September 11, 2025

ಮಗ್ದೂಮ್ ಕಾಲನಿಯ ಅರಣ್ಯ ಇಲಾಖೆಯ ಗುಡ್ಡ ಪ್ರದೇಶದಲ್ಲಿ ಜಾನುವಾರುಗಳ ರಾಶಿ ಮೂಳೆ ಪತ್ತೆ ಸ್ಥಳೀಯರಲ್ಲಿ ಆಕ್ರೋಶ

ಭಟ್ಕಳ: ಅರಣ್ಯ ಇಲಾಖೆಗೆ ಸೇರಿದ ಮಗ್ದೂಮ್ ಕಾಲನಿಯ ಗುಡ್ಡ ಪ್ರದೇಶದಲ್ಲಿ ನೂರಾರು ಜಾನುವಾರುಗಳ ಮೂಳೆಗಳು, ಅಸ್ಥಿಪಂಜರಗಳು ಹಾಗೂ ರಕ್ತದ ಕಲೆಗಳು ಪತ್ತೆಯಾದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ಹಲವು ದಿನಗಳಿಂದ ಇಲ್ಲೇ ಜಾನುವಾರು ಹತ್ಯೆ ನಡೆಯುತ್ತಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಹಿಂದೂ ಸಂಘಟನೆಯ ಯುವಕರು ಮೂಳೆಗಳ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕರ ಕೋಪ ಸಿಡಿದೆದ್ದಿದೆ.

ಇಷ್ಟು ಪ್ರಮಾಣದಲ್ಲಿ ಗೋಹತ್ಯೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಎಲ್ಲವೂ ಮುಚ್ಚಿಹೋಗುತ್ತಿದೆ ಎಂದು ಹಿಂದೂ ಸಂಘಟನೆಯ ಜಯಂತ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಪೊಲೀಸರು ನಾಕಾಬಂದಿ ನಡೆಸಿ ದನಗಳ್ಳರನ್ನು ಬಂಧಿಸಿ, ಜಾನುವಾರುಗಳನ್ನು ರಕ್ಷಿಸಿದ್ದರೂ, ಇದೀಗ ಮತ್ತೆ ನೂರಾರು ಮೂಳೆಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ. ವಿಡಿಯೋ ವೈರಲ್ ಆದ ಬಳಿಕ ಸ್ಥಳದಲ್ಲಿದ್ದ ಮೂಳೆಗಳು ಹಠಾತ್ ತೆರವುಗೊಳಿಸಲಾಗಿದ್ದು, ಹತ್ತಿರದ ಟ್ಯಾಂಕಿನಲ್ಲಿ ರಕ್ತಸಿಕ್ತ ಮೂಳೆಗಳು ಇನ್ನೂ ಪತ್ತೆಯಾಗಿವೆ.

ಗೋವಿಂದ ನಾಯ್ಕ, ಪಶ್ಚಿಮಘಟ್ಟಗಳ ಕಾರ್ಯಪಡೆ ಮಾಜಿ ಅಧ್ಯಕ್ಷ ಮಾತನಾಡಿ ಅರಣ್ಯ ಇಲಾಖೆಯ ಪ್ರದೇಶದಲ್ಲಿ ಮೂಳೆಗಳು ಪತ್ತೆಯಾದರೂ ಕ್ರಮಕೈಗೊಳ್ಳದಿರುವುದು ಅನುಮಾನಾಸ್ಪದವಾಗಿದೆ. ತ್ಯಾಜ್ಯ ಬಾವಿ ಸೇರಿ ಜಲಮೂಲ ಕಲುಷಿತಗೊಳ್ಳುತ್ತಿದೆ. ಉಸ್ತುವಾರಿ ಸಚಿವರು ಗೊಹಂತಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಮಾತನಾಡಿ ಮಗ್ದೂಮ್ ಕಾಲನಿಯಲ್ಲಿ ಮೂಳೆಗಳನ್ನು ಸ್ವಚ್ಛಗೊಳಿಸಲು ಪೊಲೀಸ್ ಇಲಾಖೆ ಸೂಚಿಸಿತ್ತು. ಆದರೆ ನಾವು ಸ್ಥಳಕ್ಕೆ ತೆರಳುವಷ್ಟರಲ್ಲಿ ಮೂಳೆಗಳು ಅಲ್ಲಿರಲಿಲ್ಲ. ಯಾರೋ ಮುಂಚಿತವಾಗಿ ತೆರವುಗೊಳಿಸಿದ್ದರು. ಅದು ಯಾರೆಂದು ನಮಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು.

About The Author

error: Content is protected !!