ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಂಗಾರಖAಡ ಪ್ರದೇಶದಲ್ಲಿ ಅಘನಾಶಿನಿ ನದಿ ಪೂಜೆ ಹಾಗೂ ಆರತಿ ಕಾರ್ಯಕ್ರಮವು ಅಪಾರ ಭಕ್ತಿ, ಶ್ರದ್ಧೆಯಿಂದ ವಿಜ್ರಂಭಣೆಯಿAದ ನಡೆಯಿತು. ಮಾರ್ಚ್ 22, 2026ರ ಭಾನುವಾರ ಸಂಜೆ ಜೇನುಕೋಡ್ಲು ಹಂಗಾರಖAಡ ರಸ್ತೆಯಲ್ಲಿ ಈ ವಿಶಿಷ್ಟ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಪರಮ ಪೂಜ್ಯ ಶ್ರೀ ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಮಹಾಸ್ವಾಮಿಗಳವರ ಆದೇಶದಂತೆ ಹಾಗೂ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ವೇದಮೂರ್ತಿ ಶ್ರೀ ವಿನಾಯಕ ಸುಬ್ರಾಯ ಭಟ್ ಮತ್ತೀಹಳ್ಳಿ ಅವರ ದಿವ್ಯ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಪೂಜಾ ವಿಧಿಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಮಾತನಾಡಿದ ವೇದಮೂರ್ತಿ ಅವರು, ಪರಿಸರವನ್ನು ಪೂಜಿಸಿದರೆ ಅದು ನಮಗೆ ಒಳಿತನ್ನು ನೀಡುತ್ತದೆ, ಆದರೆ ಪರಿಸರ ಹಾನಿ ಮಾಡಿದರೆ ಅದರಿಂದ ನಮಗೂ ಅನಿಷ್ಠವಾಗುತ್ತದೆ ಎಂದು ಎಚ್ಚರಿಸಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಸ್ಪಷ್ಟವಾಗಿ ಹೇಳಿದರು.
ವಿಶೇಷ ಆಹ್ವಾನಿತರಾದ ಅನಂತಮೂರ್ತಿ ಹೆಗಡೆ ಶಿರಸಿ ಅವರು, ಅಘನಾಶಿನಿ ನದಿ ನಮ್ಮದೇ ಎಂಬ ಭಾವನೆ ಬೆಳೆಸಿ, ಅದನ್ನು ಕಾಪಾಡುವುದು ನಮ್ಮ ಹೊಣೆ ಎಂದು ಕರೆ ನೀಡಿದರು. ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೋಪಾಲಕೃಷ್ಣ ಹೆಗಡೆ ತಂಗಾರಮನೆ ಅವರು, ಹಂಗಾರಖAಡದAತಹ ಸಣ್ಣ ಊರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಸಂಘಟಕರಾದ ನಟರಾಜ ಎಂ ಹೆಗಡೆ ಹಾಗೂ ಮಂಜುನಾಥ ಎಂ ಹೆಗಡೆ ದಂಪತಿಗಳು ಪೂಜಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಭಜನಾ ಮಂಡಳಿಗಳಾದ ಮತ್ತೀಹಳ್ಳಿ, ಕಲ್ಗದ್ದೆ, ತ್ಯಾಗಲಿ ಹಾಗೂ ಹಂಗಾರಖAಡದ ಭಜನಾ ಮಂಡಳಿಗಳಿAದ ಭಕ್ತಿಗೀತೆಗಳು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದವು.
ಯಕ್ಷಗಾನದ ಭಾಗವತರಾದ ಶ್ರೀನಿವಾಸ ಭಾಗ್ವತ್ ಹಾಗೂ ಕಲಾವಿದರು ನೀಡಿದ ಯಕ್ಷಪದ್ಯ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ಸುಮಾರು 150ಕ್ಕೂ ಹೆಚ್ಚು ಭಕ್ತರು ಭಾಗವಹಿಸಿ ಅಘನಾಶಿನಿ ನದಿ ಆರತಿ ಪುಣ್ಯದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲರಿಗೂ ಲಘು ಉಪಹಾರ ಮತ್ತು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಹತ್ತು ಗ್ರಾಮಗಳ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ನದಿಗಳು ಉಳಿದರೆ ನಾಡು ಉಳಿಯುತ್ತದೆ ಎಂಬ ಸಂದೇಶದೊAದಿಗೆ ಪರಿಸರ ಸಂರಕ್ಷಣೆಗೆ ಕೈಜೋಡಿಸೋಣ ಎಂಬ ಕರೆದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

More Stories
ನಾಣಿಕಟ್ಟಾದಲ್ಲಿ ಯಶಸ್ವಿಯಾಗಿ ಸಂಪನ್ನಗೊ0ಡ “ಯಕ್ಷ ವಂದನೆ” ನಾಣಿಕಟ್ಟಾ “ಯಕ್ಷಹಬ್ಬ” 95 ನೇ ಹೆಜ್ಜೆ..
ಸಾಲ ಮಾಡಿ ಅನಾಥಾಶ್ರಮ ನಿರ್ಮಾಣ, ಬದುಕೆ ಸೇವೆಗೆ ಅರ್ಪಣೆ.ಇತಿಹಾಸ ನಿರ್ಮಿಸಿದ ಅನಾಥ ರಕ್ಷಕ ನಾಗರಾಜ ನಾಯ್ಕ.
ನಾಣಿಕಟ್ಟಾದಲ್ಲಿ ವಿಜೃಂಭಿಸಿದ ಗಾನ ಚಿತ್ರ ವೈಭವ