ಭಟ್ಕಳ: ಪಟ್ಟಣ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗಳ ಪಿಸಿ (ಪೊಲೀಸ್ ಕಾನ್ಸ್ಟೇಬಲ್) ಮತ್ತು ಎಚ್ಪಿಸಿ (ಹೆಡ್ ಪೊಲೀಸ್ ಕಾನ್ಸ್ಟೇಬಲ್) ಸಿಬ್ಬಂದಿಗೆ ಹೊಸ ಮಾದರಿಯ ನೇವಿ ಬ್ಲೂ ಪೀಕ್ ಕ್ಯಾಪ್ಗಳನ್ನು ವಿತರಿಸಲಾಗಿದ್ದು, ಪಡೆಗೆ ಹೊಸ ಲುಕ್ ದೊರೆತಿದೆ.

ರಾಜ್ಯ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಪರಿಚಯಿಸಲಾದ ಈ ಬ್ಲೂ ಪೀಕ್ ಕ್ಯಾಪ್ಗಳು ಈಗಾಗಲೇ ಹಲವೆಡೆ ಜಾರಿಗೆ ಬಂದಿದ್ದು, ಇದೀಗ ಭಟ್ಕಳದಲ್ಲೂ ಅಧಿಕೃತವಾಗಿ ವಿತರಣೆ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್ 2025ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ವಿನ್ಯಾಸದ ಕ್ಯಾಪ್ನ್ನು ಅನಾವರಣಗೊಳಿಸಿದ್ದರು.


ಉತ್ತರ ಕನ್ನಡ ಜಿಲ್ಲೆಯಾದ್ಯಂತ ಹೊಸ ಕ್ಯಾಪ್ಗಳ ವಿತರಣೆ ಪ್ರಾರಂಭವಾಗಿದ್ದು, ಅದರಂತೆ ಭಟ್ಕಳ ತಾಲೂಕಿನ ಮೂರು ಪೊಲೀಸ್ ಠಾಣೆಗಳಲ್ಲೂ ಒಟ್ಟು 120 ಸಿಬ್ಬಂದಿಗಳಿಗೆ ಪೀಕ್ ಕ್ಯಾಪ್ ನೀಡಲಾಗಿದೆ. ಕಾನ್ಸ್ಟೇಬಲ್, ಹೆಡ್ ಕಾನ್ಸ್ಟೇಬಲ್ ಹಾಗೂ ಮಹಿಳಾ ಸಿಬ್ಬಂದಿ ಸೇರಿದಂತೆ ಎಲ್ಲ ಹಂತದ ಸಿಬ್ಬಂದಿಗೂ ಈ ಹೊಸ ಕ್ಯಾಪ್ ವಿತರಿಸಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಸಿಪಿಐ ದಿವಾಕರ ಎಂ ಅವರು 54 ಸಿಬ್ಬಂದಿಗಳಿಗೆ ಕ್ಯಾಪ್ ವಿತರಿಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಿಪಿಐ ವೆಂಕಟೇಶ್ ಎಸ್. ಮುರ್ನಾಲ್ 36 ಮಂದಿಗೆ ವಿತರಣೆ ನಡೆಸಿದರು. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪಿಎಸೈ ಹನುಮಂತ ಬಿರಾದಾರ 30 ಸಿಬ್ಬಂದಿಗಳಿಗೆ ಪೀಕ್ ಕ್ಯಾಪ್ ಹಂಚಿದರು.
ಈ ವೇಳೆ ಅಧಿಕಾರಿಗಳು ಸಿಬ್ಬಂದಿಗೆ ಶುಭಾಶಯ ಕೋರಿ, ಹೊಸ ರೂಪದಲ್ಲಿ ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿದರು. ನೇವಿ ಬ್ಲೂ ಪೀಕ್ ಕ್ಯಾಪ್ ಪೊಲೀಸ್ ದಳದ ಶಿಸ್ತಿನೊಂದಿಗೆ ಆಧುನಿಕತೆಯ ಸಂಕೇತವಾಗಿ ಕಾಣಿಸಿಕೊಂಡಿದ್ದು, ಸಿಬ್ಬಂದಿಯಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಖಾಕಿ ವೇಷಭೂಷಣಕ್ಕೆ ಇದೀಗ ಹೊಸ ಕಂಗೊಳ್ ಸೇರಿದೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ