ಗಂಭೀರ ಅಪರಾಧ ಭೇದನೆಯಲ್ಲಿ ಚುರುಕುತನಕ್ಕೆ ಗೌರವ
ಭಟ್ಕಳ: ನಗರ ಠಾಣೆಯ ಪಿ.ಎಸ್.ಐ. ನವೀನ್ ಎಸ್. ನಾಯ್ಕ ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಮಾದಕದ್ರವ್ಯ ಪ್ರಕರಣಗಳನ್ನು ಒಳಗೊಂಡಂತೆ ಹಲವು ಗಂಭೀರ ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಸೇವಾ ದಕ್ಷತೆ ತೋರಿದ ಹಿನ್ನೆಲೆಯಲ್ಲಿ ಈ ಗೌರವ ಅವರಿಗೆ ಲಭಿಸಿದೆ. ಮುಖ್ಯಮಂತ್ರಿ ಪದಕ ನಿಯಮಾವಳಿಗಳ ಪ್ರಕಾರ ಪದಕ ಪ್ರದಾನಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ಪಿಎಸ್ಐ ನವೀನ ನಾಯ್ಕ ಅವರು ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಭಟ್ಕಳ ನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಈ ಹಿಂದೆ ಜಿಲ್ಲೆಯ ಕುಮಟಾ, ಗೋಕರ್ಣ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ತಮ್ಮ ಕರ್ತವ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅವರ ಮುತುವರ್ಜಿ ಹಾಗೂ ಸುದೀರ್ಘ ಕಾಲದ ಈ ಸೇವೆಯನ್ನು ಗುರುತಿಸಿ ಸರ್ಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿಷ್ಠೆ, ಅಪರಾಧ ಪತ್ತೆಯಲ್ಲಿ ತೋರಿದ ತ್ವರಿತ ಕ್ರಮಗಳು ಹಾಗೂ ವೃತ್ತಿಪರ ನೈಪುಣ್ಯವನ್ನು ಪರಿಗಣಿಸಿ ನವೀನ್ ಎಸ್. ನಾಯ್ಕ ಅವರನ್ನು ಈ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಅವರ ಚುರುಕುತನ ಮತ್ತು ಪರಿಣಾಮಕಾರಿ ಕಾರ್ಯವೈಖರಿ ಪೊಲೀಸ್ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

More Stories
ಮಹಿಳಾ ಶಕ್ತಿ ಅರಳಿದ ಸಂಭ್ರಮ
ವಸಿಮ್ ಅಹ್ಮದ್ ಹಲ್ವೆಗರ್ ಅವರಿಗೆ ಪಿಎಚ್ಡಿ ಪದವಿ
ಜನ ಮೆಚ್ಚುಗೆ ಪಡೆದ “ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ”