October 5, 2025

ಹೊನ್ನಾವರ ಸೈಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ರಕ್ತದಾನ ಜಾಗೃತಿ ಮತ್ತು ಶಿಬಿರ

ಹೊನ್ನಾವರ: ಪ್ರಭಾತನಗರದ ಸೈಂಟ್ ಇಗ್ನೇಷಿಯಸ್ ಆಸ್ಪತ್ರೆ, ನರ್ಸಿಂಗ್ ಕಾಲೇಜಿನ ಎನ್‌ಎಸ್‌ಸ್ ಘಟಕ ಹಾಗೂ ಬ್ಲಡ್ ಬ್ಯಾಂಕ್ ಕುಮಟಾ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನವನ್ನು ಉತ್ತೇಜಿಸುವ ಉದ್ದೇಶದಿಂದ ರಕ್ತದಾನ ಜಾಗೃತಿ ಮತ್ತು ರಕ್ತದಾನ ಶಿಬಿರ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ. ಜಯಂತ ಮೊಗೇರ ಮಾತನಾಡಿ, ರಕ್ತದಾನದ ವೈದ್ಯಕೀಯ ಮಹತ್ವವನ್ನು ವಿವರಿಸಿ, ಒಂದೇ ಯುನಿಟ್ ರಕ್ತವು ಅನೇಕ ಜೀವಗಳನ್ನು ಉಳಿಸಬಲ್ಲದು ಎಂದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶ್ರೇಷ್ಠ ಉಪಕ್ರಮ ಕೈಗೊಂಡಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಜನರಲ್ ಮತ್ತು ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸಕ ಡಾ. ಜಯಂತ್ ಮೊಗರ್, ಆಡಳಿತಾಧಿಕಾರಿ ಸಿಸ್ಟರ್ ಫಿಲಿಪಾ, ನರ್ಸಿಂಗ್ ಸೂಪರಿಂಟೆAಡೆAಟ್ ಸಿಸ್ಟರ್ ಸುಸನ್, ಸಿಸ್ಟರ್ ಜುಲಿಯಟ್ ಲೋಬೋ, ಉಪಪ್ರಾಚಾರ್ಯ ಸಿಸ್ಟರ್ ಸುಸೈ, ಹಿರಿಯ ಪ್ರಯೋಗಾಲಯ ತಂತ್ರಜ್ಞೆ ಸರಳಾ ಉಪಸ್ಥಿತರಿದ್ದರು. ಶಿಬಿರದಲ್ಲಿ 36 ದಾನಿಗಳು ಪಾಲ್ಗೊಂಡು ಸ್ವಯಂಸೇವಕರು ಮತ್ತು ವೈದ್ಯಕೀಯ ಸಿಬ್ಬಂದಿಯಿAದ ಮಾರ್ಗದರ್ಶನ ಪಡೆದರು.
ಭಾವನಾ ಟಿವಿಗಾಗಿ ವಿಶ್ವನಾಥ ಸಾಲಕೋಡ್ ಹೊನ್ನಾವರ

About The Author

error: Content is protected !!