October 6, 2025

ಬಾಲಕರ ಕಬ್ಬಡ್ಡಿಯಲ್ಲಿ ಭಟ್ಕಳದ ಆನಂದ್ ಆಶ್ರಮ ಕಾನ್ವೆಂಟ್ ಪ್ರೌಢಶಾಲೆ ವಿದ್ಯಾರ್ಥಿಗಳು ವಿಭಾಗಿಯ ಮಟ್ಟಕ್ಕೆ ಆಯ್ಕೆ

ಭಟ್ಕಳ : ಸಪ್ಟೆಂಬರ್ ತಿಂಗಳ 19 ತಾರೀಖಿನಂದು ಕಾರವಾರ ಪೋಲಿಸ್ ಗ್ರೌಂಡ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ -ಬಾಲಕರ ಕಬ್ಬಡ್ಡಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವಿಭಾಗೀಯ ಮಟ್ಟಕ್ಕೆ ಭಟ್ಕಳದ ಆನಂದ್ ಆಶ್ರಮ ಕಾನ್ವೆಂಟ್ ಪ್ರೌಢಶಾಲೆ ವಿದ್ಯಾರ್ಥಿಗಳು ಆಯ್ಕೆಯಾದರು.

ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಮಹೇಶ್ ನಾಯ್ಕ್ ಇವರಿಗೆ ಮಕ್ಕಳ ಪಾಲಕರು, ಸಂಸ್ಥೆಯ ಶಿಕ್ಷಕರು, ಪ್ರಾಂಶುಪಾಲರಾದ ಸಿಸ್ಟರ್ ವಿನುತಾ ಡಿಸೋಜಾ ಹಾಗೂ ಆಡಳಿತ ಮಂಡಳಿ ಶ್ಲಾಘಿಸಿದೆ.

About The Author

error: Content is protected !!