ಶಿರಸಿ: ವಿಶ್ವ ಪರಂಪರೆಯ ಸಮಾವೇಶದ ಮಾರ್ಗ ಸೂಚಿಗಳ ನಿಬಂಧನೆಗಳಿಗೆ ಅನುಸಾರವಾಗಿ ಕ್ರಮ ಜರುಗಿಸಬೇಕೆಂದು ಹಾಗೂ ಸಮಾವೇಶದ ನಿಬಂಧನೆಗಳನ್ನ ಪಾಲಿಸಬೇಕೆಂದು ಭಾರತ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಯುನೆಸ್ಕೋ ಲಿಖಿತವಾಗಿ ಉತ್ತರಿಸಿದೆ ಎಂದು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೇಂದ್ರ ನೀರಾವರಿ ಅಭಿವೃದ್ದಿ ಪ್ರಾಧೀಕಾರವು, ಅಘನಾಶಿನಿ ವೇದಾವತಿ ನದಿ ಜೋಡಣೆ ಯೋಜನೆಗೆ ಪ್ರಾಥಮಿಕ ಕಾರ್ಯಸಾಧ್ಯತಾ ವರದಿಗೆ ವಿರೋಧಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಯುನೆಸ್ಕೋದ ವಿಶ್ವ ಪರಂಪರೆಯ ಕೇಂದ್ರಕ್ಕೆ ಪ್ರಸಕ್ತ ವರ್ಷದ ಫೇಬ್ರವರಿ ೧೭ ರಂದು ಬರೆಯಲಾದ ಮೇಲ್ಮನವಿಗೆ ವಿಶ್ವ ಪರಂಪರೆಯ ಕೇಂದ್ರ ಕಾರ್ಯದರ್ಶಿ ಲಿಖಿತವಾಗಿ ಉತ್ತರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಘನಾಶಿನಿ ನದಿ ಜೋಡಣೆಗೆ ವ್ಯಾಪಕವಾದ ಜನಾಂದೋಲನ ಉಂಟಾಗಿರುವ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಜನಜಾಗೃತೆ ಹಮ್ಮಿಕೊಂಡು ೨೫ ಸಾವಿರ ಕುಟುಂಬಕ್ಕೂ ಮಿಕ್ಕಿ, ನದಿ ಜೋಡಣೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಕ್ಷೇಪ ಪತ್ರ ಹೋರಾಟಗಾರರ ವೇದಿಕೆಯು ಸಲ್ಲಿಸಿತು. ಯೋಜನೆಗೆ ಅಕ್ಷೇಪಿಸಿ ಯುನೆಸ್ಕೋ ವಿಶ್ವ ಪರಂಪರೆ ಕೇಂದ್ರಕ್ಕೂ ಕಾನೂನಾತ್ಮಕ, ನೈಸರ್ಗಿಕ, ಬೌಗೋಳಿಕ ಪರಿಸರ ಸೂಕ್ಷö್ಮ ಪ್ರದೇಶ ಪಶ್ಚಿಮ ಘಟ್ಟದಲ್ಲಿನ ಪರಿಸರ ಮೌಲ್ಯತೆ ಅಂಶಗಳನ್ನು ಉಲ್ಲೇಖಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಂತ್ರಿಕ ಮತ್ತು ಪರಿಸರ ವಿರೋಧಿ ಯೋಜನೆ ವಿರುದ್ದ ರಾಷ್ಟಿçÃಯ ಪ್ರಾಧಿಕಾರದ ಗಮನಕ್ಕೂ ತರಬಹುದಾಗಿದೆ ಎಂದು ಮಾರ್ಚ ೧೬ ರಂದು ಬರೆದ ಉತ್ತರದಲ್ಲಿ ಪ್ರಸ್ತಾಪಿಸಿದೆ ಅಲ್ಲದೇ, ಪಶ್ಚಿಮ ಘಟ್ಟಗಳ ರಕ್ಷಣೆ, ಸಂರಕ್ಷಣೆಯಲ್ಲಿ ಸಂಬAಧಪಟ್ಟ ಎಲ್ಲಾ ಹಂತದಲ್ಲೂ ಬೆಂಬಲಿಸಲು ಭದ್ದವಾಗಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಿದೆ ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮ ಘಟ್ಟ- “ ವಿಶ್ವ ಪರಂಪರೆಯ ಆಸ್ತಿ :
ಯುನೆಸ್ಕೋ ವಿಶ್ವ ಪರಂಪರೆಯ ಸಮಾವೇಶಕ್ಕೆ ಏಕಕಾಲದಲ್ಲಿ ಅಳವಡಿಸಿಕೊಳ್ಳಲಾದ ರಾಷ್ಟಿçÃಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ರಕ್ಷಣೆಗೆ ಸಂಬAಧಿಸಿ ೧೯೭೨ ರ ಸಮಾವೇಶದ ಶಿಪಾರಸ್ಸಿನ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ರಕ್ಷಣೆ, ಸಂರಕ್ಷಣೆ ಮತ್ತು ಪ್ರಸ್ತುತಿಯ ಜವಾಬ್ದಾರಿಯು ಮೊದಲನೆದಾಗಿ ಅದು ಇರುವ ರಾಜ್ಯಗಳ ಮೇಲಿದೆ ಎಂಬುದನ್ನು ಉತ್ತರದಲ್ಲಿ ಪ್ರಸ್ತಾಪಿಸಿ ಪಶ್ಚಿಮ ಘಟ್ಟಗಳು ವಿಶ್ವ ಪರಂಪರೆಯ ಆಸ್ತಿ ಎಂದು ಪತ್ರದಲ್ಲಿ ಉಲ್ಲೇಖಿಸದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಕ್ಕೆ ಯುನೆಸ್ಕೊ ಅಭಿನಂದನೆ:
ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಸ್ತಾವಿತ ಅಘನಾಶಿನಿ- ವೇದಾವತಿ ನದಿ ಜೋಡಣೆ ಯೋಜನೆ ಮತ್ತು ಇತರ ಅಭೀವೃದ್ದಿ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೇಲ್ಮನವಿಗೆ ಹಾಗೂ ಪರಂಪರೆಯ ರಕ್ಷಣೆ, ಸಂರಕ್ಷಣೆ ಮತ್ತು ಪ್ರಸರಣದ ಬಗ್ಗೆ ಆಸಕ್ತಿ ಮತ್ತು ಪ್ರಯತ್ನಗಳಿಗೆ ಯುನೆಸ್ಕೋ ವಿಶ್ವ ಪರಂಪರೆ ಕೇಂದ್ರ ಕಾರ್ಯದರ್ಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

More Stories
ಮಂಜುಗುಣಿ ರಥೋತ್ಸವ ಸಡಗರ
ನುಡಿದು ತೋರುವದಕ್ಕಿಂತ ನಡೆದು ತೋರಿಸಿ: ಹುಕ್ಕೇರಿ ಶ್ರೀ
ವೈದ್ಯಕೀಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ 6ನೇ ರ್ಯಾಂಕ್