March 28, 2026

ನಾಳೆ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಪಶ್ಚಿಮ ಘಟ್ಟ ರಕ್ಷಣೆಗೆ ಜನಾಂದೋಲನ

ಹೊನ್ನಾವರ: ತಾಲೂಕಿನ ಗೇರುಸೊಪ್ಪ ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ನಡೆಯುತ್ತಿರುವ ‘ಸಂಸ್ಕೃತ ಕುಂಭ – ಮಲೆನಾಡ ಉತ್ಸವ’ದ ಅಂಗವಾಗಿ ನಾಳೆ (ಮಾರ್ಚ್ 29ರಂದು ಭಾನುವಾರ) ಪಶ್ಚಿಮ‌ ಘಟ್ಟಗಳ ರಕ್ಷಣೆಗಾಗಿ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ‌.

ಬೆಳಗ್ಗೆ 9 ಗಂಟೆಗೆ ಗೇರುಸೊಪ್ಪ ಶ್ರೀ ಕ್ಷೇತ್ರದ ವನವಾಸಿ ಸೀತಾ ರಾಮ ಮಂದಿರದಿಂದ ಬಂಗಾರಮಕ್ಕಿ ಕ್ಷೇತ್ರದ ವರೆಗೆ ಶರಾವತಿ ಉಳಿಸಿ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಳಿಕ 10 ಗಂಟೆಗೆ ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1 ಗಂಟೆಗೆ ಶರಾವತಿ ಸಂರಕ್ಷಣೆ ಕುರಿತು ಹಕ್ಕೊತ್ತಾಯ, ಮಧ್ಯಾಹ್ನ 2:30 ಗಂಟೆಗೆ ಪಶ್ಚಿಮ ಘಟ್ಟ ಮತ್ತು ಶರಾವತಿ ಸಂರಕ್ಷಣೆ ಕುರಿತು ಚಿಂತನ – ಮಂಥನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ರಾಜ್ಯ, ಹೊರ ರಾಜ್ಯದ ನೂರಾರು ಮಠಾಧೀಶರು, ಸಾಧು ಸಂತರು, ಪರಿಸರ ಪ್ರೇಮಿಗಳು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಭಾಗವಹಿಸಲಿದ್ದಾರೆ.

About The Author

error: Content is protected !!