ಶಿರಸಿ: ಶಿರಸಿ ಹೊರವಲಯದಲ್ಲಿ ನೂತನ ಕನ್ನಡ ಚಲನಚಿತ್ರ ‘ಸೌಮ್ಯ ಸೌರಭ’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬೆಂಗಳೂರಿನ ಶ್ವೇತಾ ಎಸ್. ಆರಾಧ್ಯ ಅವರ ಬೆಳಕು ಸ್ಟುಡಿಯೋ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಚಿತ್ರದ ಚಿತ್ರೀಕರಣವು ಸುರೇಶ ಹೆಗಡೆ ಅವರ ತವರು ಮನೆ ತೋಟದಲ್ಲಿ ಆರಂಭಗೊಂಡು, ಕೊರ್ಲಕಟ್ಟದ ಮುಕ್ತೇಶ ಗೌಡರ ಮನೆ ಹಾಗೂ ಕಾಗೇರಿ ಕತ್ರಿ ಪ್ರದೇಶಗಳಲ್ಲಿ ನಡೆಯಿತು. ವಿಶೇಷವೆಂದರೆ, ಈ ಚಿತ್ರದಲ್ಲಿ ಬಹುತೇಕ ಶಿರಸಿ ಭಾಗದ ಸ್ಥಳೀಯ ಕಲಾವಿದರು ಅಭಿನಯಿಸಿದ್ದು, ಹಲವರು ಇದೇ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದಾರೆ.
ಸುಮಾರು 90 ನಿಮಿಷಗಳ ಕಲಾತ್ಮಕ ಸಿನೆಮಾದಲ್ಲಿ ಅಭಿರಾಮ ಹೆಗಡೆ ನಾಯಕನಾಗಿ, ಸುಹಾನಿ ಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ ಶ್ರೀಪತಿ ಹೆಗಡೆ ಮತ್ತಿಘಟ್ಟ, ಪ್ರವೀಣ್ ಹೆಗಡೆ ಬಾಳೆಗದ್ದೆ, ನಿತಿನ್ ನೀಲೆಕಣಿ, ರಮೇಶ ಹಳೆಕಾನಗೋಡ, ಗಾಯತ್ರಿ ರಾಘವೇಂದ್ರ, ಪ್ರಜ್ವಲ್ ಅಂಬರ್ಕರ್, ಕಿರಣ್ ಭೈರುಂಬೆ, ಸುಬ್ರಾಯ ಕೆರೆಕೊಪ್ಪ, ಋತ್ವಿಕ್ ವಿನಾಯಕ ಶೇಟ್, ರಿಶಾಂಕ್ ವಿನಾಯಕ ಶೇಟ್ ಹಾಗೂ ದೀಪ್ತಿ ನಾಗರಾಜ ನಾಯಕ್ ಸೇರಿದಂತೆ ಹಲವರು ತಮ್ಮ ಅಭಿನಯ ಕೌಶಲ್ಯ ಪ್ರದರ್ಶಿಸಿದ್ದಾರೆ.
ಚಿತ್ರಕ್ಕೆ ಪ್ರಶಾಂತ್ ಛಾಯಾಗ್ರಹಣ ನೀಡಿದ್ದು, ರಾಜ್ ಮಂಜು ಕಲಾ ನಿರ್ದೇಶನ ಮಾಡಿದ್ದಾರೆ. ಶಶಿಕಾಂತ್ ಆರಾಧ್ಯ ಬೆಳಕು ಸಂಯೋಜನೆ, ಸಂಕಲನ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಂದ್ರು ಉಡುಪಿ ಪ್ರಸಾಧನ ವ್ಯವಸ್ಥೆ ನಿರ್ವಹಿಸಿದ್ದಾರೆ.
1972ರಲ್ಲಿ ಮಧುರಪ್ರಿಯ ಪ್ರಕಟಿಸಿದ ‘ಸೌಮ್ಯ ಸೌರಭ’ ನಾಟಕವನ್ನು ಆಧರಿಸಿದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಅವರೇ ರಚಿಸಿದ್ದಾರೆ. ಕೇವಲ 15 ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿರುವುದು ಈ ಚಿತ್ರದ ವಿಶೇಷತೆಯಾಗಿದೆ.

More Stories
ಶಿರಸಿಯಲ್ಲಿ ‘ಪ್ರತಿಬಿಂಬ’ ಕಾರ್ಯಕ್ರಮ – ಸ್ಪರ್ಧೆಗಳ ನೊಂದಣಿ ಅವಧಿ ಏಪ್ರಿಲ್ 3ರವರೆಗೆ ವಿಸ್ತರಣೆ
ಹಿಲ್ಲೂರು ಯಕ್ಷ ಮಿತ್ರ ಪ್ರಶಸ್ತಿ ಪ್ರದಾನ, ಯಕ್ಷಗಾನ, ಗಾನ ವೈಭವ
ಮಂಜುಗುಣಿ ರಥೋತ್ಸವ ಸಡಗರ