ಕಾರ್ಕಳ: ತಾಲೂಕಿನ ಕುಕ್ಕುಂದೂರು ಪ್ರದೇಶದಲ್ಲಿರುವ ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ಮಾರ್ಚ್ 27ರಂದು ಶುಕ್ರವಾರ ರಾತ್ರಿ ಹರಕೆಯ ನೇಮೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಉತ್ಸವದ ಅಂಗವಾಗಿ ಗಗ್ಗರ ಸೇವೆ ನೆರವೇರಿದ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ನಂತರ ಮಹಾ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದ್ದು, ಅನೇಕ ಭಕ್ತರು ಭಾಗವಹಿಸಿ ದೈವ ಕೃಪೆಗೆ ಪಾತ್ರರಾದರು.
ಈ ಸೇವೆಯಲ್ಲಿ ಕಾರ್ಕಳ ತಾಲೂಕು ತಹಶೀಲ್ದಾರರು ಹಾಗೂ ತಾಲೂಕು ಕಚೇರಿ ಸಿಬ್ಬಂದಿ ವರ್ಗದವರು ಸೇವಾದಾರರಾಗಿ ಪಾಲ್ಗೊಂಡರು. ಕಾರ್ಯಕ್ರಮದ ವೇಳೆ ಸುಕುಮಾರ್ ಜೈನ್ ಬಾವದ ಗುತ್ತು ಆಡಳಿತ ಮೊಕ್ತೇಸರರು, ತಹಶೀಲ್ದಾರರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಭಕ್ತಾದಿಗಳು ದೈವಗಳ ಸಿರಿ ಮುಡಿ, ಗಂಧ ಮತ್ತು ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರು.
ಉತ್ಸವವು ಭಕ್ತಿ, ಶ್ರದ್ಧೆ ಮತ್ತು ಸಂಪ್ರದಾಯದ ಸಮ್ಮಿಲನವಾಗಿ ಯಶಸ್ವಿಯಾಗಿ ನೆರವೇರಿತು.
ವರದಿ: ಅರುಣ್ ಭಟ್, ಕಾರ್ಕಳ.

More Stories
ಕಾರ್ಕಳದಲ್ಲಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜಾತ್ರಾ ಮಹೋತ್ಸವ
ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ವತಿಯಿಂದ ಉಚಿತ ಫ್ಯಾಷನ್ ಡಿಸೈನಿಂಗ್ ತರಬೇತಿ ಸಮಾಪ್ತಿ
14 ರಂದು ಜನ ವಿರೋಧಿ ಖಂಡಿಸಿ ಬಿಜೆಪಿಯಿಂದ ಪ್ರತಿಭಟಣೆ