October 6, 2025

ಮೌಲಾನಾ ಆಜಾದ್ ಪಬ್ಲಿಕ್ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ನೂತನವಾಗಿ ಆರಂಭಗೊAಡ ಕರ್ನಾಟಕ ಮೌಲಾನಾ ಆಜಾದ್ ಪಬ್ಲಿಕ್ ಶಾಲೆಯಲ್ಲಿ ಉಚಿತ ಸಮವಸ್ತ್ರ ವಿತರಣಾ ಸಮಾರಂಭ ನಡೆಯಿತು. ಸಭಾಧ್ಯಕ್ಷರಾಗಿ ಶಾಲೆಯ ಪ್ರಭಾರಿ ಮುಖ್ಯಾಧ್ಯಾಪಕ ಶಂಸುದ್ದಿನ್ ಮಾತನಾಡಿ, ಮೌಲಾನಾ ಆಜಾದ್ ಮಾದರಿ ಶಾಲೆಯು ಈಗ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಮಟ್ಟದವರೆಗೆ ವಿಸ್ತರಿಸಿರುವುದಾಗಿ ತಿಳಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ ಎಲ್ಕೆಜಿ ಹಾಗೂ ಆರನೇ ತರಗತಿಗಳು ಪ್ರಾರಂಭವಾಗಿರುವುದನ್ನೂ ಅವರು ಹೇಳಿದರು.

ಪುರಸಭಾ ಕೌನ್ಸಿಲರ್ ಫರ್ಜಾನಾ, ಸಿಆರ್ಪಿ ಮುನಿರಾ, ಇಸ್ಲಾಮಿಯಾ ಆಂಗ್ಲೋ ಉರ್ದು ಹೈಸ್ಕೂಲ್‌ನ ಶಿಕ್ಷಕ ಮೈದಿನ್ ಕತ್ತಾಲಿ, ಎಂಐಸಿ ಅನ್ಸಾರ್ ಹಾಗೂ ಸ್ವಚ್ಛ ಭಾರತ ಅಭಿಯಾನ ನೋಡಲ್ ಅಧಿಕಾರಿಗಳಾದ ಶ್ರೇಯ
ಮಹಾಲೇ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ವಿದ್ಯಾರ್ಥಿಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳು, ಶಿಕ್ಷಣದ ಮಹತ್ವ ಮತ್ತು ಸ್ವಚ್ಛತಾ ಅಭಿಯಾನದ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಹಂಚಿಕೊAಡರು. ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ತಂಜಿಲಾ ನಿರೂಪಿಸಿದ್ದು, ಸಹಶಿಕ್ಷಕರಾದ ಶೇಬಾಝ್ ಇಬ್ಬು, ಶಿಲ್ಪಾ ನಾಯ್ಕ, ವಿನಯ್ ಶೆಟ್ಟಿ ಹಾಗೂ ಜಯಂತಿ ಸಮವಸ್ತ್ರ ವಿತರಣೆಯಲ್ಲಿ ನೆರವಾದರು. ಫಿರ್ದೋಸ್ ರವರ ವಂದನಾರ್ಪಣೆಯೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

About The Author

error: Content is protected !!