October 5, 2025

1 ಕೋಟಿ 3 ಲಕ್ಷ ಲಾಭ ಗಳಿಸಿದ ಭಟ್ಕಳ ವ್ಯವಸಾಯ ಸೇವಾ ಸಹಕಾರಿ ಸಂಘ

ಭಟ್ಕಳ: ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಭಟ್ಕಳವು 2024-25 ನೇ ಸಾಲಿನಲ್ಲಿ 1 ಕೋಟಿ 3 ಲಕ್ಷ ರೂ. ಲಾಭಾಂಶ ಗಳಿಸಿದೆ ಎಂದು ಅಧ್ಯಕ್ಷ ಈರಪ್ಪ ನಾಯ್ಕ ಮಾಹಿತಿ ನೀಡಿದರು. ಶ್ರೀ ವೀರಾಂಜನೇಯ ಧರ್ಮಛತ್ರ ಹಾಗೂ ಜನ್ನಪಟ್ಟಣ ಹನುಮಂತ ದೇವಸ್ಥಾನ ಆವರಣದಲ್ಲಿ ನಡೆದ ಸಂಘದ 59ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅವರು ವರದಿ ಮಂಡಿಸಿದರು.

ಸAಘದ ಶೇರು ಬಂಡವಾಳವು 465.32 ಲಕ್ಷ ರೂ., ಠೇವಣಿಗಳು 6539.06 ಲಕ್ಷ ರೂ. ತಲುಪಿದ್ದು, ಕೃಷಿ ಹಾಗೂ ಕೃಷಿಯೇತರ ಸಾಲ ವಿತರಣೆಯೊಂದಿಗೆ ಸಂಘವು ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ. ಸದಸ್ಯರು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವಂತೆ ಮನವಿ ಮಾಡಲಾಯಿತು. ಪ್ರಧಾನ ಕಚೇರಿ ಹಾಗೂ ಪುರವರ್ಗ, ಮುಂಡಳ್ಳಿ, ಮುಟ್ಟಳ್ಳಿ ಶಾಖೆಗಳ ಒಟ್ಟು ಲಾಭ 1 ಕೋಟಿ 3 ಲಕ್ಷ 13 ಸಾವಿರ ರೂ. ಆಗಿದೆ.

ಸಭೆಯಲ್ಲಿ ಶೇರುದಾರರು ಉತ್ತಮ ಆಡಳಿತ ಮಂಡಳಿ, ವ್ಯವಸ್ಥಾಪಕ ರಮೇಶ ನಾಯ್ಕ ಹಾಗೂ ಸಿಬ್ಬಂದಿಗಳ ಪರಿಶ್ರಮವನ್ನು ಮೆಚ್ಚಿದರು. ಸಭೆಯ ಆರಂಭದಲ್ಲಿ ನಿಧನರಾದ ಸದಸ್ಯರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಉಪಾಧ್ಯಕ್ಷ ರಾಜೇಶ್ ನಾರಾಯಣ ದೇವಾಡಿಗ, ನಿರ್ದೇಶಕರು ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ಗಣೇಶ ನಾಯ್ಕ, ಮಾದೇವ ನಾಯ್ಕ, ಗಣಪತಿ ನಾಯ್ಕ, ದಿನೇಶ ಗೊಂಡ, ಶ್ರೀನಿವಾಸ ನಾಯ್ಕ, ವಿಲಿಯಂ ಲೂಯಿಸ್, ನೀಲಾ ನಾಯ್ಕ, ಚಂದ್ರಿಕಾ ನಾಯ್ಕ, ಶ್ರೀಧರ ನಾಯ್ಕ ಉಪಸ್ಥಿತರಿದ್ದರು.

About The Author

error: Content is protected !!