ಭಟ್ಕಳ: ತಾಲೂಕಿನ ಸಾರದಹೊಳೆ ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ಮಾರ್ಚ್ 27 ರಂದು ಶ್ರೀ ರಾಮನವಮಿ ಉತ್ಸವ ಹಾಗೂ ಏಪ್ರಿಲ್ 1 ಮತ್ತು 2 ರಂದು ನಾಲ್ಕನೇ ವರ್ಷದ ವರ್ಧಂತೋತ್ಸವವನ್ನು ವಿಜೃಂಭಣೆಯಿAದ ನಡೆಸಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ನಾಗೇಂದ್ರ ನಾಯ್ಕ ತಿಳಿಸಿದ್ದಾರೆ.
ರಾಮನವಮಿ ಅಂಗವಾಗಿ ಬೆಳಿಗ್ಗೆ 9 ಗಂಟೆಯಿAದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 5:30ಕ್ಕೆ ಶ್ರೀ ದೇವರ ಬೆಳ್ಳಿ ಪಲ್ಲಕ್ಕಿ ಮೆರವಣಿಗೆ ವಿಶೇಷ ಆಕರ್ಷಣೆಯಾಗಲಿದೆ. ವರ್ಧಂತೋತ್ಸವದ ಪ್ರಯುಕ್ತ ಏಪ್ರಿಲ್ 1 ರಂದು ಸಂಜೆ 5 ಗಂಟೆಯಿAದ ಧಾರ್ಮಿಕ ವಿಧಿವಿಧಾನಗಳೊಂದಿಗೆ 108 ಕಲಶ ಸ್ಥಾಪನೆ ನಡೆಯಲಿದೆ. ಬಳಿಕ ಸಂಜೆ 6ರಿಂದ ರಾತ್ರಿ 8:30ರವರೆಗೆ ಶ್ರೀ ಸೀತಾರಾಮ ಕಲ್ಯಾಣೋತ್ಸವ ಜರುಗಲಿದ್ದು, ರಾತ್ರಿ ಅನ್ನಪ್ರಸಾದ ವ್ಯವಸ್ಥೆ ಇರಲಿದೆ.
ಏಪ್ರಿಲ್ 2 ರಂದು ಬೆಳಿಗ್ಗೆ 6 ಗಂಟೆಯಿAದ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿವೆ. ಮಧ್ಯಾಹ್ನ 12:30ಕ್ಕೆ ಸಚಿವ ಮಂಕಾಳ ಎಸ್ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಂತರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಜಗದ್ಗುರು ಪೀಠದ ಪೀಠಾಧೀಶರಾದ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಾದಪೂಜೆ, ಆಶೀರ್ವಚನ ಮತ್ತು ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿದೆ.
ಸಂಜೆ 3:30ಕ್ಕೆ ಶ್ರೀ ಕೋಟೆ ಜಟಗನ ಪೂಜೆ, ಪಲ್ಲಕ್ಕಿ ಮೆರವಣಿಗೆ, 6:30ಕ್ಕೆ ಬಲಿ ಉತ್ಸವ, 8ಕ್ಕೆ ಕಟ್ಟೆ ಪೂಜೆ, 9ಕ್ಕೆ ರಂಗಪೂಜೆ ಹಾಗೂ 9:30ಕ್ಕೆ ಶಯನೋತ್ಸವ ನಡೆಯಲಿದೆ. ರಾತ್ರಿ 10ಕ್ಕೆ ದೈವ ಸಂಕಲ್ಪ ದೈವಿಕ ನಾಟಕ ಪ್ರದರ್ಶನ ಇರಲಿದೆ. ಏಪ್ರಿಲ್ 3 ರಂದು ಬೆಳಿಗ್ಗೆ 7:30ರಿಂದ 9:30ರವರೆಗೆ ಓಕುಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮಿತಿ ಮನವಿ ಮಾಡಿದೆ. ಉಪಾಧ್ಯಕ್ಷ ರಾಜು ಎನ್ ನಾಯ್ಕ, ಸದಸ್ಯರಾದ ಆರ್.ಕೆ. ನಾಯ್ಕ, ಸುಬ್ರಾಯ ನಾಯ್ಕ ಸೇರಿದಂತೆ ಕಾರ್ಯದರ್ಶಿ ರವೀಂದ್ರ ವಿ ನಾಯ್ಕ, ವಾಸುದೇವ ಎಮ್ ನಾಯ್ಕ, ಅಣ್ಣಪ್ಪ ಬಿ ನಾಯ್ಕ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

More Stories
ಭಟ್ಕಳದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂಭ್ರಮ
ಭಟ್ಕಳದಲ್ಲಿ ಗ್ರಾಹಕರ ಜಾಗೃತಿ ಕಾರ್ಯಕ್ರಮ
ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಭಟ್ಕಳ ಪಿ.ಎಸ್.ಐ. ನವೀನ್ ನಾಯ್ಕ ಆಯ್ಕೆ