October 6, 2025

ಹೊನ್ನಾವರ ತಾಲೂಕಿನ ವಿವಿಧ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಪ್ರಥಮ ದಿನದಂದು ವಿಶೇಷವಾಗಿ ಅಲಂಕರಿಸಲಾಗಿತ್ತು.

ಹೊನ್ನಾವರ : ಸಹ್ಯಾದ್ರಿ ತಟದಲ್ಲಿರುವ ಶ್ರೀ ಕರಿಕಾನ ಪರಮೇಶ್ವರಿ ದೇವಿ, ಗೇರುಸೊಪ್ಪಾದ ಗುತ್ತಿಕನ್ನಿಕಾ ದೇವಿ, ಜಲವಳ್ಳ ಕರ್ಕಿ ಶಿವಮ್ಮಯಾನೆ ದುರ್ಗಾದೇವಿ ಹೊನ್ನಾವರ ಪಟ್ಟಣದ ಮಹಾಸತಿ ದೇವಾಲಯ, ಮಾವಿನಕುರ್ವಾದ ನವದುರ್ಗಾ ದೇವಾಲಯ, ಪಟ್ಟಣದ ಶಾರದಾಂಬ ದೇವಾಲಯ, ಪಟ್ಟಣದ ಕಸಬಾ ಗುಂಡಿಬೈಲ್ ಮಂಕಾಳಮ್ಮ ದೇವಿ, ಉಪ್ಪೋಣಿ ನಾಗ ಚಾಮುಂಡೇಶ್ವರಿ, ನೀಲಗೋಡ್ ಯಕ್ಷಿ ಚೌಡೇಶ್ವರಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೇರವೇರಿತು.

ಉಪ್ಪೋಣಿ ನಾಗ ಚಾಮುಂಡೇಶ್ವರಿ ದೇವಸ್ಥಾನದ ಭಕ್ತರೊಬ್ಬರು ದೇವಿಯ ವಾಹನ ಸಿಂಹಕ್ಕೆ ಬೆಳ್ಳಿಯ ಮುಖ ಕವಚವನ್ನು ಅರ್ಪಿಸಿದರು, ಈ ಸಂದರ್ಬದಲ್ಲಿ ಸೀಮಾ ಮುಖ್ಯಪ್ರಾಣ ದೇವಸ್ಥಾನದ ಅರ್ಚಕರಾದ ಶ್ರೀ ಸುರಾಲು ಚಂದ್ರಶೇಖರ ಭಟ್ಟರು ಉಪಸ್ಥಿತರಿದ್ದರು, ದೇವಸ್ಥಾನದ ಪ್ರಧಾನ ಅರ್ಚಕರಾದ ರವಿ ನಾಯ್ಕ ಪ್ರಥಮ ದಿನದ ಪೂಜಾಕಾರ್ಯಕ್ರಮವನ್ನು ನೇರವೇರಿಸಿದರು, ತಾಲೂಕಿನ ವಿವಿಧಡೆಯಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ವರದಿ ; ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!