ಭಟ್ಕಳ: ನಗರದ ಮುಖ್ಯ ರಸ್ತೆಯಲ್ಲಿರುವ ಭಟ್ಕಳ ಅರ್ಬನ್ ಬ್ಯಾಂಕ್ ಸಮೀಪದ ಸಯ್ಯದ್ ಕಾಜ್ಮಿ ಟವರ್‌ನಲ್ಲಿ ಬೆಳಕೆಯ ಪಾಂಡುರAಗ ನಾಯ್ಕ ಅವರ ವತಿಯಿಂದ ಆಯೋಜಿಸಲಾದ ನಿತ್ಯ ಹಲಸು ಮೇಳವನ್ನು ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಅವರು ಹಲಸಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಧಾಕೃಷ್ಣ ಭಟ್ಟ ಅವರು, ಹಲವು ಹಣ್ಣುಗಳು ಸೀಸನಲ್ ಆಗಿದ್ದು ಇಂದಿನ ದಿನಗಳಲ್ಲಿ ಅವುಗಳ ಲಭ್ಯತೆ ಅಪರೂಪವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಾರ್ಚ್ ತಿಂಗಳಲ್ಲಿಯೇ ವಿವಿಧ ರುಚಿಯ ಹಲಸಿನ ಹಣ್ಣುಗಳನ್ನು ತರಿಸಿ ಭಟ್ಕಳದ ಜನತೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಅಲ್ಲದೇ ಹಲಸಿನ ಸೀಸನ್ ಮುಗಿಯುವವರೆಗೆ ಮೇಳವನ್ನು ಮುಂದುವರಿಸುವ ಭರವಸೆ ನೀಡಿರುವುದು ಸಂತೋಷಕರ ಸಂಗತಿ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಇದೇ ಸ್ಥಳದಲ್ಲಿ ಮಾವು ಸೇರಿದಂತೆ ವಿವಿಧ ಹಣ್ಣುಗಳು ಹಾಗೂ ಹಣ್ಣುಗಳಿಂದ ತಯಾರಿಸಲಾದ ಹಲ್ವಾ ಮತ್ತು ಇತರ ತಿನಿಸುಗಳನ್ನು ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಪಾಂಡುರAಗ ನಾಯ್ಕ ವ್ಯಕ್ತಪಡಿಸಿದ್ದು, ಈ ಯೋಜನೆ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಸಮಾಜ ಸೇವಕ ನಜೀರ್ ಕಾಶಿಮಜಿ ಮಾತನಾಡಿ, ಹಲಸು ಮತ್ತು ಮಾವು ಎಲ್ಲರೂ ಇಷ್ಟಪಡುವ ಹಣ್ಣುಗಳಾಗಿದ್ದು, ಸಾಮಾನ್ಯವಾಗಿ ಮಳೆಗಾಲದಲ್ಲಿ ದೊರೆಯುವ ಹಲಸು ಈಗಲೇ ಲಭ್ಯವಾಗುತ್ತಿರುವುದು ಸಂತೋಷಕರ ವಿಷಯವಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೇಳದ ರೂವಾರಿ ಪಾಂಡುರAಗ ನಾಯ್ಕ ಉಪಸ್ಥಿತರಿದ್ದರು. ಪ್ರಮುಖರಾದ ಅಬ್ದುಲ್ ವಾಸಿಫ್, ಲಕ್ಕಿ ಫ್ಯಾಮಿಲಿಯ ಸದಸ್ಯರು, ರಿಜ್ವಾನ್, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ನಾಯಕ, ಹಿರಿಯ ವೈದ್ಯೆ ಡಾ. ಸವಿತಾ ಕಾಮತ್, ಸನಾ ಆಪ್ಟಿಷಿಯನ್ಸ್ನ ಅಬ್ದುಲ್ ಜಬ್ಬಾರ್ ಸೇರಿದಂತೆ ಹಲವರು ಭಾಗವಹಿಸಿ ಮೇಳಕ್ಕೆ ಶುಭ ಕೋರಿದರು.

More Stories
ಹೊನ್ನಾವರ ಮಂಡಳ ಅಂತರ್ಗತ ಭಟ್ಕಳ ಹವ್ಯಕ ವಲಯದ ಐದನೇ ವಲಯೋತ್ಸವ
ಹಿಂದೂ ಸಮಾಜ ಒಂದಾದರೆ ಜಗತ್ತು ಗೌರವಿಸುತ್ತದೆ: ಅನಂತಕುಮಾರ ಹೆಗಡೆ
ಜಯ ಕರ್ನಾಟಕ ಸಂಘಟನೆಯಿಂದ ಕೆ.ಆರ್. ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ,