October 6, 2025

ಸಂಗೀತ ಓದಿಗೆ ಬೆಂಬಲ ನೀಡುತ್ತದೆ. – ಗೋಪಾಲಕೃಷ್ಣ ಹೆಗಡೆ ಕಲಭಾಗ

ಹೊನ್ನಾವರ : ಓದಿನ ಜೊತೆಗೆ ಮ್ಯೂಸಿಕ್ ಕಲಿಯುವುದರಿಂದ ಓದಿಗೆ ತೊಂದರೆ ಆಗುತ್ತದೆ ಎಂದು ಭಾವಿಸಬೇಡಿ, ಬದಲಾಗಿ ಸಂಗೀತ ನಿಮ್ಮ ವಿದ್ಯಾಭ್ಯಾಸಕ್ಕೆ ಸಪೋರ್ಟ್ ಮಾಡುತ್ತದೆ ಎಂದು ತಬಲಾ ಮಾಂತ್ರಿಕರಾದ ಗೋಪಾಲಕೃಷ್ಣ ಹೆಗಡೆ ಕಲಬಾಗ ಹೇಳಿದರು. ಅವರು ರವಿವಾರ ಕೆರೆಕೋಣ ಹಳೆ ವಿದ್ಯಾರ್ಥಿಗಳ ಸಂಘ, ಎಸ್.ಡಿ.ಎಮ್.ಸಿ ಆಶ್ರಯದಲ್ಲಿ ಕೆರೆಕೋಣ ಶಾಲೆಯಲ್ಲಿ ನಡೆಯುತ್ತಿರುವ ತಬಲಾ ಕ್ಲಾಸಿಗೆ ತನ್ನ ಹಿರಿಯ ಶಿಷ್ಯರು ದೇಣಿಗೆಯಾಗಿ ನೀಡಿದ 5 ತಬಲಾ ಸೆಟ್, ಹಾರ್ಮೋನಿಯಂ ಮತ್ತು ಕಾಪಾಟುಗಳನ್ನು ಕೆರೆಕೋಣ ಶಾಲೆಗೆ ನೀಡಿ ಮಾತನಾಡುತ್ತಿದ್ದರು.

ಮ್ಯೂಸಿಕ್ ತೆರಗೆದುಕೊಂಡಿದ್ದರಿAದ ನಿಮಗೆ ಓದಲು ತೊಂದರೆಯಾಗುತ್ತದೆ ಎಂದು ಯಾರೋ ಹೇಳಿದ್ದನ್ನು ತಲೆಗೆ ಹಾಕಿಕೊಳ್ಳಬೇಡಿ, ಕಂಗಾಲಾಗಬೇಡಿ ಬದಲಾಗಿ ಗಟ್ಟಿ ಮನಸ್ಸು ಮಾಡಿ ಮತ್ತು ರಿಲ್ಯಾಕ್ಸ್ ಆಗಿ ಮತ್ತು ನಿಮ್ಮ ಓದುವ ಸಮಯದಲ್ಲಿ ಕೇವಲ ಅರ್ಧ ತಾಸು ಸಂಗೀತಕ್ಕೆ ಸಮಯ ಕೊಟ್ಟು ರೀಫ್ರೆಶ್ ಆಗಿ ಎಂದು ಗೋಪಾಲಕೃಷ್ಣ ಹೆಗಡೆ ಕಲಬಾಗ ಇವರು ಮಕ್ಕಳಿಗೆ ಕಿವಿಮಾತು ಹೇಳಿದರು. ಮುಂದುವರಿದು ನಾನು ಹಿರಿಯ ಶಿಷ್ಯರಿಗೆ ಪಾಠ ಮಾಡಿದ್ದೇನೆ ಅವರ ಜವಾಬ್ದಾರಿ ಮುಂದಿನ ಶಿಷ್ಯರಿಗೆ ಬೆಳಕನ್ನು ತೋರಿಸುವುದು, ಸಮಾಜಕ್ಕೆ ಒಬ್ಬರಿಂದ ಒಬ್ಬರಿಗೆ ದೀಪ ಬೆಳಗುವ ಕೆಲಸ ಆಗಬೇಕು ಹಾಗಾಗಿ ನನ್ನ ಹಿರಿಯ ಶಿಷ್ಯರು ಸಂಗೀತ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದರು ಎಂದರು.

ಮ್ಯೂಸಿಕ್ ಕ್ಲಾಸಿಗೆ ತಬಲಾ ಹಾರ್ಮೋನಿಯಂ ಕಪಾಟುಗಳನ್ನು ನೀಡಿದ ದಾನಿಗಳಲ್ಲಿ ಒಬ್ಬರಾದ ಸುಬ್ರಮಣ್ಯ ಹೆಗಡೆ ಮಾತನಾಡಿ ಗೋಪಾಲಕೃಷ್ಣ ಹೆಗಡೆಯವರ ಶಿಷ್ಯರಾದ ನಾವು ಅವರ ಮಾತಿಗೆ ಒಪ್ಪಿ ಈ ಸಂಗೀತ ಸಲಕರಣೆಗಳನ್ನು ನೀಡುತ್ತಿದ್ದೇವೆ, ಇದರ ಪ್ರಯೋಜನವನ್ನು ಮಕ್ಕಳು ತೆಗೆದುಕೊಳ್ಳಬೇಕು ಅಲ್ಲದೇ ಇಂದಿನ ಯುಗದಲ್ಲಿ ಯಾವುದೇ ಉದ್ಯೋಗ ಸಿಗಬೇಕೆಂದರೂ ಪ್ರತ್ಯೇಕ ಕೌಶಲ್ಯ ಇದ್ದರೆ ಹೆಚ್ಚು ಗಣನೆಗೆ ಒಳಗಾಗುತ್ತಾರೆ ಹಾಗಾಗಿ ಇದು ಅವಶ್ಯ ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಭಂಡಾರಿ ಮಾತನಾಡಿ ಗೋಪಾಲಕೃಷ್ಣ ಹೆಗಡೆಯವರ ವಿಶೇಷ ಮುತುವರ್ಜಿಯಿಂದ ಶಿಷ್ಯರು ನೀಡಿರುವ ತಬಲಾಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿ, ಎಲ್ಲಾ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ ಮಾತನಾಡಿ, ಇಲ್ಲಿನ ಮಕ್ಕಳ ಅವಶ್ಯಕತೆಗಳನ್ನು ಮನಗಂಡು ದಾನಿಗಳು ಸಂಗೀತದ ಸಲಕರಣೆಗಳನ್ನು ನೀಡಿರುವುದು ಶ್ಲಾಘನೀಯ ಎಂದರು.

ಎಸ್ .ಡಿ.ಎಮ್. ಸಿ.ಮಾಜಿ ಅಧ್ಯಕ್ಷ ಅಧ್ಯಕ್ಷ ರಾಮ ಭಂಡಾರಿ ಮಾತನಾಡಿ ಗೋಪಾಲಕೃಷ್ಣ ಹೆಗಡೆಯವರಂತಹ ದೊಡ್ಡ ಕಲಾವಿದರಿಂದ ಕಲಿಯುತ್ತಿರುವ ಕೆರೆಕೋಣ ಸುತ್ತಮುತ್ತಲಿನ ಮಕ್ಕಳು ಪುಣ್ಯ ಮಾಡಿದ್ದಾರೆ ಎಂದರು. ಸಂಗೀತ ಸಲಕರಣೆಗಳನ್ನು ಪಡೆದ ಖುಷಿಯಲ್ಲಿ ತಬಲಾ ಕ್ಲಾಸಿನ ವಿದ್ಯಾರ್ಥಿಗಳಾದ ಅಭಯ ಭಂಡಾರಿ, ಅದಿತಿ, ಸ್ನೇಹಾ, ಶ್ರೇಯಸ್, ಮಯೂರ್ ಮೊಗೇರ ಮಾತನಾಡಿದರು ಮತ್ತು ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.iÀÄನ್ನಾಗಿ ರೂಪಿಸಿದ ಕೀರ್ತಿ ಸರ್.ಎಂ. ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ ಎಂದು ಮಾತೃಛಾಯಾ ಟ್ರಸ್ಟ ಅಧ್ಯಕ್ಷರಾದ ಅಶೋಕ ಕಾಸರಕೋಡ ಅವರು ಈ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

About The Author

error: Content is protected !!