October 6, 2025

ಕೆಳಗಿನೂರು ಸಹಕಾರಿ ಸಂಘಕ್ಕೆ 3 ಕೋಟಿಗೂ ಅಧಿಕ ಲಾಭ

ಹೊನ್ನಾವರ: ಪ್ರತಿಷ್ಟಿತ ಪ್ರಾಥಮಿಕ ಕೃಷಿ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಕೆಳಗಿನೂರು ಇದರ 50ನೇ ವಾರ್ಷಿಕ ಸಾಮಾನ್ಯ ಸಭೆಯು ಕೆಳಗಿನೂರಿನ ಒಕ್ಕಲಿಗ ಸಮುದಾಯಭವನದಲ್ಲಿ ಜರುಗಿತು.


ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕ್ರತರು ಸಂಘದ ಅಧ್ಯಕ್ಷರಾದ ಗಣಪಯ್ಯ ಕನ್ಯಾ ಗೌಡ ಇವರು 2025 ಮಾರ್ಚ ಅಂತ್ಯಕ್ಕೆ ಅಂತ್ಯಗೊAಡ ಹಣಕಾಸು ವರ್ಷದಲ್ಲಿ ಸಂಘವೂ ರೂ 3 ಕೋಟಿ 66 ಲಕ್ಷದ 673 ರೂಪಾಯಿ ಲಾಭ ಗಳಿಸಿದ್ದು, ಒಟ್ಟೂ 7494 ಜನ ಸದಸ್ಯರನ್ನು ಹೊಂದಿದೆ. ಸಂಘದ ಶೇರು ಬಂಡವಾಳ ರೂ 3 ಕೋಟಿ 73 ಲಕ್ಷ ಇದ್ದು ಸಂಘದ ಕಾದಿಟ್ಟನಿಧಿ ಮತ್ತು ಇತರೆ ನಿಧಿಗಳು ಸೇರಿ ರೂ 15 ಕೋಟಿ 96 ಲಕ್ಷ ಇದೆ. ಠೇವಣಿ ಸಂಗ್ರಹಣೆ ರೂ 51 ಕೋಟಿ 37ಲಕ್ಷದ 76 ಸಾವಿರ ಇದ್ದು, ಸಂಘದ ಸದಸ್ಯರಿಂದ ಬರತಕ್ಕ ಸಾಲ ಹೊರಬಾಕಿ ಸಾಲ ರೂ 61ಕೋಟಿ 51ಲಕ್ಷ ಎರಡು ಸಾವಿರ ಆಗಿದೆ, ಸಂಘದ ದುಡಿಯುವ ಬಂಡವಾಳ ರೂ 73ಕೋಟಿ 82 ಲಕ್ಷ 56 ಸಾವಿರ ಇದೆ. ಸಂಘದ ಶೇರುದಾರ ಸದಸ್ಯರಿಗೆ ಶೇ 16 ರಂತೆ ಲಾಭಾಂಶವನ್ನು ಘೋಷಿಸಲಾಗಿದೆ ಎಂದು ತಿಳಿಸಿದರು. ಸಂಘದ ಸದಸ್ಯರಿಗೆ ಆರೋಗ್ಯ ಕಾಳಜಿಯಿಂದ ಅವರ ವೈದ್ಯಕೀಯ ಬಿಲ್ ನೀಡುವ ಯೋಜನೆಯನ್ನು ಇಟ್ಟುಕೊಳ್ಳಲಾಗಿದೆ ಎಂದು ಘೋಷಿಸಿದರು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಉಪಾಧ್ಯಕ್ಷರಾದ ವೆಂಕಟೇಶ ಲಕ್ಷ್ಮಣ ನಾಯ್ಕ ನಿರ್ದೇಶಕರಾದ ಅಣ್ಣಪ್ಪ ನರಸ ಗೌಡ , ಅಣ್ಣಪ್ಪ ಗಣಪಯ್ಯ ಗೌಡ, ಗಂಗಾಧರ ಗಣಪಯ್ಯ ಗೌಡ, ಮಂಜುನಾಥ ದೇವ ಗೌಡ, ರಾಜೇಶ ಮಂಜು ಗೌಡ, ಬಸ್ಟ್ಯಾಂವ ಪಾಸ್ಕೋಲ ಫರ್ನಾಂಡಿಸ, ಹನುಮಂತ ರಾಮ ಹಸ್ತರ, ಬುಡ್ಡಿ ಸುಕ್ರ ಗೊಂಡ, ದೇವಿ ಮಾಬ್ರ ಗೌಡ, ಭಾಗ್ಯ ತಿಮ್ಮಪ್ಪ ಗೌಡ, ಗಣೇಶ ಶಂಭು ಶಾಸ್ತ್ರಿ, ಗಣೇಶ ತಿಮ್ಮಪ್ಪ ಗೌಡ, ವಿನೋದ ನಾರಾಯಣ ಗೌಡ ಉಪಸಸ್ಥಿತರಿದ್ದರು. ಸಂಘದ ಮುಖ್ಯಕಾಯನಿರ್ವಾಹಕ ಮಹೇಶ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಾಖಾ ವ್ಯವಸ್ಥಾಪಕ ಸತೀಶ ಗೌಡ ಚಿತ್ತಾರ ವಂದಿಸಿದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!