
ಕರಾವಳಿ ಕಾವಲು ಪೋಲಿಸ್ ಠಾಣೆಯ ಉಪ ನಿರೀಕ್ಷರಿಂದ ರಕ್ತದಾನ ಶಿಭಿರಕ್ಕೆ ಚಾಲನೆ
ಹೊನ್ನಾವರ ; ಅಪಘಾತ ಆದಂತಹ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ನಾವು ಇಂತಹ ಶಿಭಿರದಲ್ಲಿ ಸಂದರ್ಭದಲ್ಲಿ ರಕ್ತದಾನ ಮಾಡಿದರೆ ತುರ್ತ ಸಂದರ್ಭದಲ್ಲಿ ಜೀವವನ್ನು ಉಳಿಸುವ ಕಾರ್ಯ ಮಾಡುತ್ತದೆ. ಪ್ರತಿಯೊಬ್ಬರು ರಕ್ತದಾನದ ಮೂಲಕ ಇನ್ನೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಹೊನ್ನಾವರ ಕಾವಲು ಪೋಲಿಸ್ ಠಾಣೆಯ ಉಪ ನಿರೀಕ್ಷಕರಾದ ಶ್ರೀ ವಿಠಲ್ ವಡವಾಯಿ ಹೇಳಿದರು.
ಅವರು ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಹೆಲ್ತ ಫಸ್ಟ ಡಯಾಗ್ನೋಸ್ಟಿಕ್ ಹೊನ್ನಾವರ, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಹೊನ್ನಾವರ ಮಂಕಿ, ಕರಾವಳಿ ಕಾವಲು ಪೋಲಿಸ್ ಠಾಣೆ ಹೊನ್ನಾವರ ಇವುಗಳ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಭಿರದಲ್ಲಿ ಭಾಗವಹಿಸಿ ರಕ್ತದಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಚರ್ಮರೋಗ ತಜ್ಞರಾದ ಡಾ|| ಶಿವಾನಂದ ಹೆಗಡೆ ಮಾತನಾಡಿ ರಕ್ತವನ್ನು ಹಣಕೊಟ್ಟು ಕೊಳ್ಳಲು ಸಾದ್ಯವಿಲ್ಲ. ರಕ್ತಕ್ಕೆ ರಕ್ತವೇ ರ‍್ಯಾಯವಾಗಿದೆ. ಆದ್ದರಿಂದ ರಕ್ತದಾನ ಮಾಡುವುದು ಪುಣ್ಯದಕಾರ್ಯವಾಗಿದೆ ಎಂದು ಹೇಳಿದರು. ಕಿಮ್ಸ್ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿಗಳು ರಕ್ತದಾನದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ವೈದ್ಯಾಧಿಕಾರಿಗಳಾದ ಡಾ|| ರಾಜೇಶ ಕೀಣಿ ರಕ್ತದಾನ ಶಿಭಿರಕ್ಕೆ ಪೋಲಿಸ್ ಇಲಾಖೆ ಕೈಜೋಡಿಸಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಸದಾ ನಮಗೆ ರಕ್ಷಣೆ ನೀಡುವ ಪೋಲಿಸ್ ಇಲಾಖೆ ಇವತ್ತು ಜೀವ ಉಳಿಸವ ಕಾರ್ಯಕ್ಕೆ ಮುಂದಾಗಿದೆ. ಅವರಿಗೆ ನಮ್ಮೆಲ್ಲರ ಪರವಾಗಿ ಧನ್ಯವಾದಗಳು ಎಂದು ಹೇಳಿದರು. ಸಭಾಕಾರ್ಯಕ್ರಮದಲ್ಲಿ ಮೂಳೆ ತಜ್ಞರಾದ ಡಾ|| ರಮೇಶಗೌಡ, ಗಂಟಲು ಮೂಗು ತಜ್ಞರಾದ ಡಾ|| ಜೈಮಿಸಿ ಕ್ಷಕಿರಣ ತಂತ್ರಜ್ಞ ಅಧಿಕಾರಿಗಳಾದ ಚಂದ್ರಶೇಖರ್ ಕಳಸ, ಕಛೇರಿ ಅಧಿಕ್ಷಕರಾದ ನಿತ್ಯಾನಂದ ಮಾಪಾರಿ ಉಪಸ್ಥಿತರಿದ್ದರು. ರಕ್ತದಾನ ಮಾಡಿದ ಎಲ್ಲರಿಗೂ ಹೊನ್ನಾವರದ ಹೆಲ್ತ ಡಯಾಗೋಸ್ಟಿಕ್‌ನವರು ಹಾಟ್ ವಾಟರ್ ಬಾಟಲ್‌ನ್ನು ಉಡುಗೊರೆಯಾಗಿ ನೀಡಿದ್ದರು. ಪ್ರಯೋಗ ಶಾಲಾತಂತ್ರಜ್ಞರಾದ ಉಮೇಶ.ಕೆ, ದೀಪಾ ನಾಯ್ಕ ಆಪ್ತಸಮಾಲೋಚಕರಾದ ವಿನಾಯಕ ಕಾರ್ಯಕ್ರಮದಲ್ಲಿ ಹಾಜರಿದ್ದು ಸಹಕರಿಸಿದರು. ಪೋಲಿಸ್ ಇಲಾಖೆ ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂಧಿಗಳು ಮತ್ತು ಸಾರ್ವಜನಿಕರುರಕ್ತದಾನ ಮಾಡಿದರು.
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ