October 6, 2025

ಭಟ್ಕಳ ಲೋಕ ಅದಾಲತ್‌ನಲ್ಲಿ 1464 ಪ್ರಕರಣ ಇತ್ಯರ್ಥ, ರೂ 7.11 ಕೋಟಿ ಮೊತ್ತ ವಸೂಲಿ

ಭಟ್ಕಳ: ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟಾರೆ 1464 ಪ್ರಕರಣಗಳು ರಾಜೀ ಮೂಲಕ ಅಂತ್ಯ ಕಂಡಿದ್ದು, ದಂಡ ಹಾಗೂ ಪರಿಹಾರದ ರೂಪದಲ್ಲಿ ರೂ 7,11,17,729 ಮೊತ್ತ ವಸೂಲಿ ಮಾಡಲಾಗಿದೆ.

ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ 230, ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ 550, ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ 594 ಪ್ರಕರಣಗಳು ಇತ್ಯರ್ಥಗೊಂಡಿವೆ. ಹಿರಿಯ ಸಿವಿಲ್ ನ್ಯಾಯಾಲಯ: ಚೆಕ್ ಪ್ರಕರಣಗಳಲ್ಲಿ ರೂ 1,04,16,148 ವಸೂಲಿ. ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಮಗನನ್ನು ಕಳೆದುಕೊಂಡ ದಂಪತಿಗೆ ರೂ 11.5 ಪರಿಹಾರ. ಒಟ್ಟು ರೂ 68,12,584 ಮೊತ್ತ ವಸೂಲಿ.

ಪ್ರಧಾನ ಸಿವಿಲ್ ನ್ಯಾಯಾಲಯ: ಅಮಲಜ್ಯಾರಿ ಪ್ರಕರಣಗಳಿಂದ ರೂ 2,53,89,260, ಚೆಕ್ ಪ್ರಕರಣಗಳಿಂದ ರೂ 78,59,098, ಇತರ ಪ್ರಕರಣಗಳಿಂದ ರೂ 1,32,000 ವಸೂಲಿ.
ಹೆಚ್ಚುವರಿ ಸಿವಿಲ್ ನ್ಯಾಯಾಲಯ: ಅಮಲಜ್ಯಾರಿ ಪ್ರಕರಣಗಳಿಂದ ರೂ 1,31,56,791, ಚೆಕ್ ಪ್ರಕರಣಗಳಿಂದ ರೂ 42,77,598, ಇತರ ಪ್ರಕರಣಗಳಿಂದ ರೂ 1,81,050 ವಸೂಲಿ.

ಈ ಸಂದರ್ಭದಲ್ಲಿ ನ್ಯಾಯಾಧೀಶರು ಕಾಂತ ಕುರಣಿ, ದೀಪಾ ಅರಳಗುಂಡಿ, ಧನವತಿ, ಸಂಧಾನಕಾರರು ಮಂಜುನಾಥ ಚಂದ್ರಕಾAತ ಭಟ್ಟ, ರವಿಚಂದ್ರ ನಾಯ್ಕ, ಸಹನಾ ಮೊಗೇರ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷ ಈಶ್ವರ ನಾಯ್ಕ, ಸರಕಾರಿ ಅಭಿಯೋಜಕರು ಹಾಗೂ ಹಿರಿಯ ಕಿರಿಯ ವಕೀಲರು ಪಾಲ್ಗೊಂಡಿದ್ದರು.

About The Author

error: Content is protected !!