ್ದರಿಂದ ಮಾನವರಾದ ನಾವು ಮಾನಸಿಕ ಒತ್ತಡಗಳಿಂದ ದೂರವಾಗಲು ದೇವಾಲಯಗಳು ಹಾಗೂ ಗುಡಿ ಗೋಪುರಗಳು ಮಠಗಳಿಗೆ ಹೋಗಿ ಮನಸ್ಸಿಗೆ ಶಾಂತಿ ಪಡೆದು ಏಕಾಗ್ರತೆಯನ್ನು ಹೊಂದಬಹುದಾಗಿದೆ. ಪ್ರಕೃತಿಯನ್ನೇ ದೇವರೆಂದು ಪೂಜಿಸಿ ಆರಾಧಿಸುವ ಬೆಳೆದಹಳ್ಳಿಯ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ಇಂದು 108 ಹೋಮಕುಂಡಗಳನ್ನು ಸ್ಥಾಪಿಸಿ ಅಗ್ನಿಯ ಮೂಲಕ ಲೋಕ ರಕ್ಷಕನಾದ ಪರಶಿವನಿಗೆ ಹವಿಸ್ಸನ್ನು ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಬೆಡದಹಳ್ಳಿ ಮಠದಲ್ಲಿ 108 ಹೋಮಕುಂಡಗಳನ್ನು ಸ್ಥಾಪಿಸಿ, ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ರುದ್ರಮುನಿ ಸ್ವಾಮೀಜಿಯವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನನಗೆ ಸಂತೋಷವಾಗಿದೆ. ನಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ನ್ಯಾಯ ನೀತಿ ಧರ್ಮದ ಮಾರ್ಗದಲ್ಲಿಯೇ ಸಾಗುವ ಮೂಲಕ ಜೀವನದಲ್ಲಿ ಗುರಿ ಸಾಧನೆ ಮಾಡಬೇಕು ಎಂದು ಮಲ್ಲಿಕಾರ್ಜುನ ಹೇಳಿದರು.

ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಮಹಾಶಿವರಾತ್ರಿಯ ಅಮಾವಾಸ್ಯೆ ಜಾಗರಣೆ , ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನಪ್ರಸಾದವನ್ನು ಸ್ವೀಕರಿಸಿ ಭಗವಂತನ ಕೃಪೆಗೆ ಪಾತ್ರರಾದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!