October 4, 2025

ಮುರುಡೇಶ್ವರಲ್ಲಿ ನಾಲ್ವರು ಪ್ರವಾಸಿಗರ ಜೀವ ರಕ್ಷಣೆ – ಜೀವರಕ್ಷಕ ದಳದ ಸಾಹಸಕ್ಕೆ ಮೆಚ್ಚುಗೆ

ಭಟ್ಕಳ: ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದ ನಾಲ್ವರು ಯುವ ಪ್ರವಾಸಿಗರು ಈಜಲು ಸಮುದ್ರಕ್ಕೆ ಇಳಿದು ಬಿರುಸಿನ ಅಲೆಗಳಿಗೆ ಸಿಕ್ಕಿ ಜೀವಾಪಾಯಕ್ಕೆ ಒಳಗಾಗಿದ್ದನ್ನು ಜೀವರಕ್ಷಕ ದಳದ ತೀವ್ರ ಸಾಹಸದಿಂದ ಪಾರು ಮಾಡಲಾಗಿದೆ.

ಬೆಂಗಳೂರಿನ ವೇಣು (19), ವಿನಯ ರಮೇಶ್ ಹಾಗೂ ಅವರಿಬ್ಬರು ಸ್ನೇಹಿತರು ಸಮುದ್ರ ತೀರದಲ್ಲಿ ಈಜಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕರಾವಳಿಯಿಂದ ದೂರ ಸರಿಯುತ್ತಾ ಬಿರುಸಿನ ಅಲೆಗಳಲ್ಲಿ ಸಿಲುಕಿದರು. ಸಂದರ್ಭದ ಗಂಭೀರತೆಯನ್ನು ಗಮನಿಸಿದ ಜೀವರಕ್ಷಕ ದಳದ ರಾಜೇಶ್, ಮುದಾಸಿರ್, ಸಂತೋಷ, ಕರಾವಳಿ ಕಾವಲು ಪಡೆಯ ದರ್ಶನ, ಕರಾವಳಿ ನಿಯಂತ್ರಣ ದಳದ ನಾಗರಾಜ್, ಹೋಮ್ ಗಾರ್ಡ್ ಸುಧಾಕರ ಹಾಗೂ ಸ್ಥಳೀಯ ಯುವಕರು ನೀರಿಗೆ ಧುಮುಕಿ ಹೋರಾಟ ನಡೆಸಿ ನಾಲ್ವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು.

ಘಟನೆ ಕುರಿತು ಮುರುಡೇಶ್ವರ ಠಾಣಾ ಪಿಎಸೈ ಹಣಮಂತ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರವಾಸಿಗರ ನೀರು ತಮಾಷೆಗೆ ಎಚ್ಚರಿಕೆ ಅಗತ್ಯ

ಮಳೆಗಾಲ ಅಂತ್ಯವಾಗುತ್ತಿದ್ದAತೆ ಮುರುಡೇಶ್ವರ ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ಅಜಾಗರೂಕತನದಿಂದ ಸಮುದ್ರಕ್ಕೆ ಇಳಿಯುವ ಯುವಕರ ನಡವಳಿಕೆ ಜೀವಕ್ಕೆ ಸಾಕ್ಷಾತ್ ಅಪಾಯವಾಗಿ ಪರಿಣಮಿಸುತ್ತಿದೆ. ಪ್ರವಾಸಿಗರ ಸುರಕ್ಷತೆಗಾಗಿ ಕಠಿಣ ಮುಂಜಾಗ್ರತಾ ಕ್ರಮ ಜಾರಿಗೊಳಿಸಲು ಜಿಲ್ಲಾಡಳಿತದಿಂದ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.

ಸಮುದ್ರ ಸೌಂದರ್ಯ ಆಕರ್ಷಕವಾದರೂ, ಅಲೆಗಳ ಆಕ್ರೋಶ ಕ್ಷಣದಲ್ಲಿ ಜೀವ ಕಸಿದುಕೊಳ್ಳಬಲ್ಲದು. ಪ್ರವಾಸಿಗರು ಎಚ್ಚರಿಕೆಯಿಂದ ವರ್ತಿಸಬೇಕು, ಎಂದು ಜೀವರಕ್ಷಕ ದಳ ಮನವಿ ಮಾಡಿದೆ.

About The Author

error: Content is protected !!