ಜ್ಞಾನೇಶ್ವರಿ ಮಹಿಳಾ ಮಂಡಳಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 🌸

ಭಟ್ಕಳ: ಇಲ್ಲಿನ ಸೋನಾರಾಕೇರಿಯ ದೈವಜ್ಞ ಸಭಾಭವನದಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಳಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮವನ್ನು ದೈವಜ್ಞ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧಾಕರ್ ಶೇಟ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮಂಡಳಿಯ ಅಧ್ಯಕ್ಷೆ ಪರಿಮಳ ರಾಜಶೇಖರ್ ಅವರು ಮಾತನಾಡಿ, ಮಹಿಳೆಯರು ಒಟ್ಟಾಗಿ ಸಹಕಾರ ಮನೋಭಾವದಿಂದ ಸಮಾಜವನ್ನು ಸುಂದರ ಉದ್ಯಾನವನದಂತೆ ರೂಪಿಸಬೇಕು ಎಂದರು. ತಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು, ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಸಾಧಿಸುವಂತೆ ಕರೆ ನೀಡಿದರು.
ಉಪಾಧ್ಯಕ್ಷೆ ವಿದ್ಯಾ ನಾಗರಾಜ್ ಕೊಲ್ಲೆ ಅವರು ಸಮಾಜದ ಪ್ರತಿಯೊಬ್ಬರೂ ಇಂತಹ ಸಾಂಸ್ಕೃತಿಕ ಹಾಗೂ ಪ್ರೇರಣಾತ್ಮಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು. ಹಿರಿಯ ಸದಸ್ಯೆ ಪ್ರೇಮ ಮಾರುತಿ ಶೇಟ್ ಅವರು ಜ್ಞಾನೇಶ್ವರಿ ಮಹಿಳಾ ಸಂಘದ ಚಟುವಟಿಕೆಗಳು ಮತ್ತು ಸಾಧನೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಶೀಲಾ ಸುಧಾಕರ್ ಶೇಟ್, ಶ್ಯಾಮಲಾ ನಾಗರಾಜ್ ರಾಯ್ಕರ್, ಖಜಾಂಜಿ ಪದ್ಮ ಉದಯ್ ಶೇಟ್, ಜಯಲಕ್ಷ್ಮಿ ಮಂಜುನಾಥ್ ಶೇಟ್, ಶೈಲಾ ನಾಗರಾಜ್ ಶೇಟ್, ಸಂಧ್ಯಾ ಸುಧೀರ್ ಕೊಲ್ಲೆ ಹಾಗೂ ಸುವರ್ಣ ರಾಜೇಶ್ ರಾಯ್ಕರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಎಲ್ಲಾ ಕಾರ್ಯಕ್ರಮಗಳಲ್ಲಿ ದೀಪಾಲಂಕಾರವನ್ನು ನಿರ್ವಹಿಸುತ್ತ ಬಂದಿರುವ ಸುಪ್ರಿಯಾ ಉದಯ ಮಾನಕಾಮೆ ಮತ್ತು ಸವಿತಾ ಹರೀಶ್ ಕೊಲ್ಲೆ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಹಿರಿಯ ದಂಪತಿಗಳಾದ ಜಯಶ್ರೀ ಜಯಾನಂದ ಶೇಟ್ ಹಾಗೂ ಬೇಬಿ ಸೂರ್ಯಕಾಂತ್ ಶೇಟ್ ಅವರನ್ನು ಗೌರವಿಸಲಾಯಿತು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಮಹಿಳೆಯರಿಂದ ನಡೆದ ನೃತ್ಯ, ಕೋಲಾಟ, ಫ್ಯಾಶನ್ ಶೋ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಸುಪ್ರಿಯಾ ಉದಯ ಮಾನಕಾಮೆ ವರದಿಯನ್ನು ವಾಚಿಸಿದರು. ಸವಿತಾ ರತ್ನಾಕರ್ ಶೇಟ್ ಕಾರ್ಯಕ್ರಮವನ್ನು ಸುಂದರವಾಗಿ ನಿರ್ವಹಿಸಿ, ಸರ್ವರನ್ನೂ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ನಡುವೆ ಹಾಸ್ಯಭರಿತ ಪ್ರಶ್ನೆಗಳ ಮೂಲಕ ಮಹಿಳೆಯರನ್ನು ಮನರಂಜಿಸುವಲ್ಲಿ ಸಂಘಟಕರು ಯಶಸ್ವಿಯಾದರು.
ಒಟ್ಟಾರೆ, ಮಹಿಳಾ ಶಕ್ತಿ, ಏಕತೆ ಮತ್ತು ಸೃಜನಶೀಲತೆಯ ಸಂಭ್ರಮವನ್ನು ಪ್ರತಿಬಿಂಬಿಸಿದ ಈ ಕಾರ್ಯಕ್ರಮ ಎಲ್ಲರ ಮನದಲ್ಲಿ ಮುದ್ರೆಯೊತ್ತಿತು.

More Stories
ವಸಿಮ್ ಅಹ್ಮದ್ ಹಲ್ವೆಗರ್ ಅವರಿಗೆ ಪಿಎಚ್ಡಿ ಪದವಿ
ಜನ ಮೆಚ್ಚುಗೆ ಪಡೆದ “ಮಕ್ಕಳ ಸಂತೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ”
ನವಾಯತ್ ಕಾಲೋನಿಯಲ್ಲಿ ಕಪ್ಪು ಚಿರತೆ ಆತಂಕ: ವೃದ್ಧನ ಮೇಲೆ ದಾಳಿ ಯತ್ನ