ಕಾರ್ಕಳ: ಮ್ಹಾತೋಭಾರ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವ ಹಾಗೂ ದೈವಗಳ ಸಿರಿ ಸಿಂಗಾರದ ನೇಮೋತ್ಸವವು ಈ ಬಾರಿ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಮಾರ್ಚ್ 23ರಿಂದ ಆರಂಭಗೊಂಡ ಈ ಮಹೋತ್ಸವವು ಮಾರ್ಚ್ 30ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಉತ್ಸವದ ಅಂಗವಾಗಿ ಉತ್ಸವ ಬಲಿ, ಚಂದ್ರಮಂಡಲ ರಥೋತ್ಸವ, ಕಟ್ಟೆ ಪೂಜೆ, ನವಕ ಪ್ರಧಾನ ಹೋಮ, ಕಲಶಾಭಿಷೇಕ ಸೇರಿದಂತೆ ಅನೇಕ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಈ ಎಲ್ಲಾ ಧಾರ್ಮಿಕ ವಿಧಿಗಳನ್ನು ಶ್ರೀ ವೇದಮೂರ್ತಿ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡುವಂತೆ ಕಾರ್ಯಕ್ರಮಗಳು ಸಮರ್ಪಕವಾಗಿ ಆಯೋಜಿಸಲಾಗಿತ್ತು.
ಉತ್ಸವದ ಸಂದರ್ಭದಲ್ಲಿ ಶ್ರೀ ವೆಂಕಟೇಶ್ ಚಿಪ್ಳುಂಕರ್ ಅವರಿಂದ ಭಜನಾ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದ್ದು, ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಿಸಿತು. ಜೊತೆಗೆ ಮಹಾ ಅನ್ನಸಂತರ್ಪಣೆಯ ವ್ಯವಸ್ಥೆಯೂ ಕಲ್ಪಿಸಲಾಗಿದ್ದು, ಅನೇಕ ಭಕ್ತರು ಭಾಗವಹಿಸಿದರು.
ಮಹೋತ್ಸವದ ಕುರಿತು ಕೆ.ವಿ. ಶಂಕರನಾರಾಯಣ ಭಟ್ ಅವರು ಮಾಹಿತಿ ನೀಡಿದರು.
ವರದಿ: ಅರುಣ್ ಭಟ್, ಕಾರ್ಕಳ.

More Stories
ಕುಕ್ಕುಂದೂರು ಗುಳಿಗ ದೈವಸ್ಥಾನದಲ್ಲಿ ಹರಕೆಯ ನೇಮೋತ್ಸವ ಭಕ್ತಿಭಾವದಿಂದ ನೆರವೇರಿತು
ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ವತಿಯಿಂದ ಉಚಿತ ಫ್ಯಾಷನ್ ಡಿಸೈನಿಂಗ್ ತರಬೇತಿ ಸಮಾಪ್ತಿ
14 ರಂದು ಜನ ವಿರೋಧಿ ಖಂಡಿಸಿ ಬಿಜೆಪಿಯಿಂದ ಪ್ರತಿಭಟಣೆ