October 4, 2025

ಉಡುಪಿ ಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ.ಇವರ UK PEARL MART ಆಭರಣ ಮಳಿಗೆಯ ಉದ್ಘಾಟನಾ ಸಮಾರಂಭದ ಪೋಸ್ಟರ್ ಬಿಡುಗಡೆ

ಉಡುಪಿ ;ಅಮೃತೇಶ್ವರಿ ದೇವಸ್ಥಾನ ಕೋಟ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹಾಗು ಗೀತಾನಂದ ಪೌಂಡೇಶನ್ ಪ್ರವರ್ತಕರಾದ ಶ್ರೀಯುತ ಆನಂದ ಸಿ. ಕುಂದರ್ ಅವರು ಅಮೃತೇಶ್ವರಿ ದೇವಸ್ಥಾನದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ರೈತ ಉತ್ಪಾದಕ ಸಂಸ್ಥೆಯಿAದ ರಾಜ್ಯದಲ್ಲೇ ಪ್ರಥಮ ಬಾರಿಗೆ ಆಗುತ್ತಿರುವುದು ಸಂತೋಷದ ವಿಷಯ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀಯುತ ಚಂದ್ರ ಆಚಾರ್ ಕೋಟ, ಶ್ರೀಯುತ ಸುಭಾಷ್ ಶೆಟ್ಟಿ ಗಿಳಿಯಾರು, ಶ್ರೀಯುತ ಗಣೇಶ್ ನೆಲ್ಲಿಬೆಟ್ಟು, ಮೀನುಗಾರ ಸೊಸೈಟಿ ನಿರ್ದೇಶಕರಾದ ಶ್ರೀಯುತ ರವೀಂದ್ರ ತಿಂಗಳಾಯ, ಉಡುಪಿಕಿನಾರ ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಸುದಿನ ಹಾಗೂ ಪ್ರಮುಖರು ಉಪಸ್ಥಿತರಿದ್ದರು

About The Author

error: Content is protected !!