October 6, 2025

ಶಾಲೆ ಸಮೀಪದ ತಂಬಾಕು ಅಂಗಡಿಗಳಿಗೆ ದಾಳಿ

ಭಟ್ಕಳ: ತಾಲ್ಲೂಕಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶೈಕ್ಷಣಿಕ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯೊಳಗಿನ ತಂಬಾಕು ಮಾರಾಟ ನಿಯಂತ್ರಣಕ್ಕಾಗಿ ಎಂಟು ಸ್ಥಳಗಳಲ್ಲಿ ಏಕಕಾಲದ ಜಂಟಿ ದಾಳಿ ನಡೆಸಲಾಯಿತು.

ಮುಂಡಳಿ ಮತ್ತು ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಅಂಗಡಿಗಳಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದ್ದು, ತಂಬಾಕು ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಿದ್ದ ಅಂಗಡಿಗಳಿಗೆ ಒಟ್ಟು 1400 ರೂಪಾಯಿ ದಂಡ ವಿಧಿಸಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್ ಆರ್., ಆರೋಗ್ಯ ಶಿಕ್ಷಣಾಧಿಕಾರಿ ರಾಮು ಎನ್., ಉಪ ತಹಶೀಲ್ದಾರ ರಜಿನಿ ದೇವಡಿಗ್ ಹಾಗೂ ಆರೋಗ್ಯ, ಪೊಲೀಸ್, ಸಿಡಿಪಿಓ ಮತ್ತು ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆರೋಗ್ಯ ಇಲಾಖೆ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸುವುದಾಗಿ ತಿಳಿಸಿದೆ.

About The Author

error: Content is protected !!